Advertisement
ಸುಮಾರು 15 ವರ್ಷಕ್ಕೂ ಹಿಂದೆ ಈ ಕಟ್ಟಡ ನಿರ್ಮಾಣವಾಗಿದ್ದು ಸೂಕ್ತ ನಿರ್ವಹಣೆ ಇಲ್ಲದಂತಾ ಗಿದೆ. 6ನೇ ಬ್ಲಾಕ್‌ನಲ್ಲಿ 12 ಸಮುಚ್ಚಯಗಳಿವೆ. 10 ಬ್ಲಾಕ್‌ನಲ್ಲಿ 120 ಸಮುಚ್ಚಯಗಳಿವೆ. ಈ ಬಗ್ಗೆ ಶೀಘ್ರದಲ್ಲಿ ಕ್ರಮ ತೆಗೆದುಕೊಂಡರಷ್ಟೇ ಪರಿಹಾರ ಸಾಧ್ಯವಾಗಲಿದೆ ಇಲ್ಲದಿದ್ದರೆ ಕಟ್ಟಡಕ್ಕೆ ಮತ್ತಷ್ಟು ಹಾನಿಯುಂಟಾಗಲಿದೆ.
ಪೊಲೀಸರಿಗೆ ಸುಸಜ್ಜಿತ ವಸತಿ ಗೃಹಗಳನ್ನು ನಿರ್ಮಾಣ ಮಾಡಿದ್ದರೂ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದ ಕಾರಣ ಸಮಸ್ಯೆ ಎದುರಾಗು ತ್ತಿದೆ. ಇಲ್ಲಿ 120 ವಸತಿ ಸಮುಚ್ಚಯಗಳಿದ್ದು, 104 ಮಂದಿ ವಾಸವಾಗಿದ್ದಾರೆ. ಆರನೇ ಬ್ಲಾಕ್ ಸಮುಚ್ಚಯ ದಲ್ಲಿಯೂ ವಾಸವಿದ್ದಾರೆ. ಪೈಂಟಿಂಗ್ ಇಲ್ಲ
ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ವತಿಯಿಂದ ಈ ಕಟ್ಟಡ ನಿರ್ಮಾಣ ಗೊಂಡಿದ್ದು, ಅನಂತರದ ದಿನಗಳಲ್ಲಿ ಬಣ್ಣ ಬಳಿಯುವ ಕೆಲಸವೂ ನಡೆದಿಲ್ಲ. ಈ ಕಾರಣದಿಂದಾಗಿ ಕಟ್ಟಡದ ಮಹಡಿಯಿಂದ ಕಲ್ಲುಹುಡಿಗಳು ಉದುರುತ್ತಿವೆ.
Related Articles
Advertisement
ಎದ್ದು ಕಾಣುತ್ತಿವೆ ಸರಳುಗಳುಸಿಮೆಂಟ್ ಕಾಂಕ್ರೀಟ್‌ಗಳು ಕೆಳಕ್ಕೆ ಬಿದ್ದು, ಮೇಲ್ಗಡೆ ಯಲ್ಲಿ ಅಳವಡಿಸಿರುವ ಸರಳುಗಳು ಎದ್ದು ಕಾಣುತ್ತಿವೆ. ಮಳೆಗಾಲಕ್ಕೆ ಇನ್ನೂ 4 ತಿಂಗಳು ಸಮಯಾವಕಾಶ ವಿದ್ದು, ಅಷ್ಟರೊಳಗೆ ಇದರ ದುರಸ್ತಿ ಕಾಮಗಾರಿ ನಡೆಯಬೇಕಿದೆ. ಇಲ್ಲದಿದ್ದರೆ ಮಳೆಗಾಲದಲ್ಲಿ ವಾಸಿಸಲು ಅಯೋಗ್ಯವಾಗುವ ಸಾಧ್ಯತೆಗಳಿವೆ. ಈ ಹಿಂದೆಯೂ ಸೋರಿಕೆ
ಮಣಿಪಾಲದಲ್ಲಿ ಈ ಹಿಂದೆಯೂ 7ನೇ ಬ್ಲಾಕ್‌ನಲ್ಲಿ ಇಂತಹ ಘಟನೆ ನಡೆದಿತ್ತು. ಮೇಲಧಿಕಾರಿ ಗಳು ಪರಿಶೀಲನೆ ನಡೆಸಿದ ಬಳಿಕ ಅದನ್ನು ದುರಸ್ತಿಪಡಿಸಲಾಗಿತ್ತು. ಸೂಕ್ತ ಅನುದಾನ ಕೊರತೆ
ಮಣಿಪಾಲದ ಪೊಲೀಸ್ ವಸತಿಗೃಹಗಳ ನಿರ್ವಹಣೆಗೆ ಸೂಕ್ತ ಅನುದಾನದ ಕೊರತೆಯೂ ಎದುರಾಗಿದೆ. ಸಣ್ಣ ಪುಟ್ಟ ಸಮಸ್ಯೆಗಳು ನಿವಾರಣೆಯಾಗು ತ್ತವೆಯಾದರೂ ಪೈಟಿಂಗ್ ಸಹಿತ ಇತರ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬೇಕಾಗಿರುವ ಕಾರಣ ವಿಳಂಬವಾಗಲು ಕಾರಣವಾಗುತ್ತಿವೆ ಎನ್ನುತ್ತವೆ ಪೊಲೀಸ್ ಇಲಾಖೆ ಮೂಲಗಳು. ಸೂಕ್ತ ಕ್ರಮ
ಪೊಲೀಸ್ ವಸತಿ ಸಮು ಚ್ಚಯಗಳ ನಿರ್ವಹಣೆ ಬಗ್ಗೆ ಡಿವೈಎಸ್‌ಪಿ ಹಾಗೂ ಎಸ್‌ಎಚ್‌ಒಗಳು ಪ್ರತೀ ವಾರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಣಿಪಾಲ ವಸತಿ ಸಮುಚ್ಚಯದಲ್ಲಿ ಸೋರಿಕೆಯಾಗುತ್ತಿರುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
-ಎನ್.ವಿಷ್ಣುವರ್ಧನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಡುಪಿ