Advertisement

ನ್ಯಾಯಬದ್ಧ ಲಾಭಸಹಿತ ವ್ಯಾಪಾರ ವಹಿವಾಟಿಗಾಗಿ ಜಿಎಸ್‌ಟಿ

11:48 AM Jun 23, 2017 | |

ಜಿಎಸ್‌ಟಿ ಅಡಿಯಲ್ಲಿ ಪ್ರತಿಯೊಬ್ಬ ವ್ಯಾಪಾರಿಯೂ ತಿಂಗಳಲ್ಲಿ ಒಮ್ಮೆ ಮುಖ್ಯ ವಿವರಣೆಯನ್ನು ತುಂಬಬೇಕಾಗುತ್ತದೆ ಮತ್ತು ತೆರಿಗೆ ಸಂದಾಯ ಮಾಡಬೇಕಾಗುತ್ತದೆ. ವ್ಯಾಪಾರಿಗಳು ತಮ್ಮ ಲೆಕ್ಕಪತ್ರವನ್ನು ಜಿಎಸ್‌ಟಿಎನ್‌ ಮೂಲಕ ಎಕ್ಸೆಲ್‌ ಶೀಟ್‌ ಆಗಿ ಇರಿಸಿದರೆ, ಪ್ರತಿ ತಿಂಗಳೂ ಆ ಲೆಕ್ಕಪತ್ರವು ತಾನಾಗಿಯೇ ವಿವರಣೆಯ ರೂಪದಲ್ಲಿ ಪರಿವರ್ತನೆಗೊಳ್ಳುತ್ತದೆ.

Advertisement

ದೇಶಾದ್ಯಂತ ಜಿಎಸ್‌ಟಿಯ ಕುರಿತು ಕುತೂಹಲ ಉಂಟಾಗಿದೆ. ಜಿಎಸ್‌ಟಿಯನ್ನು ಸ್ವಾತಂತ್ರೊéàತ್ತರ ಭಾರತದಲ್ಲಿ ಬೃಹತ್‌ ತೆರಿಗೆ ಸುಧಾರಣೆ ಎಂಬುದಾಗಿ ಏಕೆ ಪರಿಗಣಿಸಲಾಗಿದೆ ಎಂಬುದನ್ನು ಜನರು ಅರಿಯಲು ಆಶಿಸುತ್ತಿದ್ದಾರೆ. ಈ ಲೇಖನದ ಮೂಲಕ ಜಿಎಸ್‌ಟಿಯ ಸ್ವರೂಪ, ಅದರ ಕೆಲವು ಲಾಭಗಳು, ತೆರಿಗೆಯನ್ನು ವಸೂಲಿ ಮಾಡುವ ಹಾಗೂ ವಿವರಣೆಗಳನ್ನು ತುಂಬುವ ಪ್ರಕ್ರಿಯೆಯನ್ನು ಕುರಿತು ಕೆಲವು ಮಾಹಿತಿಯನ್ನು ಪ್ರಸ್ತುತ ಪಡಿಸುತ್ತಿದ್ದೇನೆ.

ಪ್ರಸ್ತುತ ಕೇಂದ್ರ ಸರಕಾರವು ಬೇರೆ ಬೇರೆ ವಸ್ತುಗಳ ಮೇಲೆ ಅಬಕಾರಿ, ಹೆಚ್ಚುವರಿ ಅಬಕಾರಿ, ಹೆಚ್ಚುವರಿ ಸೀಮಾ ಸುಂಕ, ವಿಶೇಷ ಹೆಚ್ಚುವರಿ ಸುಂಕ ಮುಂತಾದ ಹಲವು ತೆರಿಗೆಗಳನ್ನು ಹಾಕುತ್ತಿದೆ ಮತ್ತು ಸೇವೆಗಳ ಮೇಲೆ ಸೇವಾ ತೆರಿಗೆಯನ್ನು ಹೊರಿಸಲಾಗುತ್ತಿದೆ. ಹಾಗೆಯೇ ರಾಜ್ಯ ಸರಕಾರಗಳಿಂದ ಮಾರಾಟ ತೆರಿಗೆ, ಕೇಂದ್ರೀಯ ಮಾರಾಟ ತೆರಿಗೆ, ಖರೀದಿ ತೆರಿಗೆ, ಮನೋರಂಜನಾ ತೆರಿಗೆ, ಲಾಟರಿ ತೆರಿಗೆ, ಆಕ್ಟ್ರಾಯ್‌, ಪ್ರವೇಶ ತೆರಿಗೆ ಮುಂತಾದ ಬೇರೆ ಬೇರೆ ತೆರಿಗೆಗಳನ್ನು ಹಾಕಲಾಗುತ್ತಿದೆ.

