ಗುಡಿಬಂಡೆ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡ ದು ಎನ್ನುವಂತೆ ಜಿಲ್ಲೆಯಲ್ಲಿ ಗುಡಿಬಂಡೆ ತಾಲೂಕು ಚಿಕ್ಕದಾದರೂ ಐತಿಹಾಸಿಕ, ಸಾಂಸ್ಕೃತಿಕ, ಪ್ರವಾ ಸೋದ್ಯಮಕ್ಕೆ ಗುಡಿಬಂಡೆ ಪ್ರವಾಸಿಗರ ಪಾಲಿಗೆ ಸ್ವರ್ಗ ವಾಗಿದೆ.
ಈಗಾಗಲೇ ಹಲವು ಸಿನಿಮಾ, ಧಾರವಾಹಿ ಚಿತ್ರೀಕರಣ ಈ ಭಾಗದಲ್ಲಿ ನಡೆದು ಗುಡಿಬಂಡೆ ರಾಜ್ಯ ಮಟ್ಟದಲ್ಲಿ ತಾಣವಾಗಿ ಗಮನ ಸೆಳೆಯುತ್ತಿದೆ. ತಾಲೂಕಿನ ಸುತ್ತಮುತ್ತಲಿನಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಐತಿಹಾಸಿಕ ಹಿನ್ನೆಲೆಯುಳ್ಳ 7 ಸುತ್ತಿನ ಕೋಟೆಯಿಂದ ಆವೃತವಾಗಿರುವ ಸುರಸದ್ಮಗಿರಿ ಬೆಟ್ಟ. ಹಿಂದಿನ ಕಾಲದಲ್ಲಿಯೇ ಭಾರತ ಭೂಪಟ ಹೋಲುವಂತೆ ನಿರ್ಮಿಸಿರುವ ಅಮಾನಿ ಬೈರಸಾಗರ ಕೆರೆ, ಅತ್ಯಂತ ಪುರಾತನ ಜೈನ ಬಸದಿಗಳು, ಪಟ್ಟಣಕ್ಕೆ ಸಮೀಪದಲ್ಲಿಯೇ ನವಿಲು ಜಿಂಕೆಗಳ ವಾಸ, ಜತೆಗೆ ಪಕ್ಕದ ತಾಲೂಕಿನ ವಾಟದಹೊಸಹಳ್ಳಿ ಕೆರೆ, ಗುಡಿಬಂಡೆ ಸನಿಹದಲ್ಲಿರುವ ಆವುಲಬೆಟ್ಟ ಹೀಗೆ ಅನೇಕ ಸ್ಥಳಗಳು ತನ್ನ ಪ್ರಾಕೃತಿಕ ಸೊಬಗಿನೊಂದಿಗೆ ಕಂಗೊಳಿಸುತ್ತಿದೆ.
ವಾರಾಂತ್ಯಕ್ಕೆ ಪ್ರವಾಸಿಗರ ದಂಡು: ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನತೆ ಈ ಪ್ರದೇಶಗಳನ್ನು ವೀಕ್ಷಿಸಲು ಬರುತ್ತಿರುವುದು ಸಾಮಾನ್ಯವಾಗಿದೆ. ಗುಡಿಬಂಡೆ ಸುತ್ತಮುತ್ತಲಿನ ಪರಿಸರದ ಸೌಂದರ್ಯ ಇಡೀ ರಾಜ್ಯದ ಜನರನ್ನು ಸೆಳೆಯುತ್ತಿದೆ ಎನ್ನಲಾಗುತ್ತಿದೆ.
ಭವ್ಯ ಸ್ವಾಗತ ಕೋರುವ ಬೈರಸಾಗರ ಕೆರೆ: ಇನ್ನೂ ಗುಡಿಬಂಡೆಗೆ ಆಗಮಿಸುತ್ತಿದ್ದಂತೆ ಪ್ರಯಾಣಿಕರಿಗೆ ಆಹ್ವಾನ ನೀಡುವಂತೆ ಕಾಣಿಸುವುದು ಅಮಾನಿ ಬೈರಸಾಗರ ಕೆರೆ. ಕೆರೆ ಏರಿ ಮೇಲೆ ಪ್ರಯಾಣಿಸುವುದೇ ಒಂದು ರೀತಿಯ ವಿಭಿನ್ನ ಅನುಭವ. ಕೆರೆ ಬಳಿಯೇ ಸ್ಯಾಂಡಲ್‌ವುಡ್‌ನಲ್ಲಿ ಹಿಟ್ ಹೊಡೆದ ಮೊನಾಲಿಸಾ ಚಿತ್ರದ ಓ ಪ್ರಿಯತಮೆ ಇದು ನ್ಯಾಯಾನಾ ಎಂಬ ಗೀತೆಯ ಚಿತ್ರೀಕರಣವೂ ನಡೆದಿದೆ. ಜತೆಗೆ ದಳಪತಿ ಚಲನಚಿತ್ರ ಹಾಗೂ ರಾಮಾಚಾರಿ ಕನ್ನಡದ ಧಾರವಾಹಿಗಳನ್ನೂ ಚಿತ್ರೀಕರಿಸಲಾಗಿದ್ದು, ಇತ್ತೀಚೆಗೆ ನಟ ಚರಣ್ ಅಭಿನಯದ ಗುರುಶಿಷ್ಯರು ಸಿನಿಮಾ ಈ ಭಾಗದಲ್ಲಿ ಭಾಗಶಃ ಚಿತ್ರೀಕರಣಗೊಂಡಿತ್ತು. ರಾಜ್ಯದಲ್ಲಿಯೇ ಅತ್ಯಂತ ಚಿಕ್ಕ ತಾಲೂಕುಗಳಲ್ಲಿ ಒಂದಾದ ಗುಡಿಬಂಡೆಯನ್ನು ರಾಜ ಮಹಾರಾಜರು ಸೇರಿ ಪಾಳೇಗಾರರು ಆಳಿದ್ದ ಐತಿಹಾಸಿಕ ಪ್ರದೇಶ. ಅನೇಕ ಪ್ರೇಕ್ಷಣೀಯ ಸ್ಥಳ ಹೊಂದಿರುವ ಗುಡಿಬಂಡೆಗೆ ಭೇಟಿ ನೀಡುವ ಪ್ರವಾಸಿಗರು ಪುನಃ ಪುನಃ ಭೇಟಿ ನೀಡಬೇಕೆನ್ನುತ್ತಾರೆ. ಅವುಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳ ಇಚ್ಛಾಶಕ್ತಿ, ಕಾಯಕಲ್ಪ ಬೇಕಿದೆ.
