Advertisement

ಜಿಎಸ್‌ಟಿಗಾಗಿ ಕಾರು ಭಾರೀ ಅಗ್ಗ

11:36 AM Jun 17, 2017 | Karthik A |

ಹೊಸದಿಲ್ಲಿ: ಜು.1ರಿಂದ ಜಿಎಸ್‌ಟಿ ಜಾರಿಯಾಗಲಿದ್ದು, ಇದರ ಮುನ್ನವೇ ಆಟೋಮೊಬೈಲ್‌ ಕ್ಷೇತ್ರದಲ್ಲಿ ಭರ್ಜರಿ ಡಿಸ್ಕೌಂಟ್‌ ಮೇಳವೇ ಶುರುವಾಗಿದೆ. ದೇಶಾದ್ಯಂತ ಸರಕು ಮತ್ತು ಸೇವೆಗಳ ತೆರಿಗೆ ಜಾರಿಗೆ ಬರಲಿದ್ದು, ಕೆಲವು ವಸ್ತುಗಳ ದರ ಏರಿಕೆಯಾಗಲಿದೆ. ಹೀಗಾಗಿ ಅದಕ್ಕೂ ಮುನ್ನವೇ ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಕಂಪೆನಿಗಳು ಭಾರೀ ಪ್ರಮಾಣದ ರಿಯಾಯಿತಿ ಕೊಡಲು ಮುಂದಾಗಿವೆ.

Advertisement

ಆಟೋಮೊಬೈಲ್‌ ಕ್ಷೇತ್ರದಲ್ಲಿ ಮಾರುತಿ ಸುಜುಕಿ, ಹ್ಯುಂಡೈ, ಹೋಂಡಾ, ನಿಸಾನ್‌, ಮಹೀಂದ್ರಾ ಮತ್ತು ಮಹೀಂದ್ರಾ ಹಾಗೂ ಫೋರ್ಡ್‌ ಇಂಡಿಯಾ ಕಂಪೆನಿಗಳು ಡಿಸ್ಕೌಂಟ್‌ ಘೋಷಿಸಿವೆ. ಮಾರುತಿ ಸುಜುಕಿ ಸಂಸ್ಥೆ 25 ಸಾವಿರ ರೂ.ಗಳಿಂದ 35 ಸಾವಿರ ರೂ.ಗಳವರೆಗೆ ರಿಯಾಯಿತಿ ಘೋಷಿಸಿದೆ. ಹೆಚ್ಚು ಡಿಸ್ಕೌಂಟ್‌ ಇರುವುದು ಅಲ್ಟೋ ಕಾರಿಗೆ.  ಹಾಗೆಯೇ ಮಹೀಂದ್ರಾ ಮತ್ತು ಮಹೀಂದ್ರಾ 27 ಸಾವಿರ ರೂ.ಗಳಿಂದ 90 ಸಾವಿರ ರೂ.ಗಳವರೆಗೆ ರಿಯಾಯಿತಿ ನೀಡುತ್ತಿದೆ. ಹ್ಯುಂಡೈನಲ್ಲಿ 25 ಸಾವಿರ ರೂ.ಗಳಿಂದ 2.5 ಲಕ್ಷದ ವರೆಗೆ ಡಿಸ್ಕೌಂಟ್‌ ಇದೆ. ಎಲೈಟ್‌ ಐ20 ಮತ್ತು ಎಕ್ಸೆಂಟ್‌ಗೆ 25 ಸಾವಿರ ರೂ. ಡಿಸ್ಕೌಂಟ್‌ ಇದ್ದರೆ, ಪ್ರೀಮಿಯಮ್‌ ಎಸ್‌ಯುವಿ ಸಾಂತಾಫೇಗೆ 2.5 ಲಕ್ಷ ರೂ. ಡಿಸ್ಕೌಂಟ್‌ ಇದೆ. ಹಾಗೆಯೇ ಇಯಾನ್‌ಗೆ 45 ಸಾವಿರ, ಗ್ರಾಂಡ್‌ ಐ10ಗೆ 73 ಸಾವಿರ, ವರ್ನಾಗೆ 90 ಸಾವಿರ ರೂ. ರಿಯಾಯಿತಿ ಇದೆ. ಹೋಂಡಾ 14,500 ರೂ.ಗಳಿಂದ 60 ಸಾವಿರ ರೂ.ಗಳ ವರೆಗೆ ಡಿಸ್ಕೌಂಟ್‌ ನೀಡುತ್ತಿದೆ. ಬ್ರಿಯೋಗೆ 14,500 ರೂ., ಅಮೇಜ್‌ಗೆ 50 ಸಾವಿರ ರೂ., ಜಾಜ್‌ಗೆ 17 ಸಾವಿರ, ಬಿ-ಆರ್‌ವಿಗೆ 60 ಸಾವಿರ ರೂ. ರಿಯಾಯಿತಿ ಇದೆ. ಫೋರ್ಡ್‌ ಇಂಡಿಯಾ ಎಸ್‌ಯುವಿ ಎಕೋ ನ್ಪೋರ್ಟ್‌ಗೆ 30 ಸಾವಿರ ಡಿಸ್ಕೌಂಟ್‌ ಇದೆ.

Advertisement

Udayavani is now on Telegram. Click here to join our channel and stay updated with the latest news.

Next