Advertisement

ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ ಹಾಕಿ ಹಣ ವಸೂಲಿ

08:20 AM Feb 13, 2018 | Team Udayavani |

ದೇವದುರ್ಗ/ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನರ ಮೇಲೆ ಶೇ.18ರಷ್ಟು ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ ಹಾಕಿ ಹಣ ವಸೂಲಿ ಮಾಡುತ್ತಿದೆ. ಹೀಗೆ ವಸೂಲಿ ಮಾಡಿದ ಜನರ ಆ ಹಣವನ್ನು ದೇಶದ 10 ಉದ್ದಿಮೆದಾರರಿಗೆ ನೀಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕಿಡಿ ಕಾರಿದ್ದಾರೆ.

Advertisement

ಶಹಾಪುರದಲ್ಲಿ “ಜನಾರ್ಶೀವಾದ ಯಾತ್ರೆ’ ಹಿನ್ನೆಲೆಯಲ್ಲಿ ರೋಡ್‌ ಶೋ ನಡೆಸಿ ಅವರು ಮಾತನಾಡಿದರು. ಹೈ.ಕ. ಭಾಗಕ್ಕೆ
371(ಜೆ) ಕಲಂ ಜಾರಿಗೊಳಿಸಲು ಬಿಜೆಪಿ ಸರ್ಕಾರದಲ್ಲಿ ಎಲ್‌.ಕೆ. ಆಡ್ವಾಣಿ ಅವರು ಮನಸ್ಸು ಮಾಡಲಿಲ್ಲ. ಆದರೆ, ನಮ್ಮ ಸರ್ಕಾರ
ಮಾಡಿದೆ. ಹೈ.ಕ. ಭಾಗದ ಅಭಿವೃದ್ದಿಗಾಗಿ ಮೊದಲು 370 ಕೋಟಿ ರೂ.ಬರುತ್ತಿತ್ತು. ಈಗ ಸಂವಿಧಾನದ 371 (ಜೆ) ಕಲಂ ಜಾರಿಯಾದ ನಂತರ ಹೈ.ಕ. ಭಾಗದ ಅಭಿವೃದಿಟಛಿಗಾಗಿ 4 ಸಾವಿರ ಕೋಟಿ ರೂ. ಅನುದಾನ ಬರುತ್ತಿದೆ. 20 ಸಾವಿರ ಉದ್ಯೋಗ ಸೃಷ್ಟಿಯಾಗಿದೆ. ಮೂರು ಮೆಡಿಕಲ್‌ ಕಾಲೇಜು ಮಂಜೂರಾಗಿವೆ ಎಂದರು. 

ಮೋದಿ ಕಚೇರಿಗೆ ಹೋಗಿ ಉದ್ದಿಮೆದಾರರ ಸಾಲ ಮನ್ನಾ ಮಾಡಿದ್ದೀರಿ. ಅದರಂತೆ ರೈತರ ಸಾಲ ಮನ್ನಾ ಮಾಡಬೇಕು ಎಂದು
ಕೇಳಿದರೆ, ಅವರಿಂದ ಯಾವುದೇ ಉತ್ತರ ಬರಲಿಲ್ಲ. ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ರೈತರ ಸಾಲ ಮನ್ನಾ ಮಾಡಬೇಕು ಎಂದಾಗ ಕೇವಲ ನಾಲ್ಕೈದು ದಿನದಲ್ಲಿ ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದರು. ರಾಜ್ಯ ಸರ್ಕಾರ ಬುಡಕಟ್ಟು ಜನಾಂಗಗಳ ಪ್ರಗತಿಗೆ 27 ಸಾವಿರ ಕೋಟಿ ರೂ.ಕೊಟ್ಟಿದೆ. ಆದರೆ, ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಕೊಟ್ಟಿರುವುದು ಕೇವಲ 54 ಸಾವಿರ ಕೋಟಿ. ಅದು ಕೂಡ ಬೇರೆ ಯೋಜನೆಗಳಿಗೆ ಬಳಸಲಾ ಗುತ್ತಿದೆ. ಪ್ರಧಾನಿಯಾಗುವ ಮುನ್ನ ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಮೋದಿ ಹೇಳಿದ್ದರು. ಆದರೆ, 10 ರೂಪಾಯಿ ಯಾದರೂ ಹಾಕಿದ್ದಾರಾ? ದೇಶದಲ್ಲಿ ರೈತರು ಭಯದ ವಾತಾವರಣದಲ್ಲಿದ್ದಾರೆ. ಕೇಂದ್ರ ಸರ್ಕಾರ ಅವರ ನೆರವಿಗೆ ಧಾವಿಸಲಿ. ಯುವಕರಿಗೆ ಉದ್ಯೋಗ ಸೃಷ್ಟಿಸಲಿ ಎಂದು ಆಗ್ರಹಿಸಿದರು.

