Advertisement

ಕೇಶ ಕಾಪಾಡಿಕೊಳ್ಳಿ…ಕೇಶ ಸೌಂದರ್ಯಕ್ಕೆ ಪೇರಳೆ ಎಲೆ

01:36 PM Dec 08, 2020 | Nagendra Trasi |

ಕೇಶರಾಶಿ ಕನ್ಯೆಯರ ಸೌಂದರ್ಯ ಹೆಚ್ಚಿಸುತ್ತದೆ. ಉದ್ದ ಜಡೆ, ಗುಂಗುರು ಕೂದಲು, ದಪ್ಪ ಕೂದಲು ಇದು ಹೆಂಗಳೆಯರ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಆದರೆ ಅದೇ ಕೂದಲು ಉದುರಲು ಶುರುವಾದರೆ ಅದರಿಂದ ಬೇಸತ್ತು ಹೋಗುತ್ತೇವೆ. ಇತ್ತೀಚಿನ ಹವಾಮಾನ ಬದಲಾವಣೆ, ನೀರಿನ ಸಮಸ್ಯೆಯಿಂದ ಕೂದಲು ಉದುರುವುದು ಹೆಚ್ಚಾಗಿದೆ. ವಿವಿಧ ಸೆಲೂನ್‌ ಚಿಕಿತ್ಸೆ, ದುಬಾರಿ ಕೇಶವರ್ಧಕ ಶ್ಯಾಂಪೂ ಬಳಸಿದರೂ ಕೂಡ ಯಾವುದೇ ಪರಿಣಾಮ ಕಂಡು ಬಂದಿಲ್ಲವಾದಲ್ಲಿ ನೈಸರ್ಗಿಕವಾಗಿ ಸಿಗುವ ಪೇರಳೆ ಎಲೆಗಳಿಂದ ಕೇಶ ಕಾಪಾಡಿಕೊಳ್ಳಿ.

Advertisement

ಪೇರಳೆ ಎಲೆಗಳಲ್ಲಿ ವಿಟಮಿನ್‌ ಬಿ ಮತ್ತು ಸಿ ಇರುವುದರಿಂದ ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಎಲೆಗಳನ್ನು ನಿಮ್ಮ ಮನೆಯಲ್ಲಿ ಈ ರೀತಿಯಾಗಿ ಪ್ರಯೋಗಿಸಿ ನೋಡಿ.

ಪೇರಳೆ ಹಣ್ಣಿನ ಚಹಾ
ನೀವು ಪೇರಳೆ ಎಲೆಗಳನ್ನು ಬಳಸಿ ಒಂದು ಕಪ್‌ ಚಹಾ ತಯಾರಿಸಿ, ಪ್ರತಿದಿನ ಎರಡು ಬಾರಿಯಾದರೂ ನಿಯಮಿತವಾಗಿ ಕುಡಿಯಿರಿ. ಇದು ನಿಮ್ಮ ತಲೆಕೂದಲಿನ ಬೆಳವಣಿಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ:ಭಾರತೀಯ ಮೂಲದ ಅನಿಲ್ ಸೋನಿ ವಿಶ್ವ ಆರೋಗ್ಯ ಸಂಸ್ಥೆ ಪ್ರತಿಷ್ಠಾನದ ಸಿಇಒ

ಪೇರಳೆ ಎಲೆಯ ಸ್ನಾನ
ಸ್ವಲ್ಪ ಪೇರಳೆ ಎಲೆ, ಒಂದು ಲೀ. ನೀರು ಇಷ್ಟನ್ನು ಬಳಸಿಕೊಂಡು ಪೇರಳೆ ಎಲೆಗಳನ್ನು 20 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಅನಂತರ ಇದನ್ನು ತಣ್ಣಗಾಗಲು ಬಿಡಿ. ಅನಂತರ ನಿಮ್ಮ ಕೂದಲು ಒಣಗಿದ ಮೇಲೆ ನೆತ್ತಿಗೆ 10 ನಿಮಿಷಗಳ ಕಾಲ ಈ ದ್ರಾವಣ ಮಸಾಜ್‌ ಮಾಡಿ. ಅನಂತರ ತಣ್ಣೀರಿನಲ್ಲಿ ತಲೆಸ್ನಾನ ಮಾಡಿ. ಇನ್ನು ನೀವು ಕೂದಲು ಉದುರುವಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇದನ್ನು ನೀವು ವಾರದಲ್ಲಿ ಎರಡು, ಮೂರು ಬಾರಿ ಬಳಸಿಕೊಳ್ಳಿ. ಇದರಿಂದ ನಿಮ್ಮ ಕೂದಲಿನ ಆರೋಗ್ಯ ಉತ್ತಮವಾಗಿರುತ್ತದೆ. ಅಥವಾ ನಿಮ್ಮ ಕೂದಲಿಗೆ ಅಥವಾ ನೆತ್ತಿಗೆ ಲೋಶನ್‌ ತಯಾರಿಸಿ ಹಚ್ಚಿಕೊಳ್ಳಿ. ಇದರಿಂದ ಕೂಡ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು ಮತ್ತು ಇದರಿಂದ ಕೂದಲಿನ ಬೆಳವಣಿಗೆ ಸಾಧ್ಯವಾಗುತ್ತದೆ.

Advertisement

ಉರಿಯೂತವನ್ನು ಕಡಿಮೆ ಮಾಡುತ್ತದೆ
ಪೇರಳೆ ಎಲೆಗಳು ನೆತ್ತಿಯ ಉರಿಯೂತವನ್ನು ಕಡಿಮೆ ಮಾಡುತ್ತವೆ. ನೆತ್ತಿಯ ಉರಿಯೂತದಿಂದ ಕೂದಲು ಉದುರುವ ಸಾಧ್ಯತೆಗಳಿರುತ್ತವೆ. ಪೇರಳೆ ಹಣ್ಣಿನ ಎಲೆಗಳನ್ನು ಪೇಸ್ಟ್‌ ಮಾಡಿ ನೆತ್ತಿಯ ಮೇಲೆ ಹಚ್ಚಿಕೊಳ್ಳಿ. ಇದರಿಂದ ತಲೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.

ರಕ್ತ ಹೀನತೆಯನ್ನು ತಡೆಗಟ್ಟುತ್ತದೆ
ರಕ್ತಹೀನತೆಯಿಂದಾಗಿ ಕೂಡ ಕೂದಲು ಉದುರುತ್ತದೆ. ಅನೇಕ ಮಹಿಳೆಯರು ಇಂದು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕೂದಲು ಉದುರುವ ಸಮಸ್ಯೆಗಳು ಕೂಡ ಹೆಚ್ಚಾಗಿವೆ. ಪೇರಳೆ ಎಲೆಯ ಚಹಾವನ್ನು ತಯಾರಿಸಿ ಅದನ್ನು ಕುಡಿಯುವುದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.

ಹೊಟ್ಟು ನಿವಾರಣೆ
ತಲೆಯಲ್ಲಿ ಹೊಟ್ಟು ನಿವಾರಣೆಗೆ ಪೇರಳೆ ಎಲೆ ಸೂಕ್ತ ಪರಿಹಾರ. ಪೇರಳೆ ಎಲೆಯಿಂದ ಸೀರಮ್‌ ಅನ್ನು ತಯಾರಿಸಿ ಅದನ್ನು ತಲೆಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಸಾಧ್ಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next