Advertisement

ಸಂಕ್ರಾಂತಿಗೆ ಸಿಹಿ ಅಲ, ವಿಷ ಕೊಟ್ಟ ಸರ್ಕಾರ : ಅತಿಥಿ ಉಪನ್ಯಾಸಕರ ಆಕ್ರೋಶ

04:12 PM Jan 18, 2022 | Team Udayavani |

ಬಾಗಲಕೋಟೆ: ಕಳೆದ 38 ದಿನಗಳಿಂದ ತರಗತಿ ಬಹಿಷ್ಕರಿಸಿ ಹೋರಾಟ ನಡೆಸುತ್ತಿರುವ ಅತಿಥಿ ಉಪನ್ಯಾಸಕರಿಗೆ ನಾವು ಸಂಕ್ರಾಂತಿಯ ಸಿಹಿ ನೀಡಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವರು
ಹೇಳಿದ್ದಾರೆ. ವಾಸ್ತವದಲ್ಲಿ ಸರ್ಕಾರ ನಮಗೆ ಸಿಹಿ ಸುದ್ದಿ ಕೊಟ್ಟಿಲ್ಲ. ಬದಲಾಗಿ ಸಂಕ್ರಾಂತಿಗೆ ವಿಷ ಕೊಟ್ಟಿದೆ ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ ಮನಿಗಾರ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿಲ್ಲ. ಪಶ್ಚಿಮ ಬಂಗಾಳ, ಪಂಜಾಬ್‌ ಮುಂತಾದ ರಾಜ್ಯಗಳಲ್ಲಿ
ಇರುವಂತೆ ನಮ್ಮಲ್ಲೂ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕೊಡಬೇಕೆಂದು ಹೋರಾಟ ಮಾಡುತ್ತಿದ್ದೇವೆ. ಆದರೆ, ಸರ್ಕಾರ ಸಿಹಿ ಸುದ್ದಿ ಕೊಟ್ಟಿದ್ದೇವೆ ಎಂದು ಹೇಳಿ, 7250ಕ್ಕೂ ಹೆಚ್ಚು
ಅತಿಥಿ ಉಪನ್ಯಾಸಕರ ಬದುಕಿಗೆ ಬರೆ ಇಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ 430 ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಗಳಲ್ಲಿ ಸುಮಾರು 14500 ಜನ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದು ಸೇವಾ ಭದ್ರತೆ ಇಲ್ಲದೇ ಇರುವದರಿಂದ ಅನಿರ್ದಿಷ್ಟವಾಗಿ ತರಗತಿಗಳನ್ನು ಬಹಿಷ್ಕರಿಸಿ ಧರಣಿ ಸತ್ಯಾಗ್ರಹ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡದೇ ಗೌರವ ಧನ ಹೆಚ್ಚಿಸಿ 14500 ಜನ ಅತಿಥಿ ಉಪನ್ಯಾಸಕರನ್ನು ವಂಚಿಸಿದ್ದಾರೆ ಎಂದು ಕಿಡಿಕಾರಿ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸರಕಾರ, ಸಚಿವರು ಚೆಲ್ಲಾಟವಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ : ಸ್ಮಾರ್ಟ್‌ ಸಿಟಿಯಲ್ಲಿ ಇನ್ನು ಸೈಕಲ್‌ ಸವಾರಿ : ಪ್ರಾಯೋಗಿಕವಾಗಿ 8 ನಿಲ್ದಾಣಗಳು ಸಜ್ಜು

ಕಳೆದ 15-20 ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಅತಿಥಿ ಉಪನ್ಯಾಸಕರಿಗೆ ಸರಕಾರ ಸೇವಾ ಭದ್ರತೆ ನೀಡದೇ ಮೀನಮೇಷ ಎನಿಸುತ್ತಿರುವುದು ಖಂಡನೀಯ. ಕೂಡಲೇ ಸರಕಾರ ಸೇವೆಯನ್ನು ಕಾಯಂ ಮಾಡಿ ಸೇವಾ ಭದ್ರತೆ ನೀಡಬೇಕು. ಅಲ್ಲಿಯ ವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು. ಸಂಘಟನೆಯ ಮಲ್ಲಿಕಾರ್ಜುನ ಗೌಡರ, ಶಶಿಕಲಾ ಜೋಳದ ಮಾತನಾಡಿ, 8 ಗಂಟೆಗಳ ಕಾರ್ಯಭಾರವನ್ನು 15 ಗಂಟೆಗೆ ವಿಸ್ತರಿಸಿ, ಕೇವಲ 3 ಸಾವಿರ ರೂ. ಗೌರವ ಧನ ಹೆಚ್ಚಳ ಮಾಡಿ ಶೇ. 50ರಷ್ಟು ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ಕೈಬಿಡುವ ಹುನ್ನಾರ ನಡೆದಿದೆ ಎಂದರು. ಸಂಘಟನೆಯ ಪ್ರಮುಖರಾದ ನಂದಿನಿ, ಪಾಂಡುರಂಗ ಜಾಧವ, ಡಾ|ಪಿ.ಕೆ. ಕಾರಭಾರಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next