ಇವುಗಳನ್ನು ಹೊರತುಪಡಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ಮೂಲಕ ವಿಭಿನ್ನ ಪ್ರಕಾರಗಳ ಸೆಸ್‌ ಹಾಗೂ ಸರ್ಚಾರ್ಜ್‌ ಕೂಡ ಹೇರಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಮೂಲಕ ವಿಧಿಸಲಾಗುವ ಎಲ್ಲ ತೆರಿಗೆಗಳನ್ನು ಏಕೀಕೃತಗೊಳಿಸಿ ಒಂದೇ ಪ್ರಕಾರವಾದ ತೆರಿಗೆಯನ್ನಾಗಿಸಿದರೆ ವಿಭಿನ್ನ ತೆರಿಗೆ ಮತ್ತು ಪುನರ್‌ ತೆರಿಗೆಯ ಸಮಸ್ಯೆಯನ್ನು ನಿವಾರಿಸಿದಂತಾಗುತ್ತದೆ ಹಾಗೂ ಏಕೀಕೃತ ರಾಷ್ಟ್ರೀಯ ಮಾರುಕಟ್ಟೆಯ ಹಾದಿಯೂ
ಸುಗಮವಾಗುತ್ತದೆ.  ಗ್ರಾಹಕರ ದೃಷ್ಟಿಯಿಂದ ನೋಡಿದರೆ, ವಸ್ತುಗಳ ಮೇಲೆ ಬೇರೆ ಬೇರೆ ಸ್ತರಗಳಲ್ಲಿ ಹೊರಿಸಲಾಗುವ
ತೆರಿಗೆ ಭಾರವೂ ಕಡಿಮೆ ಆಗುತ್ತದೆ. ಇಂದು ತೆರಿಗೆ ಹೊರೆಯು ಸುಮಾರು ಶೇ.25ರಿಂದ ಶೇ.30ರವರೆಗೂ ಇದೆ. ಜಿಎಸ್‌ಟಿ ಅಸ್ತಿತ್ವಕ್ಕೆ ಬಂದ ಅನಂತರ ಭಾರತೀಯ ಉತ್ಪಾದಕರು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಇದರಿಂದಾಗಿ ಆರ್ಥಿಕ ವಿಕಸನದ ಮೇಲೆ ಒಳ್ಳೆಯ ಪ್ರಭಾವ ಉಂಟಾಗಬಹುದು ಎಂದು ಅಧ್ಯಯನಗಳ ಮೂಲಕ ತಿಳಿದುಬಂದಿದೆ.

ಸಂವಿಧಾನದಲ್ಲಿ, ಜಿಎಸ್‌ಟಿಯ ಮಹತ್ವಪೂರ್ಣ ಅಂಶಗಳ ಮೇಲೆ (ದರವನ್ನೂ ಒಳಗೊಂಡು) ನಿರ್ಣಯವನ್ನು
ತೆಗೆದುಕೊಳ್ಳುವ ಪೂರ್ಣ ಅಧಿಕಾರವನ್ನು ಜಿಎಸ್‌ಟಿ ಪರಿಷತ್ತಿಗೆ ನೀಡಲಾಗಿದೆ. ಪರಿಷತ್ತಿನ ಸಭೆಗಳಲ್ಲಿ ಇಲ್ಲಿಯವರೆಗೆ
ತೆಗೆದುಕೊಳ್ಳಲಾದ ನಿರ್ಣಯಗಳಲ್ಲಿ ಮುಖ್ಯವಾದುದೆಂದರೆ, ಶೇ.5, ಶೇ.12, ಶೇ.18 ಅಥವಾ ಶೇ.28- ತೆರಿಗೆ ದರಗಳು ಇವು ನಾಲ್ಕೇ. ವ್ಯಾಪಾರಗೊಳ್ಳುವ ವಸ್ತುಗಳಿಗೆ ಅನುಗುಣವಾಗಿ ಈ ನಾಲ್ಕು ತೆರಿಗೆ ದರಗಳಲ್ಲಿ ಯಾವುದಾದರೂ ಒಂದು ತೆರಿಗೆ ದರವನ್ನು ವಸ್ತುಗಳ ಮೇಲೆ ಹೊರಿಸಲಾಗುವುದು.