ರಾಹುಲ್‌ಗೆ ಕಪ್ಪು ಪಟ್ಟಿ ಪ್ರದರ್ಶನಕ್ಕೆ ಯತ್ನ
ಯಾದಗಿರಿ: ನ್ಯಾ| ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ರಾಹುಲ್‌ ಗಾಂಧಿಗೆ ಕಪುr ಪಟ್ಟಿ ಪ್ರದರ್ಶನ ಮಾಡಲು ಸಿದಟಛಿತೆ ನಡೆಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಮಾದಿಗ ದಂಡೋರ ಸಮಿತಿಯ 15ಕ್ಕೂ ಹೆಚ್ಚು ಕಾರ್ಯಕರ್ತರನ್ನು ಶಹಾಪುರ ನಗರ ಠಾಣೆ ಪೊಲಿಸರು ವಶಕ್ಕೆ ಪಡೆದಿದ್ದಾರೆ. ಶಹಾಪುರದಲ್ಲಿ ರಾಹುಲ್‌ ರೋಡ್‌ ಶೋ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕಪ್ಪು ಪಟ್ಟಿ ಪ್ರದರ್ಶನ ಮಾಡಲು ಸಿದ್ಧತೆ ಕೈಗೊಂಡಿದ್ದ ಸಮಿತಿಯ ರಾಜ್ಯ ಜಂಟಿ ಕಾರ್ಯದರ್ಶಿ ವೆಂಕಟೇಶ, ಮಾದಿಗ ಯುವ ಸೇನೆ ರಾಜ್ಯಾಧ್ಯಕ್ಷ ನಂದಕುಮಾರ ಕನ್ನಳ್ಳಿ, ಭೀಮಾಶಂಕರ ಬಿಲ್ಲವ, ವಾಸುದೇವ ಕಟ್ಟಿಮನಿ, ಮಲ್ಲಣ್ಣ ಗೋಗಿ, ಬಸವರಾಜ ನಾಯ್ಕಲ್‌, ಸಿದ್ದಪ್ಪ ಗೋನಾಳ ಸೇರಿದಂತೆ 15ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೋಲಿಸರು ವಶಕ್ಕೆ ಪಡೆದರು. 

400 ಮೀಟರ್‌ ಧ್ವಜ ಪ್ರದರ್ಶನ
ರಾಯಚೂರು:
ರಾಹುಲ್‌ಗೆ ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜು ಬೆಂಬಲಿಗರು ಗಂಜ್‌ ವೃತ್ತದಿಂದ ಶಂಶಾಲಂ ದರ್ಗಾವರೆಗೆ 400 ಮೀಟರ್‌ ಉದ್ದದ ತ್ರಿವರ್ಣ ಧ್ವಜದೊಂದಿಗೆ ಅದೂಟಛಿರಿಯಾಗಿ ಸ್ವಾಗತ ನೀಡಿದರು. ಗಂಜ್‌ ವೃತ್ತದಲ್ಲಿ
ಕಾರ್ಯಕರ್ತರು ಧ್ವಜ ಹಿಡಿದು ಸಾಲಾಗಿ ನಿಂತಿದ್ದರು. ಆದರೆ, ಮಕ್ಕಳ ಕೈಗೂ ಧ್ವಜ ಕೊಟ್ಟು ರಾಹುಲ್‌ಗೆ ಜೈಕಾರ ಹಾಕಿಸಿದ್ದು ಕಂಡು ಬಂತು.

Advertisement

ದರ್ಗಾಕ್ಕೆ ಭೇಟಿ
ರಾಯಚೂರು: ಯರಮರಸ್‌ ಅತಿಥಿ ಗೃಹದಿಂದ ರಾಯಚೂರಿಗೆ ತೆರಳುವ ಮುನ್ನ ರಾಹುಲ್‌ ಗಾಂಧಿ ನಗರದ ಶಂಶಾಲಂ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮ ವೇಳಾಪಟ್ಟಿಯಲ್ಲಿ ದರ್ಗಾ ಭೇಟಿ ಇರಲಿಲ್ಲ. ಬಳ್ಳಾರಿ, ಕೊಪ್ಪಳ, ಕಲಬುರಗಿ,
ಬೀದರ್‌ನಲ್ಲಿ ಒಂದೊಂದು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಬಗ್ಗೆ ಯೋಜನೆ ರೂಪಿಸಲಾಗಿತ್ತು. ಆದರೆ, ಸೋಮವಾರ ಬೆಳಗ್ಗೆ ಮುಖಂಡರ ಜತೆ ಚರ್ಚಿಸಿ ದರ್ಗಾಕ್ಕೆ ದಿಢೀರ್‌ ಭೇಟಿಗೆ ಯೋಜನೆ ರೂಪಿಸಲಾಯಿತು. 

ಆಜಾನ್‌ ಆಗುವಾಗ ಮಾತು ನಿಲ್ಲಿಸಿದ ರಾಹುಲ್‌ ಗಾಂಧಿ
ದೇವದುರ್ಗ (ರಾಯಚೂರು): ರಾಹುಲ್‌ ಗಾಂಧಿ ಮಾತನಾಡುವಾಗ ಆಜಾನ್‌ ಕೇಳಿ ಬಂತು. ಈ ವೇಳೆ ಕೆಲ ಕಾಲ ಭಾಷಣ ನಿಲ್ಲಿಸಿದ ರಾಹುಲ್‌, ಆಜಾನ್‌ ಮುಗಿದ ಬಳಿಕ ಮತ್ತೆ ಭಾಷಣ ಮುಂದುವರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next