Advertisement

ಜೇಬಿಗೆ ಹಾನಿಕರ ? ಊಟ-ತಿಂಡಿ, ಬ್ರಾಂಡೆಡ್ ದಿನಸಿ ತುಟ್ಟಿ, ಕಾರು ಅಗ್ಗ

03:45 AM Jul 02, 2017 | Team Udayavani |

ಹೊಸದಿಲ್ಲಿ: ಅಂತೂ ಕಣ್ಣು ಬಿಟ್ಟುಕೊಂಡು ಕಾಯುತ್ತಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾಗಿದ್ದು, ಮೊದಲ ದಿನವೇ ಗೊಂದಲಗಳಿಗೆ ಕಾರಣವಾಗಿದೆ. ಯಾವ ಉತ್ಪನ್ನಕ್ಕೆ ಹೇಗೆ, ಯಾವ ರೀತಿ ತೆರಿಗೆ ಹಾಕಬೇಕು ಎಂಬ ಗೊಂದಲದ ನಡುವೆಯೂ ಕೆಲ ವಸ್ತುಗಳ ಬೆಲೆ ದಿಢೀರನೇ ಏರಿಕೆ ಕಂಡಿದೆ. ಕೆಲ ವಸ್ತುಗಳ ಬೆಲೆ ಇಳಿಕೆಯಾಗಿದೆ.

Advertisement

ಕೈ ಸುಟ್ಟ ಬ್ರಾಂಡೆಡ್ ದಿನಸಿ ವಸ್ತು
ಚಿಲ್ಲರೆ ಅಂಗಡಿಯಲ್ಲಿ ಶುಕ್ರವಾರದ ಬೆಲೆಗೇ ದಿನಸಿ ಪದಾರ್ಥಗಳ ಮಾರಾಟ. ಆದರೆ ಸೂಪರ್‌ ಮಾರ್ಕೆಟ್‌, ಬಿಗ್‌ ಬಜಾರ್‌ಗಳಲ್ಲಿ ಬ್ರ್ಯಾಂಡೆಡ್‌ ದಿನಸಿ ಪದಾರ್ಥಗಳ ದರ ಏರಿಕೆಯಾಗಿದೆ. ಆದರೂ ಕೆಲವು ಮಾಲ್‌ಗ‌ಳು ಸದ್ಯಕ್ಕೆ ರಿಯಾ ಯಿತಿ ದರದಲ್ಲಿ ನೀಡುತ್ತಿವೆ.

“ಬಿಸಿ’ಯಾದ ಕಾಫಿ
ಶನಿವಾರ ಹೊಟೇಲ್‌ಗೆ ಹೋದವರಿಗೆ ದುಬಾರಿ ದರದ ಬಿಲ್‌ ಕಾದಿತ್ತು. ಬೈಟು ಕಾಫಿ ಸ್ಥಗಿತ, ಪ್ರತಿ ತಿಂಡಿ ಮೇಲೂ ಶೇ. 6ರಿಂದ 8 ಬೆಲೆ ಏರಿಕೆ. ಕೆಲವೆಡೆ ಶೇ. 22 ದರ ಹೆಚ್ಚಾಗಿ, ಊಟ-ತಿಂಡಿ ವಿಚಾರದಲ್ಲೇ ಜನ ಜೇಬು ಖಾಲಿ ಮಾಡಿಕೊಂಡರು.

ದುಬಾರಿ ಸಿನೆಮಾ
ವೀಕೆಂಡ್‌ ಸಲುವಾಗಿ ಸಿನೆಮಾ ಮಂದಿರಗಳಿಗೆ ಹೋಗಿದ್ದ ಜನರಿಗೆ ಶೇ.10 ಜಿಎಸ್‌ಟಿ ತೆರಿಗೆ ಬಿದ್ದಿತು. ಹಳೆ ದರದಲ್ಲೇ ಮುದ್ರಿತವಾದ ಟಿಕೆಟ್‌ ಮೇಲೆ ಜಿಎಸ್‌ಟಿಯ ತೆರಿಗೆ ದರ ಮುದ್ರಿಸಿ ನೀಡಲಾಗುತ್ತಿದೆ. ಆದರೆ ಬೆಳಗ್ಗಿನ ಪ್ರದರ್ಶನಕ್ಕೆ ಜಿಎಸ್‌ಟಿ ರಿಯಾಯಿತಿ ಇತ್ತು.

