ಕೇಂದ್ರ ಸರಕಾರ 32 ಇಂಚಿನ ಒಳಗಿನ ಟಿವಿ, ಕಂಪ್ಯೂಟರ್ ಮಾನಿಟರ್, ಪವರ್ ಬ್ಯಾಂಕ್, ಡಿಜಿಟಲ್ ಕೆಮರಾ ಮೇಲಿನ ಜಿಎಸ್ಟಿ ಇಳಿಕೆ ಮಾಡಿದ್ದು, ಇವುಗಳ ದರ ಜ.1ರಿಂದ ಕಡಿಮೆಯಾಗಲಿದೆ. ಇದರ ಜತೆಗೆ ಜನಧನ ಖಾತೆಗಳ ಜಿಎಸ್ಟಿ ತೆಗೆದುಹಾಕಲಾಗಿದೆ.
Advertisement
ಇಂದಿನಿಂದ ಹೊಸ ಕ್ರೆಡಿಟ್, ಡೆಬಿಟ್ ಕಾರ್ಡ್ಇನ್ನೂ ಹಳೆಯ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಉಪ ಯೋಗಿಸುತ್ತಿದ್ದರೆ ಈ ಕೂಡಲೇ ಬದಲಾಯಿಸಿಕೊಳ್ಳಿ. ಸದ್ಯ ಇರುವ ಮ್ಯಾಗ್ನೆಟಿಕ್ ಕಾರ್ಡ್‌ಗಳನ್ನು ಹೊಸ ಇಎಂವಿ ಚಿಪ್ ಹೊಂದಿರುವ ಕಾರ್ಡ್‌ಗಳ ಜತೆ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.
ಕಿಲೋಗ್ರಾಮ್‌ನ ಹೊಸ ವ್ಯಾಖ್ಯಾನವನ್ನು ಒಪ್ಪಿಕೊಂಡಿರುವ ಭಾರತ, ಇದೇ ಮೇ ತಿಂಗಳಿಂದ ತನ್ನಲ್ಲೂ ಹೊಸ ಕೆ.ಜಿ. ಮಾದರಿಯನ್ನು ಅನ್ವಯ ಮಾಡಿಕೊಳ್ಳಲಿದೆ. ಕೆಲವು ದಿನಗಳ ಹಿಂದಷ್ಟೇ 60 ದೇಶಗಳ ಪ್ರತಿನಿಧಿಗಳು ಸೇರಿ ಕಿಲೋಗ್ರಾಮ್‌ಗೆ ರೂಪಿಸಿರುವ ಹೊಸ ವ್ಯಾಖ್ಯಾನವನ್ನು ಒಪ್ಪಿಕೊಂಡಿದ್ದರು. ಸದ್ಯ ಇರುವ ಕಿಲೋಗ್ರಾಮ್ ವ್ಯವಸ್ಥೆ 130 ವರ್ಷಗಳಷ್ಟು ಹಳೆಯದಾಗಿದ್ದು, ಹೊಸ ಮಾದರಿಯಲ್ಲಿ ಮೋಸ ತಪ್ಪಿಸಬಹುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ಮಾಡಬಹುದಾಗಿದೆ. ಜುಲೆ 1ರಿಂದ ನೋ ಚೈಲ್ಡ… ಲಾಕ್
ಕೇಂದ್ರ ಹೆದ್ದಾರಿ, ಸಾರಿಗೆ ಸಚಿವಾಲಯದ ಆದೇಶವಿದು. ಜು. 1ರಿಂದ ಯಾವುದೇ ವಾಣಿಜ್ಯ ವಾಹನಗಳಲ್ಲಿ ಚೈಲ್ಡ… ಲಾಕ್ ಇರುವಂತಿಲ್ಲ. ಕೆಲವು ಕ್ಯಾಬ್‌ಗಳಲ್ಲಿ ಚೈಲ್ಡ… ಲಾಕ್ ಹಾಕಿ ಮಹಿಳೆಯರಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ.