Advertisement

ಅಲ್ಲದೆ, ಕೆಲವು ವಸ್ತುಗಳು ಹಾಗೂ ಸೇವೆಗಳ ಮೇಲೆ ಯಾವ ತೆರಿಗೆಯನ್ನೂ ಹೊರಿಸಲಾಗುವುದಿಲ್ಲ. ಅಂದರೆ ಅವು ವಿನಾಯಿತಿ ಸೂಚಿಯಲ್ಲಿರುವ ವಸ್ತುಗಳಾಗಿರುತ್ತವೆ. ಬೆಳ್ಳಿ, ಬಂಗಾರ ಹಾಗೂ ಅವುಗಳಿಂದ ತಯಾರಿಸಲಾದ ಒಡವೆಗಳ ಮೇಲೆ ವಿಶೇಷವಾದ ತೆರಿಗೆ ದರವನ್ನು ನಿರ್ಧರಿಸುವುದು ಬಾಕಿ ಉಳಿದಿದೆ. ರಫ್ತು ಪದಾರ್ಥಗಳ ಮೇಲೆ ದೇಶದೊಳಗೆ ಸಂದಾಯವಾದ ತೆರಿಗೆ ಮೊತ್ತವನ್ನು ರೀಫ‌ಂಡ್‌ ಮೂಲಕ ವಾಪಸು ಮಾಡಲಾಗುವುದು.

ಆಮದು ವಸ್ತುಗಳ ಮೇಲೆ ತಗಲುವ ಸೀಮಾ ಸುಂಕದ ಜತೆಗೆ ಆ ವಸ್ತುಗಳ ಮೇಲೆ ದೇಶದೊಳಗೆ ತಗುಲುವ ಜಿಎಸ್‌ಟಿ ತೆರಿಗೆಯ ಮೊತ್ತಕ್ಕೆ ಸಮಾನವಾದ ಮೊತ್ತವನ್ನು ಮಾತ್ರ ವಿಧಿಸಲಾಗುವುದು.

ಜಿಎಸ್‌ಟಿ ಅಡಿಯಲ್ಲಿ ವ್ಯಾಪಾರಿಗಳು ಹಾಗೂ ಉತ್ಪಾದಕರಿಗೆ ಏಕ ತೆರಿಗೆ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಸಣ್ಣ ವ್ಯಾಪಾರಿಗಳಿಗೆ ಅತ್ಯಧಿಕ ಲಾಭವನ್ನು ನೀಡಲಾಗಿದೆ. ಪ್ರಸ್ತುತ ದೇಶದ ಬಹುತೇಕ ರಾಜ್ಯಗಳಲ್ಲಿ ರೂ.10 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸುವ ವ್ಯಾಪಾರಿಗಳು ಮಾರಾಟ ತೆರಿಗೆ ಭರಿಸಬೇಕಾಗಿದೆ. ಜಿಎಸ್‌ಟಿ ಅಡಿಯಲ್ಲಿ ವಿಶೇಷ ವರ್ಗದಲ್ಲಿ ಬರುವ ಪರ್ವತ ಪ್ರಾಂತ್ಯದ ರಾಜ್ಯಗಳನ್ನು ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಈ ಮಿತಿಯನ್ನು ರೂ.20 ಲಕ್ಷಕ್ಕೆ ಏರಿಸಲಾಗಿದೆ. ಅಂದರೆ, ವ್ಯಾಪಾರಿಯೊಬ್ಬರ ವಾರ್ಷಿಕ ವಹಿವಾಟು ರೂ.10ರಿಂದ ರೂ. 20 ಲಕ್ಷದವರೆಗೆ ಇದ್ದರೂ ಯಾವುದೇ ತೆರಿಗೆಯನ್ನು ಭರಿಸಬೇಕಾದ ಮತ್ತು ನೋಂದಾಯಿಸಿಕೊಳ್ಳಬೇಕಾದ ಆವಶ್ಯಕತೆ ಇಲ್ಲ. ಪ್ರಸ್ತುತ ಮಾರಾಟ ತೆರಿಗೆ, ಸೇವಾ ತೆರಿಗೆ ಮತ್ತು ಕೇಂದ್ರ ಅಬಕಾರಿ ತೆರಿಗೆ ಅಡಿಯಲ್ಲಿ ನೊಂದಾಯಿತರಾದ ಬಹುತೇಕ ವ್ಯಾಪಾರಿಗಳಿಗೆ ಜಿಎಸ್‌ಟಿ ಅಡಿಯಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ.

