Advertisement

ಉದ್ಯಮಿಗಳಿಗಿನ್ನು ತಿಂಗಳಿಗೆ ಒಮ್ಮೆ ಜಿಎಸ್‌ಟಿ ರಿಟರ್ನ್ಸ್

06:00 AM May 05, 2018 | |

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಆರಂಭವಾದಂದಿನಿಂದಲೂ ಒಂದಲ್ಲ ಒಂದು ಕಿರಿಕಿರಿ ಅನುಭವಿಸುತ್ತಲೇ ಇದ್ದ ಸಣ್ಣ ಉದ್ಯಮಗಳಿಗೆ ಕಳೆದ ಕೆಲವು ತಿಂಗಳಿಂದ ಬಹುತೇಕ ಸಮಸ್ಯೆಗಳು ನಿವಾರಣೆಯಾಗಿವೆ. ಇನ್ನೊಂದೆಡೆ ಉದ್ಯಮಿಗಳಿಗೆ ಇನ್ನೂ ಒಂದು ಶುಭ ಸುದ್ದಿಯನ್ನು ಜಿಎಸ್‌ಟಿ ಸಮಿತಿ ನೀಡಿದೆ. ಪ್ರತಿ ತಿಂಗಳೂ ಉದ್ಯಮಗಳಿಗೆ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ಅವಕಾಶ ನೀಡಲು ಜಿಎಸ್‌ಟಿ ಸಮಿತಿ ನಿರ್ಧರಿಸಿದೆ. ಆದರೆ ಇದು ಜಾರಿಗೆ ಬರಲು ಇನ್ನೂ ಆರು ತಿಂಗಳ ಕಾಲಾವಕಾಶ ಬೇಕಿದೆ. ಅಲ್ಲಿಯವರೆಗೂ ಈಗಿನಂತೆ ತಿಂಗಳಲ್ಲಿ ಹಲವು ಬಾರಿ ರಿಟರ್ನ್ ಸಲ್ಲಿಸುವ ವ್ಯವಸ್ಥೆಯೇ ಮುಂದುವರಿಯಲಿದೆ ಎಂದು ಹಣ ಕಾಸು ಕಾರ್ಯದರ್ಶಿ ಹಸುಖ್‌ ಅಧಿಯಾ ಹೇಳಿದ್ದಾರೆ.

Advertisement

ಮಾಸಿಕ ಸಂಚಿತ ರಿಟರ್ನ್ಸ್ ಅವಕಾಶ ಒದಗಿಸುವ ವಿಧಾನದಲ್ಲಿ ಒಟ್ಟು ವಹಿವಾಟು ವಿವರಗಳು ಮತ್ತು ಸೇಲ್ಸ್‌ ಇನ್ವಾಯ್ಸ ವಿವರಗಳು ಲಭ್ಯವಾಗುತ್ತವೆ. ಅಲ್ಲದೆ ಯಾವುದೇ ರಿಟರ್ನ್ ಋಣಭಾರ ಹೊಂದಿ ಲ್ಲದ ಕಂಪನಿಗಳು ಮೂರು ತಿಂಗಳಿಗೊಮ್ಮೆ ಒಟ್ಟಾಗಿ ರಿಟರ್ನ್ ಸಲ್ಲಿಸಬಹುದು. ಹೊಸ ವ್ಯವಸ್ಥೆ ಜಾರಿಗೆ ಬರುವವರೆಗೂ ಇನ್ವಾಯ್ಸ ಅಪ್‌ಲೋಡ್‌ ಮಾಡಿ ಲ್ಲದೇ ಇದ್ದರೂ, ಮಾರಾಟಗಾರರಿಗೆ ಕ್ರೆಡಿಟ್‌ ಕ್ಲೇಮ್‌ ಮಾಡುವ ಅವಕಾಶ ನೀಡಲಾಗಿದೆ. ಇದಕ್ಕಾಗಿ ರಿಟರ್ನ್ ನಮೂನೆಯಲ್ಲಿ ಪ್ರತ್ಯೇಕ ಕಾಲಂ ನೀಡಲಾಗಿದೆ. ಇನ್ನೊಂದೆಡೆ ಡಿಜಿಟಲ್‌ ಪಾವತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ, ಜಿಎಸ್‌ಟಿ ದರದಲ್ಲಿ ಶೇ.2ರಷ್ಟನ್ನು ಡಿಜಿಟಲ್‌ ಪಾವತಿಗಳ ಮೇಲೆ ರಿಯಾಯಿತಿ ನೀಡುವ ಪ್ರಸ್ತಾವನೆಗೆ ಸಮಿತಿಯ ಬಹುತೇಕ ಸದಸ್ಯರು ಒಪ್ಪಿದ್ದಾರೆ.

ಜಿಎಸ್‌ಟಿ ನೆಟ್‌ವರ್ಕ್‌ ಇನ್ನು ಸರ್ಕಾರಿ ಸ್ವಾಮ್ಯದ್ದು: ಸಮಿತಿ ಸಭೆಯಲ್ಲಿ ಇನ್ನೂ ಒಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಜಿಎಸ್‌ಟಿ ವಹಿವಾಟುಗಳನ್ನು ನಿರ್ವಹಿಸುವ ಜಿಎಸ್‌ಟಿ ನೆಟ್‌ವರ್ಕ್‌ನ ಶೇ.51ರಷ್ಟು ಪಾಲನ್ನು ಸರ್ಕಾರ ಖರೀದಿಸಲಿದೆ. ಇದರಿಂದಾಗಿ ಇದು ಸಂಪೂರ್ಣ ಸರ್ಕಾರಿ ಸಂಸ್ಥೆಯಾಗಿರಲಿದೆ. ಕೇಂದ್ರ ಸರ್ಕಾರ ಶೇ.50ರಷ್ಟು ಮತ್ತು ರಾಜ್ಯ ಸರ್ಕಾರ ಶೇ.50ರಷ್ಟು ಪಾಲನ್ನು ಜಿಎಸ್‌ಟಿ ನೆಟ್‌ವರ್ಕ್‌ನಲ್ಲಿ ಹೊಂದಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next