Advertisement

ಕೃಷಿ ಪ್ರೀತಿಯ ದೊರೆ ಕೆರೆ ಕಟ್ಟಿಸಿದ !

02:27 PM Feb 03, 2018 | |

* ಅರಸ ಅಂದಾಕ್ಷಣ ನಮಗೆ ನೆನಪಾಗೋದು ಏನು?
 ದಂಡಯಾತ್ರೆ, ಯುದ್ಧ
* ಅರಸ ಅಂದಾಕ್ಷಣ ನೆನಪಾಗೋದು ಏನು?
ವೈಭೋಗ, ಮಂತ್ರಿ, ರಾಣಿ, ಅವರ ಪರಿವಾರ, ಜೊತೆಗೆ ಇರುವ ಸೈನಿಕರು

Advertisement

ಆದರೆ, ಇಲ್ಲಿ ಅರಸ ಎಂದಾಕ್ಷಣ ಕೆರೆ ನೆನಪಾಗಬೇಕು!
ಏಕೆಂದರೆ ರಾಜ್ಯದಲ್ಲೇ ಅತಿದೊಡ್ಡ ಕೆರೆಗಳಲ್ಲಿ ಒಂದಾದ ಗುಡ್ಡತಟಾಕ ಕಟ್ಟಿಸಿದ್ದು ಅರಸರೇ. ಇಡೀ ಅರಸ ದಂಪತಿ ಕೃಷಿ ಪ್ರೀತಿಗೋಸ್ಕರ 161 ಎಕರೆ ವಿಸ್ತೀರ್ಣದ ಇಂದಿನ ಗುಡ್ನಾಪುರ ಕೆರೆಯ ನಿರ್ಮಾಣ ಮಾಡಿದ್ದಾರೆ. ನಾಲ್ಕು ಹಳ್ಳಿಗಳ ರೈತರ ಭತ್ತದ ಬೇಸಾಯಕ್ಕೆ ನೆರವಾಗುವ ಬೃಹತ್‌ ಕೆರೆ ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.  ಅಂದಿನ ವೈಜಯಂತಿ ರಾಜ್ಯದ ಕೆರೆ ಈಗಲೂ ಬನವಾಸಿಯ ರೈತಾಪಿ ಜನರಿಗೆ ಅಭಯ ನೀಡಿದೆ.

ಬನವಾಸಿ, ಕನ್ನಡಿಗರ ಪ್ರಥಮ ರಾಜಧಾನಿ. ಇಲ್ಲಿ ಆಳಿದ ದೊರೆ ಮಯೂರ ವರ್ಮನ ಹೆಸರು ಅಜರಾಮರ. ಇದೇ ಅರಸು ಕುಟುಂಬದ ರವಿವರ್ಮನ (ಕ್ರಿ.ಶ 497ರಿಂದ 537) ಸಾಹಸ ಕಥೆ ಕೂಡ ಅಚ್ಚರಿ ಮೂಡಿಸುತ್ತದೆ. ಸ್ವತಃ ಧನುರ್ವಿದ್ಯೆ ಪಂಡಿತ, ನರ್ತನ ಚತುರ ರಾಜ ಹಾಗೂ ಆತನ ರಾಣಿ ಕೃಷಿ, ಪರಿಸರ, ಸಾಂಸ್ಕೃತಿಕ ಪ್ರೀತಿ ಒಳಗೊಂಡಿದ್ದವರು. ಕದಂಬ ವಂಶದ ಸ್ಥಾಪಕನಾಗಿ ಮಯೂರ ಶರ್ಮ ವರ್ಮನಾಗಿ ಬದಲಾದರೆ, ರವಿ ವರ್ಮ ಏನು ಮಯೂರ ತನ್ನ ರಾಣಿಯ ಪರಿಸರ ಹಗೂ ಕೃಷಿ ಪ್ರೀತಿಗೆ ಗುಡ್ಡತಟಾಕ ಎಂಬ ಕೆರೆ ಒಂದನ್ನು ಕಟ್ಟಿಸಿದ. 

ಅಂದಿನ ಗುಡ್ಡತಟಾಕ ಎಂದರೆ ಇಂದಿನ ಗುಡ್ನಾಪುರ ಕೆರೆ ಸುತ್ತಲೂ  ಗುಡ್ಡ, ಕೃಷಿ ಭೂಮಿ ಇನ್ನೊಂದಡೆ ವಿಶಾಲವಾದ ಕೆರೆ ಏರಿ. ಕೆರೆಯ ಏರಿಯ ಮೇಲೆ ವಾಹನಗಳ ಸಂಚಾರ. ದಂಡೆಯ ಪಕ್ಕವೇ ಕೆರೆಯೊಳಗೆ ಬಂಗಾರೇಶ್ವರ ದೇವಸ್ಥಾನ. ಇದು ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪದ ಬಂಗಾರಪ್ಪ ಅವರ ಆರಾದ್ಯ ದೈವ. ಮಳೆಗಾಲದಲ್ಲಿ ಇಡೀ ದೇಗುಲ ನೀರಲ್ಲಿ ಮುಳಗುತ್ತದೆ. 

Advertisement

168 ಎಕರೆ ವಿಸ್ತಾರದ ಕೆರೆ ಮೂರು ಗ್ರಾಮಗಳಿಗೆ ಅನುಕೂಲ ಆಗಲೆಂದು ಕಟ್ಟಿಸಿದ ಎಂದೇ ಪ್ರತೀತಿ. 6ನೇ ಶತಮಶನದಲ್ಲಿ ನಿರ್ಮಾಣಗೊಂಡ ಕೆರೆ ಇದು. 

ಸುಮಾರು  5ನೇ ಶತಮಾನದಲ್ಲಿ ಕಟ್ಟಿದ ಕೆರೆ ಇಂದಿಗೂ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿದೆ. ಅಂದು ರಾಣಿಯ ಕೃಷಿ ಪ್ರೇಮ ಇಂದಿಗೂ ರೈತರ ಮೊಗದ ಸಂತಸಕ್ಕೆ ಕಾರಣವಾಗುತ್ತಿದೆ. ರಾಜಾ ರವಿವರ್ಮನ ಸಾಂಸ್ಕೃತಿಕ ಮನೋಸ್ಥಿತಿ ಹೇಗಿತ್ತೆಂದರೆ, ಇದೇ ಕೆರೆಯ ತಟದಲ್ಲಿ ಒಂದು ತಿಂಗಳುಗಳ ಕಾಲ ವಸಂತೋತ್ಸವ ನಡೆಯಿತ್ತಿತ್ತು. ಸಾಹಿತ್ಯ, ಸಂಗೀತ, ನೃತ್ಯ ಕಲೆಗಳ ಆರಾಧನೆ ಇಲ್ಲಿ ಆಗುತ್ತಿತ್ತು. ಈಗ ರಾಜ್ಯ ಸರಕಾರ ಬನವಾಸಿ ಕದಂಬೋತ್ಸವವನ್ನು ಬನವಾಸಿಯಲ್ಲಿ ಫೆ 2 ಹಾಗೂ 3ರಂದು ನಡೆಸುತ್ತಿದೆ. 

ರವಿ ವರ್ಮ ಕಟ್ಟಿಸಿದ ಕೆರೆಯ ದಂಡೆಯ ಮೇಲೇ ಅರ್ಧ ಕಿಮಿ ನಡೆದರೆ ಸಿಗೋದೇ ರಾಣಿ ನಿವಾಸ. ರವಿವರ್ಮನ ಬೇಸಗೆ ಅರಮನೆ ಆಗಿತ್ತೆಂಬ ಕುರುಹುಗಳೂ ಅಲ್ಲಿವೆ.  ಗುಡ್ನಾಪುರದ ಅರಮನೆಯ ಅವಶೇಷಗಳೂ ಇವೆ. ರಾಣಿಯ ಅಂತಃಪುರ ಕೂಡ ಇಲ್ಲಿ ವಿಶೇಷವಾಗಿದೆ. ಜಂಬಿಟ್ಟಿಗೆಯಿಂದ ನಿರ್ಮಾಣ ಮಾಡಿದ ಈ ರಾಣಿ ನಿವಾಸ. ಅಂದು ಬನವಾಸಿಯ ಮತ್ತೂಂದು ಕೇಂದ್ರ ಆಗಿತ್ತಂತೆ. ಈಶ್ವರನ ಮೂರ್ತಿ, ನಂದಿ, ಗೊಮ್ಮಟೇಶ್ವರ ಮೂರ್ತಿಗಳು ಕೂಡ ಇವೆ. ಇಲ್ಲೇ ವೀರಭದ್ರ ಹಾಗೂ ಮನ್ಮಥ ದೇವಾಲಯ ಕೂಡ ಇತ್ತೆಂದು ಇತಿಹಾಸ ಹೇಳುತ್ತದೆ. 

ಸುಮಾರು ಎರಡು ಎಕರೆ ವಿಸ್ತಾರದ ಈ ನಿವಾಸದ ಆವರಣ, 70ರ ದಶಕದ ಉತVನನದಿಂದ ಹೊರಗೆ ಬಂದದ್ದು. ಇಲ್ಲೇ ರವಿವರ್ಮ ಸಂಸ್ಕೃತ ಲಿಪಿಯಲ್ಲಿ ಕೊರೆಸಿದ ಸ್ತಂಬ ಶಾಸನ ಕೂಡ ಇದೆ. ಇದಕ್ಕೆ ಗೋಪುರ ನಿರ್ಮಾಣ ಮಾಡಿ ರಕ್ಷಣೆ ಮಾಡಲಾಗುತ್ತಿದೆ. ಈ ಶಾಸನದಲ್ಲಿ ಗುಡ್ಡತಟಾಕ ನಿರ್ಮಾಣ, ನಾಲ್ಕು ಹಳ್ಳಿಗಳಿಗೆ ಕೆರೆ ನಿರ್ಮಾಣದ ಉಲ್ಲೇಖ, ವಸಂತೋತ್ಸವ,  ಮುಖ್ಯವಾಗಿ ಕದಂಬ ವಂಶದ ವಂಶ ವೃಕ್ಷ ಕೂಡ ಇಲ್ಲಿದೆ. ಆ ಹಿನ್ನಲೆಯಲ್ಲೇ ಶಾಸನಕ್ಕೆ ಇಷ್ಟು ಮಹತ್ವ ಬಂದಿದೆ ಎನ್ನುತ್ತಾರೆ ಇತಿಹಾಸ ತಜ್ಞ ಲಕ್ಷಿ$¾àಶ ಹೆಗಡೆ ಸೋಂದಾ.

ಹಾಗೆ ನೋಡಿದರೆ ಈ ಗುಡ್ನಾಪುರ ಅರಮನೆ ರಕ್ಷಣೆಗೆ ಪ್ರಾಚ್ಯವಸ್ತು ಇಲಾಖೆ ಕಾವಲಿಗೆ ನಿಂತಿದೆ. ಆದರೂ,  ದೇಗುಲ, ಅರಮನೆಯ ಅವಶೇಷಗಳು ಮಳೆಗೆ ಬಿಸಿಲಿಗೆ ಹಾಳಾಗುತ್ತಿದೆ. ಇನ್ನಷ್ಟು ವಿವರಗಳ ಜೊತೆ ಇದರ ಮಹತ್ವ, ರವಿ ವರ್ಮನ ಕಾರ್ಯ ಸಾಧನೆ ಸಾರುವ ಫ‌ಲಕಗಳು ಬರಬೇಕಿದೆ. ಅಲ್ಲಿಗೆ ಹೋಗುವ ದಾರಿ ಫ‌ಲಕಗಳನ್ನೂ ಹಾಕಬೇಕಿದೆ.

ಇಂತಿಪ್ಪ ಗುಡ್ನಾಪುರದಲ್ಲಿನ ಕೆರೆಯ ಹೂಳೆತ್ತಲು ಇದೀಗ ಮನುವಿಕಾಸ ಎನ್ನುವ ಸಂಸ್ಥೆ ಸರಕಾರದ ಅನುಮತಿಯ ಮೇರೆಗೆ ಮುಂದಾಗಿದೆ. ದೊರೆಯ ಕೃಷಿ ಪ್ರೀತಿಗೆ ಸಾಕ್ಷಿ$ಯಾದ ಕೆರೆಯ, ಅರಮನೆಯ ರಕ್ಷಣೆ ಜವಬ್ದಾರಿ ಪ್ರಜಾಪ್ರಭುತ್ವದ ಅರಸರ ಜವಾಬ್ದಾರಿಯೂ ಆಗಿದೆ.

ರಾಘವೇಂದ್ರ ಬೆಟ್ಟಕೊಪ್ಪ 

Advertisement

Udayavani is now on Telegram. Click here to join our channel and stay updated with the latest news.

Next