ಜಿಎಸ್‌ಟಿ ಅಡಿಯಲ್ಲಿ ಪ್ರತಿಯೊಬ್ಬ ವ್ಯಾಪಾರಿಯೂ ತಿಂಗಳಲ್ಲಿ ಒಮ್ಮೆ ಮುಖ್ಯ ವಿವರಣೆಯನ್ನು ತುಂಬಬೇಕಾಗುತ್ತದೆ ಮತ್ತು ತೆರಿಗೆ ಸಂದಾಯ ಮಾಡಬೇಕಾಗುತ್ತದೆ. ವ್ಯಾಪಾರಿಗಳು ತಮ್ಮ ಲೆಕ್ಕಪತ್ರವನ್ನು ಜಿಎಸ್‌ಟಿಎನ್‌ ಮೂಲಕ ಎಕ್ಸೆಲ್‌ ಶೀಟ್‌ ಆಗಿ ಇರಿಸಿದರೆ, ಪ್ರತಿ ತಿಂಗಳೂ ಆ ಲೆಕ್ಕಪತ್ರವು ತಾನಾಗಿಯೇ ಆಫ್ ಲೈನ್‌ ಟೂಲ್‌ನ ಸಹಾಯದಿಂದ ವಿವರಣೆಯ ರೂಪಕ್ಕೆ ಪರಿವರ್ತನೆಗೊಳ್ಳುತ್ತದೆ. ವ್ಯಾಪಾರಿಯು ತನ್ನ ಎಲ್ಲ ದಾಸ್ತಾನನ್ನು ಬಿಡಿಯಾಗಿ ಗ್ರಾಹಕರಿಗೆ ಮಾರಾಟ ಮಾಡಿದರೆ (ಬಿಯಿಂದ ಸಿ) ಅಂತಹ ವ್ಯಾಪಾರಿಗಳು ಸಲ್ಲಿಸಬೇಕಾದ ವಿವರಣೆಯು
ಸರಳವಾಗಿರುತ್ತದೆ. ದರಕ್ಕೆ ಅನುಗುಣವಾಗಿ ವಹಿವಾಟು ವಿವರಣೆ ನೀಡಬೇಕಾಗುತ್ತದೆ. 50 ಲಕ್ಷ ರೂಪಾಯಿಗಳಿಗಿಂತ ಕಡಿಮೆ ವಾರ್ಷಿಕ ವಹಿವಾಟು ಇರುವ, ಕೊಂಪೊಸಿಶನ್‌ ಯೋಜನೆಯ ಲಾಭವನ್ನು ಪಡೆದ ವ್ಯಾಪಾರಿಗಳು ಮೂರು ತಿಂಗಳಿಗೆ ಒಮ್ಮೆ ತಮ್ಮ ಒಟ್ಟು ವಹಿವಾಟಿನ ತೆರಿಗೆ ವಿವರಣೆಯನ್ನು ಸಲ್ಲಿಸಬೇಕಾಗುತ್ತದೆ.

