Advertisement

ದೇಗುಲ ಆರಂಭಕ್ಕೆ ಬಾರದ ಮಾರ್ಗಸೂಚಿ

07:16 AM Jun 08, 2020 | Team Udayavani |

ಬೀದರ: ಲಾಕ್‌ಡೌನ್‌ನಿಂದ ಕಳೆದ ಮೂರು ತಿಂಗಳಿಂದ ಬಾಗಿಲು ಮುಚ್ಚಿದ್ದ ಧಾರ್ಮಿಕ ಕೇಂದ್ರಗಳು ಸೋಮವಾರದಿಂದ ತೆರೆಯಲಿದ್ದು, ಭಕ್ತಾದಿಗಳಿಗೆ ದೇವರ ದರ್ಶನ ಲಭ್ಯವಾಗಲಿದೆ.

Advertisement

ಆದರೆ, ಗಡಿ ಜಿಲ್ಲೆ ಬೀದರನಲ್ಲಿ ದತ್ತಿ ಇಲಾಖೆ ವ್ಯಾಪ್ತಿಯ ದೇಗುಲಗಳಲ್ಲಿ ಮಾತ್ರ ಭಕ್ತರ ದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿರುವುದು ಕಂಡು ಬಂದಿಲ್ಲ. ಕೋವಿಡ್ ಸೋಂಕು ತಡೆಗೆ ಸರ್ಕಾರ ಲಾಕ್‌ ಡೌನ್‌ ಘೋಷಿಸಿದ್ದರಿಂದ ಕಳೆದ ಮೂರು ತಿಂಗಳಿಂದ ಮಠ, ಮಂದಿರ, ಚರ್ಚ್‌, ದರ್ಗಾ ಸೇರಿದಂತೆ ಪ್ರಾರ್ಥನಾ ಮಂದಿರಗಳಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ಲಾಕ್‌ ಡೌನ್‌ ತೆರವುಗೊಳಿಸಿದ ಹಿನ್ನಲೆಯಲ್ಲಿ ಜೂ. 8ರಿಂದ ದರ್ಶನಕ್ಕೆ ಅವಕಾಶ ಕಲ್ಪಿಸಿರುವ ಸರ್ಕಾರ, ದರ್ಶನ ವೇಳೆ ಕೊರೊನಾ ನಿಯಂತ್ರಣಕ್ಕಾಗಿ ದತ್ತಿ ಇಲಾಖೆಯ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಜಾತ್ರೆ, ವಿಶೇಷ ಪೂಜೆ ಮತ್ತು ಇತರ ಸೇವೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಆದರೆ, ನಗರದ ನರಸಿಂಹ ಝರಣಾ, ಪಾಪನಾಶಿನಿ ಸೇರಿದಂತೆ ಜಿಲ್ಲೆಯ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಈವರೆಗೆ ಮಾರ್ಗಸೂಚಿಗಳಂತೆ ಯಾವುದೇ ವ್ಯವಸ್ಥೆ ಮಾಡಿಕೊಂಡಿಲ್ಲ. ಅಧಿಕಾರಿಗಳ ಮಾಹಿತಿ ಪ್ರಕಾರ ಈವರೆಗೆ ದತ್ತಿ ಇಲಾಖೆಯಿಂದ ಯಾವುದೇ ಮಾರ್ಗಸೂಚಿಯೇ ಕೈ ಸೇರಿಲ್ಲ. ಮೇಲಾಧಿಕಾರಿಗಳ ಆದೇಶ, ಮಾಹಿತಿಗಾಗಿ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರು ಸಾಮಾಜಿಕ ಅಂತರದಲ್ಲಿ ಪ್ರವೇಶಿಸಲು ಅನುಕೂಲವಾಗುವಂತೆ ವ್ಯವಸ್ಥೆ, ಥರ್ಮಲ್‌ ಸ್ಕ್ರೀನಿಂಗ್‌ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ಸದ್ಯ ಅಂಥ ಯಾವುದೇ ವ್ಯವಸ್ಥೆಗಳೇ ಇಲ್ಲ. ಬೀದರ ಗಡಿ ಜಿಲ್ಲೆ ಆಗಿರುವುದರಿಂದ ಮಹಾರಾಷ್ಟ್ರ ಮತ್ತು ತೆಲಂಗಾಣದ ಭಕ್ತರು ಆಗಮಿಸುವ ಹಿನ್ನಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next