Advertisement

ಜಿಎಸ್‌ಟಿ, ಅಮಾನ್ಯಕ್ಕೆ ಸಿಂಗ್‌ ಟೀಕೆ; ಸಚಿವ ಜೇಟ್ಲಿ ಸಮರ್ಥನೆ

07:10 AM Sep 19, 2017 | Team Udayavani |

ನವದೆಹಲಿ: ಕೇಂದ್ರ ಸರ್ಕಾರದ ನೋಟುಗಳ ಅಮಾನ್ಯ ನಿರ್ಧಾರದ ವಿರುದ್ಧ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಮತ್ತೆ ಆಕ್ಷೇಪಿಸಿದ್ದಾರೆ. ಜತೆಗೆ ತರಾತುರಿಯಲ್ಲಿ ಜಿಎಸ್‌ಟಿ ಜಾರಿ ಮಾಡಲಾಯಿತು ಎಂದು ಟೀಕಿಸಿದ್ದಾರೆ. ಹೀಗಾಗಿಯೇ ಜಿಡಿಪಿ ಬೆಳವಣಿಗೆಯಲ್ಲಿ ಕುಂಠಿತವಾಯಿತು ಎಂದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಈ ಎರಡೂ ನಿರ್ಧಾರಗಳು ಸಣ್ಣ ಕೈಗಾರಿಕೆ, ವ್ಯಾಪಾರ ಮತ್ತು ಅಸಂಘಟಿತ ವಲಯಗಳಿಗೆ ಭಾರಿ ತೊಂದರೆ ತಂದೊಡ್ಡಲಿದೆ ಎಂದು ಹೇಳಿದರು. ಈ ಎರಡೂ ಘಟಕಗಳು ಜಿಡಿಪಿಯ ಶೇ.40ರಷ್ಟನ್ನು ಪ್ರತಿನಿಧಿಸುತ್ತವೆ ಎಂದರು. ಶೇ.90ರಷ್ಟು ಉದ್ಯೋಗ ಅಸಂಘಟಿತ ವಲಯದ್ದೇ ಆಗಿವೆ ಎಂದಿದ್ದಾರೆ ಡಾ.ಸಿಂಗ್‌. 

Advertisement

ಆದರೆ ಕೇಂದ್ರ ಸರ್ಕಾರದ ನಿರ್ಧಾರ ಸಮರ್ಥನೆ ಮಾಡಿಕೊಂಡ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅವರು, ನೋಟು ಗಳ ಅಮಾನ್ಯದಿಂದಾಗಿ ದೇಶದಲ್ಲಿ ಡಿಜಿಟಲ್‌ ವಹಿವಾಟು ಹೆಚ್ಚಾಗಿದೆ. ಜತೆಗೆ ತೆರಿಗೆ ವಿಧಿಸುವ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಎಂದಿದ್ದಾರೆ. ಜತೆಗೆ ಹೆಚ್ಚಿನ ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ನಿಯಂತ್ರಿಸಲಾಗಿದೆ ಎಂದಿದ್ದಾರೆ. ಕೆಲವರಿಗೆ ಈ ಬಗೆಗಿನ ಲೆಕ್ಕಾಚಾರವೇ ಅರ್ಥವಾಗದೇ, ಸರ್ಕಾರದ ನಿರ್ಧಾರ ವನ್ನು ಸುಖಾಸುಮ್ಮನೆ ಟೀಕಿಸುತ್ತಿದ್ದಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next