Advertisement

ಜಿಟಿಟಿಸಿ, ಬಿಎಂಟಿಸಿ: 2,576 ಹುದ್ದೆಗಳ ನೇಮಕಕ್ಕೆ ಅಧಿಸೂಚನೆ

11:20 PM Apr 04, 2024 | Team Udayavani |

ಬೆಂಗಳೂರು: ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.

Advertisement

ಜಿಟಿಟಿಸಿಯಲ್ಲಿ 76 ಹಾಗೂ ಬಿಎಂಟಿಸಿಯಲ್ಲಿ 2,500 ಕಂಡಕ್ಟರ್‌ ಹುದ್ದೆಗೆ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಆನ್‌ಲೈನ್‌ ಲಿಂಕ್‌ ಅನ್ನು ಎ. 19ರಂದು ಬಿಡುಗಡೆ ಮಾಡಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌.ರಮ್ಯಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಅರ್ಜಿ ಸಲ್ಲಿಸಲು ಮೇ 18 ಕೊನೆಯ ದಿನವಾಗಿರುತ್ತದೆ. ವಿವರಗಳಿಗೆ ಕೆಇಎ ವೆಬ್‌ಸೈಟ್‌ ನೋಡಲು ಅವರು ಕೋರಿದ್ದಾರೆ. ಜಿಟಿಟಿಸಿಯಲ್ಲಿ 18 ಲೆಕ್ಚರರ್‌, 2 ಎಂಜಿನಿಯರ್‌, ಅಫೀಸರ್‌ ಗ್ರೇಡ್‌-2, ಪೋರ್‌ಮ್ಯಾನ್‌ ಗ್ರೇಡ್‌ – 4, ಇನ್‌ಸ್ಟ್ರಕ್ಟರ್‌ ಗ್ರೇಡ್‌-7 ಟೆಕ್ನಿಷಿಯನ್‌ ಗ್ರೇಡ್‌-7, ಟೆಕ್ನಿಷಿಯನ್‌ ಗ್ರೇಡ್‌-20, ಟೆಕ್ನಿಷಿಯನ್‌ ಗ್ರೇಡ್‌-4, ಅಸಿಸ್ಟೆಂಡ್‌ ಗ್ರೇಡ್‌-4  ಹುದ್ದೆಗಳಿಗೆ ನೇಮಕ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next