ಒಂದು ವ್ಯಾಪಾರದಿಂದ ಇನ್ನೊಂದು ವ್ಯಾಪಾರಕ್ಕಾಗಿ (ಬಿ ಇಂದ ಬಿ) ವಹಿವಾಟು ನಡೆಸುವ ವ್ಯಾಪಾರಿಗಳು, ತಮ್ಮ
ಮಾರಾಟದ ಪ್ರತಿಯೊಂದು ಇನ್ವಾಯಿಸ್‌ನ ಪೂರ್ಣ ವಿವರಣೆಯನ್ನು ನೀಡಬೇಕಾಗುತ್ತದೆ. ವ್ಯಾಪಾರಿಯು ತನ್ನ
ಮಾರಾಟ ವಿವರಣೆಗಳನ್ನು ಪ್ರತೀ ತಿಂಗಳ 10ನೇ ತಾರೀಕಿನೊಳಗೆ ಜಿಎಸ್‌ಟಿ ವೆಬ್‌ಸೈಟ್‌ನಲ್ಲಿ ವಿವರಣೆ ಪ್ರಾರೂಪದಲ್ಲಿ ತುಂಬಿದ ಕೂಡಲೇ ಆ ವ್ಯಾಪಾರಿಯು ನಡೆಸಿರುವ ಖರೀದಿಗಳ ಪೂರ್ಣ ವಿವರಗಳು ತಾನಾಗಿಯೇ ಖರೀದಿ ಮಾಡಿರುವವರಿಗೆ ಜಿಎಸ್‌ಟಿಆರ್‌-2 ಆನ್‌ಲೈನ್‌ ಮೂಲಕ ದೊರೆಯುತ್ತವೆ. ಅಂದರೆ ಆ ವಿವರಗಳು ಆಟೋ ಪಾಪ್ಯುಲೇಟ್‌ ಆಗುತ್ತವೆ. ದಾಸ್ತಾನನ್ನು ಖರೀದಿಸಿದ ವ್ಯಾಪಾರಿಯೂ ಆ ವಿವರಗಳನ್ನು ನೋಡಿ ಸರಿ ಇದ್ದರೆ “ಸರಿ’ ಎಂದು ಕ್ಲಿಕ್‌ ಮಾಡಿದರೆ, ಮಾರಾಟ ಮಾಡಿದ ವ್ಯಾಪಾರಿಯೂ ಪೂರ್ಣ ವಿವರಣೆಯನ್ನು ಕಂಪ್ಯೂಟರ್‌ ಮೂಲಕ ವೀಕ್ಷಿಸಬಹುದು. ಆ ವ್ಯಾಪಾರಿಯೂ ತನ್ನ ವಹಿವಾಟಿನ ವಿವರಣೆಗಳನ್ನು ಸ್ವೀಕರಿಸಿದಲ್ಲಿ, ವ್ಯಾಪಾರಿಯು ಭರಿಸಬೇಕಾದ ತೆರಿಗೆ ಮೊತ್ತ ಮತ್ತು ಐಟಿಸಿ ಮೊತ್ತದ ಪೂರ್ಣ ವಿವರಗಳು ಜಿಎಸ್‌ಟಿ ಸಿಸ್ಟಮ್‌ ಮೂಲಕ ತಾನಾಗಿಯೇ ತಯಾರಾಗಿ, ನಿವ್ವಳ ತೆರಿಗೆ ಮೊತ್ತವು ಕಂಡುಬರುತ್ತದೆ. ವ್ಯಾಪಾರಿಯು ತೆರಿಗೆ ಮೊತ್ತ ಮತ್ತು ಐಟಿಸಿ ಮೊತ್ತದ ಅಂತರದ ಮೊತ್ತವನ್ನು ಟ್ಯಾಕÕ… ಆನ್‌ಲೈನ್‌ ಅಥವಾ ಬ್ಯಾಂಕ್‌ ಮೂಲಕ ಭರಿಸಬೇಕಾಗುತ್ತದೆ. ಅನಂತರ ವ್ಯಾಪಾರಿಯು ತಿಂಗಳಿನ 20ನೇ ತಾರೀಕಿನೊಳಗೆ ಜಿಎಸ್‌ಟಿ ಆರ್‌3ನ್ನು ಕ್ಲಿಕ್‌ ಮಾಡಿ ಅಂತಿಮ ವಿವರಣೆಯನ್ನು ಸಲ್ಲಿಸಬೇಕಾಗುತ್ತದೆ.