ಐಫೋನ್‌ ಅಗ್ಗ
ಐಫೋನ್‌ ಖರೀದಿ ಮಾಡಬೇಕು ಎಂಬ ಆಲೋಚನೆ ಇದ್ದವರಿಗೆ ಜಿಎಸ್‌ಟಿ ಅವಕಾಶ ನೀಡಿದೆ. 8 ಸಾವಿರದಿಂದ 9,000 ರೂ.ಗಳ ವರೆಗೆ ಐಫೋನ್‌ನ ಎಲ್ಲ ಸೀರಿಸ್‌, ಐಪ್ಯಾಡ್‌, ಮ್ಯಾಕ್‌, ಐ ವಾಚ್‌ಗಳ ಮೇಲೆ ರಿಯಾಯಿತಿ.

Advertisement

ಸ್ಮಾರ್ಟ್‌ಫೋನ್‌ ತುಟ್ಟಿ
ಐಫೋನ್‌ ಬೆಲೆ ಇಳಿಕೆ ಯಾಗಿದ್ದರೆ, ವಿದೇಶ ದಿಂದ ಆಮದಾಗುವ ಸ್ಮಾರ್ಟ್‌ ಫೋನ್‌ಗಳ ದರ ಏರಿಕೆ ಯಾಗಿದೆ. ಜಿಎಸ್‌ಟಿ ಜತೆಗೆ ಶೇ. 10 ಮೂಲ ಕಸ್ಟಮ್‌ ತೆರಿಗೆ ಬೀಳುವುದರಿಂದ  ಬೆಲೆ ಹೆಚ್ಚಾ ಗುತ್ತಿದೆ. ಮೊಬೈಲ್‌ಗೆ ಸಂಬಂಧಿಸಿದ ಇತರ ವಸ್ತುಗಳ ಬೆಲೆಯೂ ತುಟ್ಟಿಯಾಗಿದೆ.

ಜಿಎಸ್‌ಟಿ ಜತೆ ಜತೆಗೇ “ಕಾರು’ಬಾರು
ಕಾರು ರೂಪದಲ್ಲಿ ಜಿಎಸ್‌ಟಿಯ ಉಡು ಗೊರೆ ಸಿಕ್ಕಿದೆ. ಬೆಳಗ್ಗೆಯೇ ಮಾರುತಿ ಕಂಪೆನಿ ಶೇ.3 ತೆರಿಗೆ ಕಡಿತ ಮಾಡುವುದಾಗಿ ಘೋಷಿಸಿತು. ಆದರೆ ಹೈಎಂಡ್‌ ಕಾರುಗಳ ದರವನ್ನು ಒಂದು ಲಕ್ಷದ ರೂ. ವರೆಗೆ ಹೆಚ್ಚಿಸಿತು. ಇನ್ನು ಟಾಟಾ, ಜಾಗ್ವಾರ್‌, ಬಿಎಂಡಬ್ಲ್ಯು, ಟೊಯೋಟಾ, ಲ್ಯಾಂಡ್‌ ರೋವರ್‌ ಕಾರುಗಳ ದರದಲ್ಲಿ ಗಣನೀಯ ಇಳಿಕೆಯಾಗಿದೆ.

