Advertisement
ಹೀಗಾಗಿ ಅವುಗಳ ಬೆಲೆ ಏರಿಕೆಯಾಗಿ ಗ್ರಾಹಕರಿಗೆ ಹೊರೆಯಾಗಲಿದೆ. ಕೇಂದ್ರ ಸರಕಾರವು ಪ್ಯಾಕ್ ಮಾಡಲಾದ ಈ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಿರುವ ಪರಿಣಾಮ ಇದು.
ಮೊಸರು ಮತ್ತು ಮಜ್ಜಿಗೆ ಪೊಟ್ಟಣಗಳ ಮೇಲೆ ಹಳೆ ದರ ಮುದ್ರಿತವಾಗಿದ್ದು, ಈ ದಾಸ್ತಾನು ಮುಗಿಯುವವರೆಗೆ ಇಂಕ್‌ಜೆಟ್ ಮೂಲಕ ಪರಿಷ್ಕೃತ ದರಗಳನ್ನು ಮುದ್ರಿಸಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ. ಎಲ್ಲ ಗ್ರಾಹಕರು ಸಹಕರಿಸುವಂತೆ ಕೆಎಂಎಫ್ ಕೋರಿದೆ.
Related Articles
ಮಂಗಳೂರು: ಕೇಂದ್ರ ಸರಕಾರವು ಮೊಸರು, ಮಜ್ಜಿಗೆ ಹಾಗೂ ಲಸ್ಸಿಗಳ ಮೇಲೆ ಶೇ. 5ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ವಿಧಿಸಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜು. 18ರಿಂದ ಅನ್ವಯವಾಗುವಂತೆ ನಂದಿನಿ ಮೊಸರು (250 ಗ್ರಾಂ) 13 ರೂ., ಮೊಸರು (415 ಗ್ರಾಂ) 23 ರೂ., ಮೊಸರು (1 ಕೆ.ಜಿ.) 47 ರೂ., ಮೊಸರು (6 ಕೆ.ಜಿ.) 279 ರೂ., ಮಜ್ಜಿಗೆ (200 ಗ್ರಾಂ) 8 ರೂ., ಸಾದಾ ಮಜ್ಜಿಗೆ (500 ಗ್ರಾಂ) 20 ರೂ., ಸಿಹಿ ಲಸ್ಸಿ (200 ಗ್ರಾಂ) 13 ರೂ.ಗಳಂತೆ ಗರಿಷ್ಠ ಮಾರಾಟ ದರವನ್ನು ಪರಿಷ್ಕರಿಸಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ. ಅಶೋಕ್ ತಿಳಿಸಿದ್ದಾರೆ.
Advertisement
ಬೇರೆ ಯಾವುದಕ್ಕೆಲ್ಲ ದರ ಹೆಚ್ಚಳ?ಶೇ. 5- ಬೆಲ್ಲ, ಅಕ್ಕಿ, ಬಾರ್ಲಿ, ಹುರಿಹಗ್ಗ, ರಾಗಿ, ಗೋಧಿಹುಡಿ
ಶೇ. 12- ಎಣ್ಣೆಯಲ್ಲಿ ಕರಿದು ಪ್ಯಾಕ್ ಮಾಡಿದ ತಿನಿಸುಗಳಿಗೆ
ಶೇ. 12- ಪ್ಯಾಕ್ ಮಾಡಿದ ಎಳನೀರು