ಭೋಪಾಲ್: ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಮಹಿಳೆಯೊಬ್ಬಳನ್ನು ಸೆಕ್ಯೂರಿಟಿ ಗಾರ್ಡ್ ಸುಮಾರು 300 ಮೀಟರ್ ನಷ್ಟು ದೂರ ಎಳೆದುಕೊಂಡು ಹೋಗಿ ಆಸ್ಪತ್ರೆಯ ದ್ವಾರದಿಂದ ಹೊರಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಭೋಪಾಲ್ ನಿಂದ ಸುಮಾರು 320 k.m ದೂರದಲ್ಲಿರುವ ಖಾರ್ಗೋನ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ನೀಲಿ ಬಣ್ಣದ ಸಮವಸ್ತ್ರ ಧರಿಸಿರುವ ಆಸ್ಪತ್ರೆ ಸಿಬ್ಬಂದಿ ಮಹಿಳೆಯನ್ನು ಎಳೆದುಕೊಂಡು ಹೋಗಿ ಆಸ್ಪತ್ರೆಯ ಹೊರಗೆ ತಳ್ಳಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ಬಳಿಕ ಆಸ್ಪತ್ರೆ ಆಡಳಿತ ಮಂಡಳಿ, ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ತಿಳಿಸಿದ್ದು, ಈ ನಡುವೆಯೂ ಸಿಬ್ಬಂದಿ ಮೇಲಿರುವ ಆರೋಪವನ್ನು ಆಸ್ಪತ್ರೆ ಆಡಳಿತ ಮಂಡಳಿ ತಳ್ಳಿ ಹಾಕಿದೆ.
ಇದನ್ನೂ ಓದಿ:‘ಬಾಹುಬಲಿ’ ರೂಪದಲ್ಲಿ ಬಿ.ವೈ.ವಿಜಯೇಂದ್ರ: ಅಂಜನಾದ್ರಿ ಬೆಟ್ಟದಲ್ಲಿ ಕಲರ್ ಫುಲ್ ಬ್ಯಾನರ್ಸ್
ಮಹಿಳೆಯು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದು, ಆಕೆಯನ್ನು ಆಸ್ಪತ್ರೆಯ ಅಧಿಕಾರಿಗಳ ಒಪ್ಪಿಗೆ ಇಲ್ಲದೆ ಯಾರೋ ಅಪರಿಚಿತರು ಇಲ್ಲಿ ಬಿಟ್ಟು ಹೋಗಿದ್ದರು. ಈ ನಡುವೆ ಆಕೆ ಆಸ್ಪತ್ರೆಯ ಸಿಬ್ಬಂದಿಗಳ ಜೊತೆ ವ್ಯತಿರಿಕ್ತ ವರ್ತನೆಯನ್ನು ತೋರುತ್ತಿದ್ದಳು. ಹಾಗಾಗಿ ಅಧಿಕಾರಿಗಳು ಸೆಕ್ಯೂರಿಟಿ ಸಿಬ್ಬಂದಿಗೆ ಆಕೆಯನ್ನು ಬೇರೆಡೆಗೆ ಕಳಿಸುವಂತೆ ತಿಳಿಸಿದ್ದಾರೆ. ಹೀಗಾಗಿ ಸಿಬ್ಬಂದಿ ಆಕೆಯನ್ನು ಆಸ್ಪತ್ರೆ ಆವರಣದಿಂದ ಹೊರಗೆ ಕಳುಸಿದ್ದಾನೆಯೇ ಹೊರತು ಆಕೆಯನ್ನು ಎಳೆದು ಹಿಂಸೆ ನೀಡಿಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.