Advertisement

ಬ್ರಿಟನ್ ನಿಂದ ಕರ್ನಾಟಕಕ್ಕೆ ಬರುತ್ತಿರುವ ಪ್ರಯಾಣಿಕರ ಗಮನಕ್ಕೆ: ಇಲ್ಲಿದೆ ಮಾರ್ಗ ಸೂಚಿಗಳು

08:48 PM Dec 23, 2020 | sudhir |

ಬೆಂಗಳೂರು : ರೂಪಾಂತರ ಹೊಂದಿದ ನೂತನ ಕೋವಿಡ್ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಬ್ರಿಟನ್ ನಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಕೆಲವೊಂದು ಮಾರ್ಗ ಸೂಚಿಗಳನ್ನು ಸರಕಾರ ವಿಧಿಸಲಾಗಿದೆ, ಸೋಂಕು ಹರಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಆ ಮಾರ್ಗಸೂಚಿಗಳನ್ನು ಪ್ರಯಾಣಿಕರು ಅನುಸರಿಸುವುದು ಕಡ್ಡಾಯವಾಗಿದೆ.

Advertisement

ಮಾರ್ಗ ಸೂಚಿಗಳೇನು:
1. ಇನ್ನುಮುಂದೆ ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸುವ ಎಲ್ಲಾ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಆರ್ ಟಿ -ಪಿಸಿಆರ್ ಪರೀಕ್ಷೆಗೆ ನಡೆಸುವುದು ಕಡ್ಡಾಯವಾಗಿದೆ, ಒಂದು ವೇಳೆ ಪರೀಕ್ಷಾ ವರದಿ ನೆಗೆಟಿವ್ ಆಗಿದ್ದಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಯಾಣಿಕರು ಹದಿನಾಲ್ಕು ದಿನಗಳು ಹೋಮ್ ಕ್ವಾರಂಟೈನ್ ಗೆ ಒಳಗಾಗಬೇಕು.

2. ಈಗಾಗಲೇ ಡಿಸೆಂಬರ್ ೨೧ರಿಂದ ಬ್ರಿಟನ್ ನಿಂದ ಬಂದಿರುವ ಎಲ್ಲಾ ಪ್ರಯಾಣಿಕರು ಆರ್ ಟಿ -ಪಿಸಿಆರ್ ಪರೀಕ್ಷೆಯನ್ನು ನಡೆಸಬೇಕು.

3. ಒಂದು ವೇಳೆ ಸೋಂಕು ದೃಢ ಪಟ್ಟಲ್ಲಿ ನಿಗದಿತ ಆಸ್ಪತ್ರೆಯಲ್ಲಿ ಐಸೋಲೇಷನ್ ಗೆ ಒಳಪಡಬೇಕು,

4. ಪಾಸಿಟಿವ್ ವರದಿ ಬಂದಲ್ಲಿ ಅವರ ಮಾದರಿಗಳನ್ನು ಪರೀಕ್ಷೆಗಾಗಿ ನಿಮ್ಹಾನ್ಸ್ ಗೆ ಕಳುಹಿಸಲಾಗುವುದು.

Advertisement

5. ಸೋಂಕು ದೃಢಪಟ್ಟಲ್ಲಿ ಅವರ ಆರೋಗ್ಯದ ಸ್ಥಿತಿಗತಿಗಳ ಆದರದ ಮೇಲೆ ಚಿಕಿತ್ಸೆಯನ್ನು ನೀಡಲಾಗುತ್ತದೆ, ಒಂದು ವೇಳೆ ಹೋಮ್ ಐಸೋಲೇಷನ್ ಮೂಲಕ ಗುಣಪಡಿಸುವುದಾದಲ್ಲಿ ಅಂತಹ ಪ್ರಕರಣಗಳನ್ನು ಮನೆಯಲ್ಲೇ ನಡೆಸುವುದು.

