Advertisement

ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರೆಗೆ ದಾಖಲು

04:29 PM Dec 18, 2024 | Team Udayavani |

ಬೆಳಗಾವಿ: ಅತಿಥಿ ಶಿಕ್ಷಕರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅತಿಥಿ ಶಿಕ್ಷಕರೊಬ್ಬರು ಅಸ್ವಸ್ಥರಾದ ಘಟನೆ ಡಿ.18ರ ಬುಧವಾರ ನಡೆದಿದೆ.

Advertisement

ಬೆಳಗಾವಿಯ ಸುವರ್ಣ ವಿಧಾನಸೌಧಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನ ಹಿನ್ನೆಲೆ ಸುವರ್ಣ ಗಾರ್ಡನ್ ಟೆಂಟ್ ನಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಪ್ರತಿಭಟನೆ ಹಿನ್ನೆಲೆ ಬೆಳಿಗ್ಗೆಯಿಂದ ಉಪವಾಸವಿದ್ದ ಅತಿಥಿ ಶಿಕ್ಷಕ ಅಸ್ವಸ್ಥಗೊಂಡು, ಕೂಡಲೇ ಸ್ಥಳದಲ್ಲಿದ್ದ ಆಂಬ್ಯುಲೆನ್ಸ್ ಮೂಲಕ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಪ್ರತಿಭಟನೆ ನಿರತ ಅತಿಥಿ ಶಿಕ್ಷಕರು, ಶಿಕ್ಷಣ ಸಚಿವರ ಸ್ಥಳಕ್ಕೆ ಬರುವಂತೆ ಅತಿಥಿ ಪಟ್ಟು ಹಿಡಿದಿದ್ದಾರೆ. ಶಿಕ್ಷಕ ಸಚಿವರ ಸ್ಥಳಕ್ಕೆ ಬರದೇ ಇದ್ದರೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆಯನ್ನು ಕೂಡಾ ನೀಡಿದ್ದಾರೆ.

Advertisement

ಕಡ್ಡಾಯ ಮೆರಿಟ್ ಕೈಬಿಟ್ಟು ಸೇವಾ ಹಿರಿತನಕ್ಕೆ ಆದ್ಯತೆ ನೀಡಬೇಕು, ವರ್ಷಕ್ಕೆ 1-2 ತುರ್ತು ಸಾಂದರ್ಭಿಕ ರಜೆ, ಸೇವಾ ಪ್ರಮಾಣ ಪತ್ರ ನೀಡಬೇಕು. ʼಅತಿಥಿ ಶಿಕ್ಷಕʼ ಎಂಬ ಪದನಾಮ ತೆಗೆದುಹಾಕುವಂತೆ ಅತಿಥಿ ಶಿಕ್ಷಕರು ಒತ್ತಾಯಿಸಿದ್ದಾರೆ.

ಅದರೊಂದಿಗೆ ವಿಶೇಷ ಭತ್ಯೆ, ವಿಶೇಷ ತರಬೇತಿ ಸೇರಿ ಹಲವು ಬೇಡಿಕೆಗೆ ಆಗ್ರಹಿಸಿ ಅತಿಥಿ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next