Advertisement

ಜಿಎಸ್‌ಟಿ: ಚಿನ್ನ, ಹರಳಿನ ಮೇಲೆ ಶೇ. 1.25 ಮಿತಿಗೆ ಯತ್ನ

11:44 AM Mar 25, 2017 | Team Udayavani |

ಉಡುಪಿ: ಕೇಂದ್ರ ಸರಕಾರ ಜಿಎಸ್‌ಟಿ ತೆರಿಗೆ ಪದ್ಧತಿ ಅಳವಡಿಸುವಾಗ ಚಿನ್ನಾಭರಣ ಮತ್ತು ಹರಳುಗಳ ಮೇಲೆ ಶೇ. 1.25ಗೆ ಮಿತಿಗೊಳಿಸುವಂತೆ ಕರ್ನಾಟಕ ಜುವೆಲರ್ ಫೆಡರೇಶನ್‌ (ಕೆಜೆಎಫ್), ಅ.ಭಾ. ಜೆಮ್‌ ಆ್ಯಂಡ್‌ ಜುವೆಲರಿ ಫೆಡರೇಶನ್‌ (ಜಿಜೆಎಫ್) ಸರಕಾರಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದೆ. ಜಿಎಸ್‌ಟಿ ಹೆಚ್ಚಿಸುವಂತೆ ಒತ್ತಡ ಹೇರುತ್ತಿರುವ ರಾಜ್ಯಗಳಾದ ಕೇರಳ, ಪ.ಬಂಗಾಲ, ಜಮ್ಮು ಕಾಶ್ಮೀರ, ಬಿಹಾರದ ವಿತ್ತ ಸಚಿವಾಲಯಗಳಿಗೆ ಮನವರಿಕೆ ಮಾಡುತ್ತಿರುವುದಾಗಿ ಕೆಜೆಎಫ್ ಚೆಯರ್‌ಮನ್‌ ಜಿ. ಜಯ ಆಚಾರ್ಯ ತಿಳಿಸಿದರು. 

Advertisement

ಬೆಂಗಳೂರಿನಲ್ಲಿ ಕೆಜೆಎಫ್ ವತಿಯಿಂದ ಜರಗಿದ ಚಿನ್ನಾಭರಣಗಳ ಮೇಲೆ ಜಿಎಸ್‌ಟಿ ಹೇರಿಕೆ ಬಗ್ಗೆಏರ್ಪಡಿಸಲಾದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತ ನಾಡಿದರು.ಸಂಪನ್ಮೂಲ ವ್ಯಕ್ತಿಯಾದ ಲೆಕ್ಕಪರಿಶೋಧಕ ಸುಬ್ರಮಣಿ ಜಿಎಸ್‌ಟಿ ಕುರಿತು ಮಾಹಿತಿ ನೀಡಿದರು. ಅದರಂತೆ 2 ಲ.ರೂ.ಗಿಂತ ಹೆಚ್ಚಿನ ವ್ಯವಹಾರಗಳನ್ನು ಕಡ್ಡಾಯವಾಗಿ ಬ್ಯಾಂಕ್‌ ಮುಖಾಂತರ ಮಾಡಬೇಕು. ಅದಕ್ಕಿಂತ ಹೆಚ್ಚಿನ ನಗದು ವ್ಯವಹಾರಗಳಿಗೆ ಅಷ್ಟೇ ಮೊತ್ತದ ದಂಡ ಕಟ್ಟಬೇಕಾಗುತ್ತದೆ. 2,000 ರೂ.ಗಿಂತ ಹೆಚ್ಚಿನ ನಗದು ದೇಣಿಗೆಗೆ 80 ಜಿ ತೆರಿಗೆ ವಿನಾಯಿತಿ ಅನ್ವಯಿಸುವುದಿಲ್ಲ (ಮೊದಲು 20,000 ರೂ. ಮಿತಿ ಇತ್ತು). 10,000 ರೂ.ಗಿಂತ ಹೆಚ್ಚಿನ ಖರ್ಚುಗಳನ್ನು ಬ್ಯಾಂಕ್‌ ಮೂಲಕ ಮಾಡಬೇಕು ಎಂದರು.

ಜಿಜೆಎಫ್ ನಿಕಟಪೂರ್ವ ಅಧ್ಯಕ್ಷ ಜಿ.ವಿ. ಶ್ರೀಧರ ಅವರು, ಜಿಎಸ್‌ಟಿ ಎಲ್ಲ ಮಾಹಿತಿ ಹೊಂದಿಧಿರುವ ಸಾಫ್ಟ್ವೇರ್‌ನ್ನು ಜುವೆಲರಿಗಳಿಗೆ ಅನುಕೂಲ ವಾಗುವಂತೆ ಜಿಜೆಎಫ್ ವತಿಯಿಂದ ತಯಾರಿಸುತ್ತಿರುವುದಾಗಿ ಹೇಳಿದರು.ಕೆಜೆಎಫ್ ಸಲಹಾ ಸಮಿತಿ ಚೆಯರ್‌ಮನ್‌ ಸುಮೇಶ್‌ ವಡೇರ, ಕೆಜೆಎಫ್ ಪ್ರ.ಕಾರ್ಯದರ್ಶಿ ಡಾ| ರಾಮಾಚಾರ್ಯ, ಸಹ ಕಾರ್ಯದರ್ಶಿ ಒ.ವಿ. ದಿವಾಕರ್‌, ಚಿಂತಾಮಣಿ ರಾಜಶೇಖರ್‌, ಖಜಾಂಚಿ ಶ್ರೀಕಾಂತ ಕರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next