Advertisement

ಗಿಫ್ಟ್ ವೋಚರ್‌ ಆಧಾರಿತ ಖರೀದಿಗೆ ಜಿಎಸ್‌ಟಿ

09:57 PM Apr 05, 2021 | |

ನವದೆಹಲಿ: ಇ-ಮಾರಾಟ ಜಾಲತಾಣಗಳಾದ ಅಮೆಜಾನ್‌, ಶಾಪರ್ಸ್‌ ಸ್ಟಾಪ್‌ ಅಥವಾ ರಿಟೇಲ್‌ ಶಾಪ್‌ ಗಳು ನೀಡುವ ಗಿಫ್ಟ್ ವೋಚರ್‌ಗಳ ಅಡಿಯಲ್ಲಿ ಖರೀದಿಸಲ್ಪಡುವ ಸಾಮಗ್ರಿಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯವಾಗುತ್ತದೆ ಎಂದು ಅಪೆಲ್ಲೇಟ್‌ ಅಥಾರಿಟಿ ಫಾರ್‌ ಅಡ್ವಾನ್ಸ್‌ ರೂಲಿಂಗ್‌ನ (ಎಎಎಆರ್‌) ವಿಭಾಗೀಯ ಪೀಠ ಸ್ಪಷ್ಟನೆ ನೀಡಿದೆ.

Advertisement

ಗಿಫ್ಟ್ ವೋಚರ್‌ಗಳು ಮಾತ್ರವಲ್ಲದೆ, ಗಿಫ್ಟ್ ಕಾರ್ಡ್‌ಗಳಿಗೂ ಇದು ಅನ್ವಯವಾಗುತ್ತದೆ. ಇವುಗಳ ಅಡಿಯಲ್ಲಿ, ಯಾವುದೇ ಸೇವೆ ಅಥವಾ ಸಾಮಗ್ರಿಗಳನ್ನು ಪಡೆದರೆ ಅಥವಾ ಖರೀದಿಸಿದರೆ ಆಗ ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಎಎಎಆರ್‌ ತಿಳಿಸಿದೆ.

ಈ ಮೊದಲು, ಗಿಫ್ಟ್ ವೋಚರ್‌/ಕಾರ್ಡ್‌ಗಳಿಗೂ ಜಿಎಸ್‌ಟಿ ಅನ್ವಯವಾಗುತ್ತದೆ ಎಂಬ ವದಂತಿಗಳು ಹರಡಿದ್ದವು. ಆ ಹಿನ್ನೆಲೆಯಲ್ಲಿ, ಈ ವಿಚಾರದಲ್ಲಿದ್ದ ಗೊಂದಲಕ್ಕೆ ಕೇಂದ್ರ ತೆರೆ ಎಳೆದಿದೆ.

ಇದನ್ನೂ ಓದಿ :ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಳ : ಶಿರಡಿ ಸಾಯಿಬಾಬಾ ದೇವಸ್ಥಾನದ ಬಾಗಿಲು ಬಂದ್

Advertisement

Udayavani is now on Telegram. Click here to join our channel and stay updated with the latest news.

Next