ನವದೆಹಲಿ:ದೇಶವನ್ನು ಏಕರೂಪದ ಮಾರುಕಟ್ಟೆಯನ್ನಾಗಿಸುವ, ಸ್ವತಂತ್ರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆ ಎಂದೇ ಬಣ್ಣಿಸಲಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಎಸ್ ಟಿ) ಪ್ರಕ್ರಿಯೆ ಕೊನೆಗೂ ಅಂತಿಮ ಹಂತದ ತಲುಪಿದ್ದು, ಶುಕ್ರವಾರ ನಡೆದ ಜಿಎಸ್ ಟಿ ಸಭೆಯಲ್ಲಿ ತೆರಿಗೆ ದರವನ್ನು ಅಂತಿಮಗೊಳಿಸಲಾಗಿದ್ದು, ಜಿಎಸ್ ಟಿಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ವಿನಾಯ್ತಿ ನೀಡಲಾಗಿದೆ.
ಶ್ರೀನಗರದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ 2ದಿನ ನಡೆದ ಜಿಎಸ್ ಟಿ ಸಭೆಯಲ್ಲಿ ಜುಲೈ 1ರಿಂದ ದೇಶಾದ್ಯಂತ ಜಾರಿಯಾಗಲಿರುವ ಜಿಎಸ್ ಟಿ ಹಿನ್ನೆಲೆಯಲ್ಲಿ ಟೆಲಿಕಾಂ, ಇನ್ಸೂರೆನ್ಸ್, ಹೋಟೆಲ್ಸ್ ಹಾಗೂ ರೆಸ್ಟೋರೆಂಟ್ ಸೇರಿದಂತೆ ನಾಲ್ಕು ಸೇವಾ ತೆರಿಗೆಯನ್ನು ಅಂತಿಮಗೊಳಿಸಿದೆ.
50 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುವ ರೆಸ್ಟೋರೆಂಟ್ ಗಳು ಜಿಎಸ್ ಟಿ ಅಡಿಯಲ್ಲಿ ಶೇ.5ರಷ್ಟಿ ತೆರಿಗೆ ಪಾವತಿಸಬೇಕು, ಎಸಿ ರಹಿತ ರೆಸ್ಟೋರೆಂಟ್ ಗಳು ಶೇ.12ರಷ್ಟು ತೆರಿಗೆ ಬೀಳಲಿದೆ. ಎಸಿ ಬಾರ್ ಅಂಡ್ ರೆಸ್ಟೋರೆಂಟ್ ಶೇ.18ರಷ್ಟು ತೆರಿಗೆ, ಪಂಚತಾರಾ ಹೋಟೆಲ್ ಗಳು ಶೇ.28ರಷ್ಟು ತೆರಿಗೆ ನಿಗದಿಪಡಿಸಿದೆ.
ಓಲಾ, ಉಬೇರ್ ಕ್ಯಾಬ್ ಗಳ ಸೇವೆಗೆ ಶೇ.5ರಷ್ಟು ತೆರಿಗೆ ವಿಧಿಸಿದೆ. ಸೆಲ್ಯೂನ್, ದೂರವಾಣಿ ಬಿಲ್ ಗಳಿಗೂ ಹೊಸ ತೆರಿಗೆ ದರದ ಬಿಸಿ ತಟ್ಟಲಿದೆ. ರೈಲು, ವಿಮಾನ ಹಾಗೂ ಸಾರಿಗೆ ಶೇ.5ರಷ್ಟು ತೆರಿಗೆ ಹೊರೆ ಕಡಿಮೆಯಾಗಲಿದೆ. ಅಲ್ಲದೇ ಜೂನ್ 3ರಂದು ನಡೆಯಲಿರುವ ಜಿಎಸ್ ಟಿ ಸಭೆಯಲ್ಲಿ ಚಿನ್ನದ ಮೇಲಿನ ತೆರಿಗೆ ದರವನ್ನು ನಿಗದಿಪಡಿಸುವುದಾಗಿ ಜೇಟ್ಲಿ ಮಾಹಿತಿ ನೀಡಿದ್ದಾರೆ.
ಹಾಲು, ಹಣ್ಣು, ತರಕಾರಿಗಳಿಗೆ ತೆರಿಗೆ ವಿನಾಯ್ತಿ. ಸಕ್ಕರೆ, ಟೀ, ಕಾಫಿ ಮತ್ತು ಖಾದ್ಯ ಎಣ್ಣೆಗೆ ಶೇ.5ರಷ್ಟು ಕಡಿಮೆ ದರದ ತೆರಿಗೆ ವಿಧಿಸಲಾಗಿದೆ. ಹಿಂದೂಸ್ತಾನ್ ಯೂನಿಲಿವರ್, ನೆಸ್ಲೆ ಇಂಡಿಯಾ ಹಾಗೂ ಡಾಬರ್ ಇಂಡಿಯಾ ಕಂಪನಿಗಳು ಕೂಡಾ ಹೆಚ್ಚಿನ ಲಾಭ ಪಡೆಯುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಶೇವಿಂಗ್ ಮತ್ತು ಕೇಶ ತೈಲ, ಸೋಪು, ಟೂತ್ ಪೇಸ್ಟ್ ಗೆ ಶೇ.28ರಿಂದ ಶೇ.18ರಷ್ಟು ತೆರಿಗೆ ಸಾಧ್ಯತೆ ಇದೆ.
ಗುರುವಾರ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಎಲ್ಲ ರಾಜ್ಯಗಳ ಪ್ರತಿನಿಧಿಗಳ ಸಭೆಯಲ್ಲಿ 1,211 ವಸ್ತುಗಳ ಪೈಕಿ 1205ಕ್ಕೆ ತೆರಿಗೆ ದರವನ್ನು ನಿಗದಿಪಡಿಸಲಾಗಿತ್ತು.