ಬೈಕಿಗೆ ಫಿಫ್ಟಿ ಫಿಫ್ಟಿ ದರ
350 ಸಿಸಿಗಿಂತ ಕೆಳಗಿನ ಬೈಕ್‌ಗಳ ತೆರಿಗೆ ಶೇ. 2 ಕಡಿಮೆ  ಆಗಿರುವುದರಿಂದ ಬೈಕ್‌ಗಳ ಬೆಲೆ ಕೊಂಚ ಇಳಿಕೆ
ಆಗುತ್ತಿದೆ. ಆದರೆ 350 ಸಿಸಿಗಿಂತ ಹೆಚ್ಚು ಸಾಮರ್ಥ್ಯದ ಬೈಕ್‌ಗಳ ಮೇಲೆ ಶೇ. 1 ಹೆಚ್ಚುವರಿ ತೆರಿಗೆ ಬೀಳಲಿದೆ.

ಬ್ಯಾಂಕಿಂಗ್‌ ತುಟ್ಟಿ
ಬ್ಯಾಂಕಿಂಗ್‌ ಕ್ಷೇತ್ರ ಇನ್ನಷ್ಟು ದುಬಾರಿ. ಶೇ. 15ರ ಸೇವಾ ತೆರಿಗೆ ಹೋಗಿ, ಶೇ. 18ರ ಜಿಎಸ್ಟಿ ಬಂದು, ಎಟಿಎಂ ಶುಲ್ಕ, ಕ್ರೆಡಿಟ್‌ ಕಾರ್ಡ್‌ ಶುಲ್ಕವೂ ಜಾರಿಯಾಗಿದೆ. ಓಲಾ, ಉಬರ್‌ ದರಗಳು ಕಡಿತವಾಗಿವೆ.

ಬಿಕಾಂ ವಿದ್ಯಾರ್ಥಿಗಳಿಗೆ ಛಾನ್ಸ್‌
ಜಿಎಸ್‌ಟಿಯಿಂದಾಗಿ ಬಿಕಾಂ ಪದವಿ ಹೊಂದಿದವರಿಗೆ ಬೇಡಿಕೆ ಉಂಟಾಗಿದೆ. ಜೂ. 30ರಂದು ಜಿಎಸ್‌ಟಿ ಅಂಗೀಕಾರವಾಗಿ ಜು. 1ರಿಂದ ಅದು ಅನುಷ್ಠಾನಗೊಂಡ ಬಳಿಕ ವಾಣಿಜ್ಯ ಪದವೀಧರರಿಗೆ ಭಾರೀ ಬೇಡಿಕೆ. ಜತೆಗೆ ಶೇ. 100 ಸಂಬಳ ಹೆಚ್ಚಿಸುವ ಆಫ‌ರ್‌. ಇದರ ಜತೆಗೆ ಹಣಕಾಸು ವಿಭಾಗದಲ್ಲಿ ಎಂಬಿಎ ಮತ್ತು ಚಾರ್ಟಡ್‌ ಅಕೌಂಟೆಂಟ್‌ (ಸಿಎ) ಕೋರ್ಸ್‌ ಮುಕ್ತಾಯ ಮಾಡಿದವರಿಗೆ ಈಗ ಬೇಡಿಕೆ ಹೆಚ್ಚಿದೆ. ವಾಣಿಜ್ಯ ಪದವೀಧರ ನೊಬ್ಬನಿಗೆ ತಿಂಗಳಿಗೆ 15 ಸಾವಿರ ರೂ. ಇದ್ದದ್ದು ಈಗ ಏಕಾಏಕಿ 30 ಸಾವಿರ ರೂ. ಆಗಿದೆ. ಹೊಸ ತೆರಿಗೆ ಪದ್ಧತಿಯಲ್ಲಿರುವ ಜಿಎಸ್‌ಟಿಎನ್‌ ನೆಟ್‌ವರ್ಕ್‌ಗೆ ವ್ಯವಹಾರದ ಇನ್‌ವಾಯ್ಸ ಗಳನ್ನು ಅಪ್‌ಲೋಡ್‌ ಮಾಡಲು ವಾಣಿಜ್ಯ ಪದವೀಧರರ ನೆರವು ಬೇಕೇಬೇಕು.

Advertisement

Udayavani is now on Telegram. Click here to join our channel and stay updated with the latest news.

Next