Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಪಯೋಗಿ ಇಲಾಖೆ ಎಸ್.ಆರ್ ದರದ ಕಾಮಗಾರಿ ನೀಡಿದ್ದು, ಉದಾಹರಣೆಗೆ ಹತ್ತು ಲಕ್ಷದ ಕಾಮಗಾರಿ ಮಾಡಿದರೆ ಅದರಲ್ಲಿ ಶೇ.2 ಜಿಎಸ್‌ಟಿ ಕಡಿತಗೊಳಿಸುತ್ತಾರೆ, ನಂತರ ನಮ್ಮ ಕಡೆಯಿಂದ ಶೇ.10 ರಷ್ಟು ಜಿಎಸ್‌ಟಿ ತುಂಬಲು ಹೇಳುತ್ತಾರೆ. ಹಾಗಾಗಿ ದುಡಿದ ಹಣವೆಲ್ಲಾ ಜಿಎಸ್‌ಟಿ ಪಾಲಾಗುತ್ತದೆ. ಇದರ ವಿರುದ್ಧ ಹೋರಾಟ ರೂಪಿಸಲು ಎಸ್ಸಿಎಸ್ಟಿ ಗುತ್ತಿಗೆದಾರರ ಸಂಘಟನೆ ಜಿಲ್ಲಾ ಮಟ್ಟದಲ್ಲಿ ಬಲಪಡಿಸಲು ಯೋಚನೆ ನಡೆದಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ದಲಿತ ಗುತ್ತಿಗೆದಾರರು ಒಗ್ಗಟ್ಟಾಗಬೇಕಿದೆ ಎಂದು ಕುಡಾಳಕರ್ ಹೇಳಿದರು.
Related Articles
Advertisement
ಇದೀಗ ನೀಡಿರುವ ಆದೇಶದ ಪ್ರಕಾರ ಸಮಾನಾಂತರ ಕಾಮಗಾರಿ ರದ್ದುಗೊಳಿಸಿ ಯಾವುದೇ ಕಾಮಗಾರಿ ಪ್ರಮಾಣ ಪತ್ರವನ್ನು ನೀಡಿ ಕೆಲಸವನ್ನು ಮಾಡಲು ಅವಕಾಶ ನೀಡಿರುತ್ತಾರೆ ಎಂದರು.
ತೊಂದರೆ ನಿವಾರಣೆಗೆ ಸಂಘಟನೆ: ಅದೇ ರೀತಿಯಾಗಿ ಅನೇಕ ತೊಂದರೆಗಳ ನಿವಾರಣೆಗೆ ದಲಿತ ಗುತ್ತಿಗೆದಾರರು ಕಾರವಾರ ತಾಲೂಕಿನಲ್ಲಿ ಸಂಘಟನೆ ಮಾಡಿಕೊಂಡಿರುತ್ತೇವೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿರುವ ಎಸ್‌ಸ್ಸಿಎಸ್ಟಿ ಗುತ್ತಿಗೆದಾರರು ಆಯಾ ತಾಲೂಕಿನಲ್ಲಿ ಸಂಘಟನೆ ರಚಿಸಿ ಜಿಲ್ಲಾ ಸಂಘಟನೆಯನ್ನು ಮಾಡಲು ಸಹಕರಿಸಬೇಕಿದೆ.
ಹೆಚ್ಚಿನ ವಿವರಗಳಿಗೆ ದೀಪಕ ಕುಡಾಳಕರ 9448628953, ಕಾರ್ಯದರ್ಶಿ ಎಲಿಷಾ ಯಲಕಪಾಟಿ 9036837532 ಇವರನ್ನು ಸಂಪರ್ಕಿ ಸಬೇಕೆಂದು ವಿನಂತಿಸುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರವಾರ ತಾಲೂಕಿನ ಎಸ್ಸಿಎಸ್ಟಿ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಲಿಷಾ ಯಲಕಪಾಟಿ, ಉಪಾಧ್ಯಕ್ಷ ಧರ್ಮರಾಯ ಮುಡಸಾಲೆ, ಖಜಾಂಚಿ ಪ್ರಕಾಶ ವಡ್ಡರ, ಸದಸ್ಯರಾದ ಭೋಜರಾಜ ದೊರೆಸ್ವಾಮಿ, ರೋಹಿತ ವೆಂಕಟೇಶ, ಚಿನ್ನಾ ಬಾಬು ಯಲಕಪಾಟಿ ಹಾಜರಿದ್ದರು.