ಚಾರಣಿಗರಿಗಾಗಿ ಸುರಸದ್ಮಗಿರಿ ಕೋಟೆ: ಪಟ್ಟಣ ವ್ಯಾಪ್ತಿಯಲ್ಲಿಯೇ ಕಾಣಸಿಗುವುದು ಸುರಸದ್ಮಗಿರಿ ಬೆಟ್ಟ. ಈ ಬೆಟ್ಟಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ರಾಜ್ಯದ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟಗಳಲ್ಲಿ ಪೈಕಿ ಇದೂ ಒಂದಾಗಿದೆ. ಈ ಭಾಗದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬೈರಗೌಡ ಬೆಟ್ಟದ ಸುತ್ತಲೂ ರಕ್ಷಣೆಗಾಗಿ 7 ಸುತ್ತಿನ ಕೋಟೆ ನಿರ್ಮಿಸಿದ್ದಾನೆ. ಜತೆಗೆ ಬೆಟ್ಟದ ಮೇಲ್ಭಾಗದಿಂದ ಸುಂದರವಾದ ಪರಿಸರದ ಸೊಬಗನ್ನು ಕಾಣಬಹುದಾಗಿದೆ. ರಾಮಾಯಣದ ಪ್ರಕಾರ ರಾಮ ಲಕ್ಷ್ಮಣರು ವನವಾಸದ ಸಮಯದಲ್ಲಿ 108 ಜೋರ್ತಿಲಿಂಗಗಳ ಪೈಕಿ ಇಲ್ಲಿಯೂ ರಾಮೇಶ್ವರ ಲಿಂಗ ಪ್ರತಿಷ್ಠಾ ಪಿಸಿದ್ದಾರೆ ಎಂಬ ಪ್ರತೀತಿ ಇದೆ. ಆದರೆ ಸ್ಥಳೀಯ ಆಡಳಿತ ಈ ಬೆಟ್ಟದಲ್ಲಿ ವಾಹನ ನಿಲುಗಡೆ ಸೇರಿ ಮೂಲಭೂತ ಸೌಕರ್ಯ ಒದಗಿಸಿದರೇ ಪ್ರಯಾಣಿಕರಿಗೆ ಅನುಕೂಲವಾಗು ವುದರ ಜತೆಗೆ ನಿಗಧಿತ ಶುಲ್ಕದಿಂದ ಸರ್ಕಾರಕ್ಕೂ ಆದಾಯ ಬರಲಿದೆ.
ಬೇಕಿದೆ ಕಾಯಕಲ್ಪ : ಈಗಾಗಲೇ ಸ್ಥಳೀಯ ಶಾಸಕರು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸುಮಾರು 1 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ಅಮಾನಿ ಬೈರಸಾಗರ ಕೆರೆ ಬಳಿ ಬೋಟಿಂಗ್, ಪಾರ್ಕ್ ನಿರ್ಮಾಣ ಜತೆಗೆ ಸುರಸದ್ಮಗಿರಿ ಬೆಟ್ಟವನ್ನೂ ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದಾರೆ. ಈ ಕಾರ್ಯ ವಿಳಂಬ ವಾಗುತ್ತಿದ್ದು, ಶೀಘ್ರ ಕೈಗೊಳ್ಳಬೇಕೆಂಬುದು ಪ್ರವಾಸಿಗರ ಆಶಯವಾಗಿದೆ.
ಗುಡಿಬಂಡೆಯನ್ನು ಶಾಸಕರು ಪ್ರವಾಸೋ ದ್ಯಮ ತಾಣ ಮಾಡುವು ದಾಗಿ ಕೇವಲ ಭರವಸೆಗೆ ಸೀಮಿತರಾಗಿದ್ದಾರೆ.ಅಧಿಕಾ ರಿಗಳಾದರೂ ಕ್ರಮ ಕೈಗೊಳ್ಳಬೇಕು.
● ಮಧು ವೈ.ಯರ್ರಹಳ್ಳಿ, ಪಿಎಸ್‌ಎಸ್ ಮುಖಂಡರು