Advertisement

Politics: ಬಿಆರ್‌ಎಸ್‌ಗೆ “ಗ್ಯಾರಂಟಿ” ಭಯ

11:43 PM Sep 20, 2023 | Team Udayavani |

ಕರ್ನಾಟಕದಲ್ಲಿ “ಗ್ಯಾರಂಟಿ’ಗಳು ಕಾಂಗ್ರೆಸ್‌ನ ಕೈ ಹಿಡಿದ ಬೆನ್ನಲ್ಲೇ ತೆಲಂಗಾಣದಲ್ಲೂ ಪಕ್ಷವು ಬಂಪರ್‌ ಗ್ಯಾರಂಟಿಗಳನ್ನು ಘೋಷಿಸಿದೆ. ಇವುಗಳೇನಾದರೂ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಬಹುದೋ, ಮತಗಳು ಕೈ ಬುಟ್ಟಿಗೆ ಸೇರಬಹುದೋ ಎಂಬ ಆತಂಕ ಈಗ ತೆಲಂಗಾ ಣದ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌)ಗೆ ಶುರುವಾಗಿದೆಯಂತೆ. ಸೋನಿಯಾಗಾಂಧಿ ಅವರು ಗ್ಯಾರಂಟಿ ಘೋಷಿಸಿದ ಬೆನ್ನಲ್ಲೇ ಬಿಆರ್‌ಎಸ್‌ ಕಾರ್ಯಾ ಧ್ಯಕ್ಷ ಕೆ.ಟಿ. ರಾಮ ರಾವ್‌ ಅವರು ಮಾಡಿರುವ ಟ್ವೀಟ್‌ ಇದಕ್ಕೆ ಸಾಕ್ಷಿ.

Advertisement

“ತೆಲಂಗಾಣದ ಜನರು ಬುದ್ಧಿವಂತರು. ಅವರು ಸುಳ್ಳು ಮತ್ತು ಮೋಸದ ಗ್ಯಾರಂಟಿಗಳನ್ನು ನಂಬುವುದಿಲ್ಲ’ ಎಂದು ಕೆಟಿಆರ್‌ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ, “ದಿಲ್ಲಿ ಯ ಕೈಗೊಂಬೆಗಳು’ ರಾಜ್ಯದಲ್ಲಿ ಅಧಿಕಾರಕ್ಕೇರಿದರೆ, ತೆಲಂಗಾಣದ ಸ್ವಾಭಿಮಾನ ವನ್ನು ಅಡವಿಡುವುದೂ ಗ್ಯಾರಂಟಿ ಎಂದು ಅವರು ಹೇಳಿದ್ದಾರೆ. ಅಲ್ಲದೇ, ಕಾಂಗ್ರೆಸ್‌ ನಾಯ ಕರನ್ನು “ರಣಹದ್ದುಗಳು’, “ರಾಕ್ಷಸರು’, “ಗೋಸುಂಬೆಗಳು’ ಎಂದೆಲ್ಲ ಕರೆದಿದ್ದಾರೆ. ರಾಜ್ಯ ವೆಲ್ಲಿ ಕೈತಪ್ಪಿ ಹೋಗುವುದೋ ಎಂಬ ಭೀತಿ ಕೆಸಿಆರ್‌, ಕೆಟಿಆರ್‌ಗೆ ಕಾಡುತ್ತಿರುವುದಕ್ಕೆ ಈ ಎಲ್ಲ ಪದಗಳೇ ಸಾಕ್ಷಿ.

Advertisement

Udayavani is now on Telegram. Click here to join our channel and stay updated with the latest news.

Next