Advertisement

ಜು.1ರಿಂದ ಜಿಎಸ್‌ಟಿ ಜಾರಿ; ದೇಶದ ಆರ್ಥಿಕತೆಗೆ Turning Point: ಮೋದಿ

04:29 PM Jun 05, 2017 | |

ಹೊಸದಿಲ್ಲಿ : ಮುಂದಿನ ಜುಲೈ 1ರಿಂದ ಜಾರಿಗೆ ಬರಲಿರುವ ಜಿಎಸ್‌ಟಿ ದೇಶದ ಆರ್ಥಿಕತೆಯ ದಿಕ್ಕನ್ನು ಬದಲಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

Advertisement

ದೇಶದಲ್ಲಿ  ಸರಕು ಮತ್ತು ಸೇವಾ ತೆರಿಗೆ ಕಾಯಿದೆಯ ಅನುಷ್ಠಾನವು ರಾಜಕೀಯ ಪಕ್ಷಗಳು, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು ಸೇರಿದಂತೆ ಎಲ್ಲ ಹಿತಾಸಕ್ತರ ಸಂಘಟಿತ ಪರಿಶ್ರಮದ ಫ‌ಲವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

ಜಿಎಸ್‌ಟಿ ಯಿಂದಾಗಿ ರೂಪುಗೊಳ್ಳುವ ಏಕ ರಾಷ್ಟ್ರ, ಏಕ ಮಾರುಕಟ್ಟೆ, ಏಕ ತೆರಿಗೆಯಿಂದಾಗಿ ಜನಸಾಮಾನ್ಯರಿಗೆ ಮಹತ್ತರವಾದ ಲಾಭವಾಗಲಿದೆ ಎಂದು ಪ್ರಧಾನಿ ಮೋದಿ ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದರು.

ಜಿಎಸ್‌ಟಿಗೆ ಸಂಬಂಧಿಸಿದ ಐಟಿ ವ್ಯವಸ್ಥೆಯಲ್ಲಿನ ಸೈಬರ್‌ ಭದ್ರತೆಗೆ ಗರಿಷ್ಠ ಎಚ್ಚರವಹಿಸುವಂತೆ ಪ್ರಧಾನಿಯವರು ಅಧಿಕಾರಿಗಳಿಗೆ ಆದೇಶಿಸಿದರು. 

ಮುಂದಿನ ತಿಂಗಳು ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರಲಿರುವ ಜಿಎಸ್‌ಟಿಯ ಅನುಷ್ಠಾನ ಸಂಬಂಧದ ಸನ್ನದ್ಧತೆಯನ್ನು ಪ್ರಧಾನಿ ಮೋದಿ ಅವಲೋಕಿಸಿದರು 

Advertisement

ಈ ಸಭೆಯಲ್ಲಿ ಹಣಕಾಸು ಸಚಿವ ಅರುಣ್‌ ಜೇತ್ಲಿ, ಕಂದಾಯ ಕಾರ್ಯದರ್ಶಿ ಹಸ್‌ಮುಖ್‌ ಅಧಿಯಾ ಮತ್ತು ಕೇಂದ್ರ ಅಬಕಾರಿ ಮತ್ತು ಸುಂಕ ಮಂಡಳಿಯ (ಸಿಬಿಇಸಿ) ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. 

ಜಿಎಸ್‌ಟಿ ಮಂಡಳಿಯು ತೆರಿಗೆ ದರಗಳನ್ನು ಅಂತಿಮಗೊಳಿಸಿದ ಬಳಿಕದಲ್ಲಿ ಪ್ರಧಾನಿ ಮೋದಿ ನಡೆಸುತ್ತಿರುವ ಮೊದಲ ಹಾಗೂ ಮೇ 2ರ ಬಳಿಕದ ಎರಡನೇ ಪರಾಮರ್ಶೆ ಸಭೆ ಇದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next