ನವದೆಹಲಿ: ಚಿನ್ನ ಖರೀದಿದಾರರಿಗೆ ಒಂದು ಶುಭ ಸುದ್ದಿ. ಇನ್ನು ಮುಂದೆ ಐವತ್ತು ಸಾವಿರಕ್ಕಿಂತ ಅಧಿಕ ಮೊತ್ತದ ಚಿನ್ನಾಭರಣಗಳ ಖರೀದಿಗೆ ಪಾನ್ ಕಾರ್ಡ್ ಸಲ್ಲಿಸುವ ಅಗತ್ಯವಿರುವುದಿಲ್ಲ ಶುಕ್ರವಾರದಂದು ನವದೆಹಲಿಯಲ್ಲಿ ಸಭೆ ಸೇರಿದ್ದ ಜಿ.ಎಸ್.ಟಿ. ಸಮಿತಿಯ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಮಾತ್ರವಲ್ಲದೇ ಮೌಲ್ಯಯುತ ಹರಳುಗಳು, ಚಿನ್ನಾಭರಣಗಳು ಸೇರಿತದಂತೆ ಇತರೇ ಅಧಿಕ ಮೌಲ್ಯದ ಉತ್ಪನ್ನಗಳ ವಾರ್ಷಿಕ ವಹಿವಾಟು 2 ಕೋಟಿ ಮತ್ತು ಅದಕ್ಕಿಂತ ಅಧಿಕವಿದ್ದಲ್ಲಿ ಇವುಗಳು ಪಿ.ಎಂ.ಎಲ್.ಎ. ಅಡಿಯಲ್ಲಿ ಬರುವುದಿಲ್ಲ ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ.
Advertisement