6. ಎಲ್ಲಾ ಪ್ರಯಾಣಿಕರು ತಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸುವುದು, ಆರೋಗ್ಯದಲ್ಲಿ ಏರುಪೇರು ಆದಲ್ಲಿ ಪರೀಕ್ಷೆಗೆ ಒಳಪಡುವುದು ಕಡ್ಡಾಯ.

ವಿಮಾನ ಸಂಚಾರ ನಿರ್ಬಂಧ
ಸರಕಾರದ ಸುತ್ತೋಲೆಯ ಪ್ರಕಾರ ಡಿಸೆಂಬರ್ 21 ರಿಂದ ಡಿ.31 ರ ವರೆಗೆ ಭಾರತದಿಂದ ಬ್ರಿಟನ್ ಹಾಗೂ ಬ್ರಿಟನ್ ನಿಂದ ಭಾರತಕ್ಕೆ ಸಂಚರಿಸುವ ಎಲ್ಲಾ ವಿಮಾನ ಸಂಚಾರಗಳನ್ನು ನಿರ್ಬಂಧಿಸಲಾಗಿದೆ. ಸೋಂಕಿನ ಪ್ರಮಾಣವನ್ನು ನೋಡಿಕೊಂಡು ಮುಂದಿನ ನಿರ್ಧಾರಗಳನ್ನು ಸರಕಾರ ಕೈಗೊಳ್ಳಲಿದೆ.

ಇದನ್ನೂ ಓದಿ:ಜಮ್ಮು ಕಾಶ್ಮೀರದ ಡಿಡಿಸಿ ಗೆಲುವಿನಿಂದ ಬಿಜೆಪಿ ಅಲೆ ಸಾಬೀತು : ನಳಿನ್‌ ಕುಮಾರ್‌ ಕಟೀಲ್‌

ವಿದೇಶಿ ಪ್ರಯಾಣಿಕರಿಗೆ ಕೋವಿಡ್ ವರದಿ ಕಡ್ಡಾಯ
ಬೆಂಗಳೂರು: ರೂಪಾಂತರ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ವಿದೇಶದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಕೊರೊನಾ ಸೋಂಕು ಪರೀಕ್ಷಾ ವರದಿ ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಹೊರ ದೇಶಗಳಿಂದ ರಾಜ್ಯ ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಮತ್ತು ಕಾರವಾರ ಬಂದರುಗಳಿಗೆ ಆಗಮಿಸುವವರು ಪ್ರಯಾಣ ಆರಂಭಕ್ಕೂ 72 ಗಂಟೆ ಒಳಗೆ ನಡೆಸಿರುವ ಕೊರೊನಾ ಸೋಂಕು ಪರೀಕ್ಷಾ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಒಂದು ವೇಳೆ ಪರೀಕ್ಷಾ ವರದಿ ಇಲ್ಲದವರು ವಿಮಾನ ನಿಲ್ದಾಣದಲ್ಲಿಯೇ ಲಭ್ಯವಿರುವ ಪರೀಕ್ಷಾ ಕೇಂದ್ರದಲ್ಲಿ ಉಚಿತ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕಿದೆ.

ಎಕ್ಸ್‌ಪ್ರೆಸ್‌ ಪರೀಕ್ಷೆಗೂ ಅವಕಾಶವಿದ್ದು, ಶುಲ್ಕ ಪಾವತಿಸಬೇಕಾಗುತ್ತದೆ. ಪರೀಕ್ಷಾ ವರದಿ ಬರುವವರೆಗೂ ಹೋಂ ಕ್ವಾರಂಟೈನ್‌ನಲ್ಲಿರಬೇಕು. ಇನ್ನು ನಿಲ್ದಾಣ ಮತ್ತು ಬಂದರಿನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ವಿಮಾನ ನಿಲ್ದಾಣ ಪ್ರಾಧಿಕಾರ ಜತೆಗೂಡಿ ಪ್ರಯಾಣಿಕರ ತಪಾಸಣೆ ಮತ್ತು ಪರೀಕ್ಷೆಗೆ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next