ಒಂದು ವ್ಯಾಪಾರದಿಂದ ಇನ್ನೊಂದು ವ್ಯಾಪಾರಕ್ಕಾಗಿ (ಬಿ ಇಂದ ಬಿ) ವಹಿವಾಟಿನಲ್ಲಿ ಐಟಿಸಿ ಹಿಂದಿರುಗಿಸುವಿಕೆ
(ರಿವರ್ಸ್‌) ಅಂದರೆ, ಪಡೆದ ಐಟಿಸಿ ಲಾಭವನ್ನು ವಾಪಸು ಮಾಡುವ ಪ್ರಕ್ರಿಯೆ ವ್ಯವಸ್ಥೆ ಲಭ್ಯವಿದೆ. ಈ ಬಗ್ಗೆ ಬಹಳಷ್ಟು
ಜನ ಚಿಂತೆ ವ್ಯಕ್ತಪಡಿಸಿ¨ªಾರೆ. ಆದರೆ ಈ ಪ್ರಕ್ರಿಯೆಯ ಬಗ್ಗೆ ಪೂರ್ಣವಾಗಿ ಅರಿತರೆ ಈಗ ವಿರೋಧಿಸುತ್ತಿರುವವರೂ ಇದನ್ನು ಸಮರ್ಥಿಸುತ್ತಾರೆ ಅನ್ನುವುದು ನಿಸ್ಸಂಶಯ. ನೀವು ಯಾರಿಂದ ವಸ್ತುಗಳನ್ನು ಖರೀದಿಸಿರುತ್ತೀರೋ ಆ ವ್ಯಾಪಾರಿಗಳು ಆ ತಿಂಗಳ 10ನೇ ತಾರೀಕಿನೊಳಗೆ ತಮ್ಮ ವಿವರಣೆಯಲ್ಲಿ ತೋರಿಸಿದಲ್ಲಿ ನಿಮಗೆ ಐಟಿಸಿ ದೊರಕುತ್ತದೆ. ಒಂದುವೇಳೆ ತೋರಿಸದೆ ಇದ್ದಲ್ಲಿ, ಜಿಎಸ್‌ಟಿ ಆರ್‌ 2 ಪ್ರಾರೂಪದಲ್ಲಿ ನೀವು 15ನೇ ತಾರೀಕಿನೊಳಗೆ ಅದನ್ನು ತೋರಿಸುವ ಮತ್ತು ನಿಮ್ಮ ಹೇಳಿಕೆಯ ಮೇರೆಗೆ ಐಟಿಸಿ ಲಾಭವನ್ನು ಪಡೆಯುವ ಅವಕಾಶವಿರುತ್ತದೆ. ಅನಂತರ ಆ ವ್ಯಾಪಾರಿಯನ್ನು ಸಂಪರ್ಕಿಸಿ ತನ್ನ ವಿವರಣೆಯಲ್ಲಿ ಈ ವಹಿವಾಟಿನ ವಿವರವನ್ನು ಕೋರಬಹುದು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ಪಡೆದ ಐಟಿಸಿ ಲಾಭವು ಮುಂದಿನ ತಿಂಗಳಲ್ಲಿ ವಾಪಸಾಗುವ ರಿವರ್ಸ್‌ ಆಗುತ್ತದೆ. ಇದಕ್ಕಾಗಿ ಪೂರ್ತಿ 30 ದಿನಗಳ ಸಮಯಾವಕಾಶ ಇರುತ್ತದೆ. ಅಲ್ಲದೆ, ನಿಮಗೆ ಸರಕು ಮಾರಾಟ ಮಾಡಿದ ವ್ಯಾಪಾರಿಯು ಈ ವಹಿವಾಟನ್ನು ಒಪ್ಪದೆ ಇದ್ದಲ್ಲಿ, ತನ್ನ ವಿವರಣೆಯಲ್ಲಿ ತೋರಿಸದೆ ಇದ್ದರೆ, ದೊರೆತ ಐಟಿಸಿ ಲಾಭವು ಮುಂದಿನ ತಿಂಗಳಲ್ಲಿ ಹಿಂದಿರುಗಿಸಲ್ಪಡುತ್ತದೆ.

ಹೀಗಾಗಿ ತನ್ನಿಂದ ವಸೂಲು ಮಾಡಿಕೊಂಡ ತೆರಿಗೆಯ ಮೊತ್ತವನ್ನು ಸರಕಾರಕ್ಕೆ ಸಂದಾಯ ಮಾಡುವಂತಹ
ವ್ಯಾಪಾರಿಯೊಡನೆಯೇ ವಹಿವಾಟು ನಡೆಸುವುದು ವ್ಯಾಪಾರಿಯ ಜವಾಬ್ದಾರಿಯಾಗಿರುತ್ತದೆ. ಪ್ರತಿಯೊಬ್ಬ ವ್ಯಾಪಾರಿಗೂ ಆತ ಸಂದಾಯ ಮಾಡಿರುವ ತೆರಿಗೆಯ ಮೇಲೆ ಅನುಸರಣ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ. ಎಲ್ಲ ವ್ಯಾಪಾರಿಗಳೂ ಪದೇ ಪದೇ ತೆರಿಗೆ ತಪ್ಪಿಸುವ ವ್ಯಾಪಾರಿಗಳ ಜತೆ ವಹಿವಾಟನ್ನು ಎಚ್ಚರಿಕೆಯಿಂದ ನಡೆಸಬೇಕು.

– ಹಸ್ಮುಖ್‌ ಆಢಿಯಾ,
 ಕಂದಾಯ ಕಾರ್ಯದರ್ಶಿಗಳು, ಭಾರತ ಸರಕಾರ

Advertisement

Udayavani is now on Telegram. Click here to join our channel and stay updated with the latest news.

Next