Related Articles
ಎಗ್ಗಿಲ್ಲದೇ ಅಂತರ್ಜಲ ಬಳಕೆ ಮಾಡುತ್ತಿರುವುದನ್ನು ತಡೆಗಟ್ಟಲು ಹೊಸ ನಿಯಮಗಳು ಘೋಷಣೆ ಯಾಗಿವೆ. ಇವು ಜೂ.1ರಿಂದ ಜಾರಿಯಾಗಲಿವೆ. ಹೆಚ್ಚಾಗಿ ಅಂತರ್ಜಲ ಬಳಕೆ ಮಾಡುವಲ್ಲಿ ಹೆಚ್ಚಿನ ದರ ವಿಧಿಸುವ ನಿಯಮ ಮಾಡಲಾಗಿದೆ. ಮಿನರಲ್ ವಾಟರ್ ಮಾಡುವ ಉದ್ಯಮಗಳಿಗೂ ಹೆಚ್ಚಿನ ದರ ಬೀಳಲಿದೆ.
Advertisement
ಜು.1ರಿಂದ ಮೈಕ್ರೋಚಿಪ್ ಇರುವ ಡಿಎಲ್ ಕಣ್ಮರೆಇದೂ ಕೇಂದ್ರ ಹೆ¨ªಾರಿ ಮತ್ತು ಸಾರಿಗೆ ಸಚಿವಾಲಯದ ನಿರ್ಧಾರವೇ. ಚಾಲನಾ ಪರವಾನಿಗೆಯಲ್ಲಿನ ಅಕ್ರಮ ತಪ್ಪಿಸುವ ಸಲುವಾಗಿ ಈ ತೀರ್ಮಾನಕ್ಕೆ ಬರಲಾಗಿದೆ. ಮೈಕ್ರೋಚಿಪ್ ಇರುವ ಕಾರ್ಡ್ ತೆಗೆದು, ಇದಕ್ಕೆ ಬದಲಾಗಿ ಕ್ಯೂಆರ್ ಕೋಡ್ ಇರುವ ಕಾರ್ಡ್ ಪರಿಚಯಿಸಲಾಗುತ್ತದೆ. ಇದರಲ್ಲಿ ಚಾಲಕ ಮತ್ತು ಕಾರಿನ ಎಲ್ಲ ಮಾಹಿತಿ ಇರಲಿವೆ. ಇಂದಿನಿಂದ ಹೆಚ್ಚು ಭದ್ರತೆಯುಳ್ಳ ನಂಬರ್ ಪ್ಲೇಟ್
ಜ.1ರಿಂದ ಮಾರುಕಟ್ಟೆಗೆ ಬರಲಿರುವ ಎಲ್ಲ ರೀತಿಯ ವಾಹನಗಳಲ್ಲಿ ಹೆಚ್ಚಿನ ಭದ್ರತೆಯುಳ್ಳ ನಂಬರ್ ಪ್ಲೇಟ್‌ಗಳನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ. ಈ ನಂಬರ್ ಪ್ಲೇಟ್‌ಗಳನ್ನು ಯಾವುದೇ ಕಾರಣಕ್ಕೂ ತಿರುಚಲು ಸಾಧ್ಯವಿಲ್ಲದ ರೀತಿಯಲ್ಲಿ ವಿನ್ಯಾಸ ಮಾಡಲಾಗುತ್ತದೆ. ಇದರಲ್ಲೇ ವಾಹನದ ನೋಂದಣಿಯ ಸಂಪೂರ್ಣ ಮಾಹಿತಿ ಇರುತ್ತದೆ. ನಾನ್-ಸಿಟಿಎಸ್ ಚೆಕ್‌ಗಳಿಗೆ ನಿಷೇಧ
ಜ.1ರಿಂದ ನಾನ್-ಸಿಟಿಎಸ್ ಚೆಕ್‌ಗಳಿಗೆ ಆರ್‌ಬಿಐ ನಿಷೇಧ ಹೇರಿದೆ. ಹೀಗಾಗಿ ಎಸ್‌ಬಿಐ, ಎಚ್‌ಡಿಎಫ್ಸಿ ಸೇರಿ ಯಾವುದೇ ಬ್ಯಾಂಕ್‌ಗಳು ನಾನ್-ಸಿಟಿಎಸ್ ಚೆಕ್‌ಗಳನ್ನು ಬಳಕೆ ಮಾಡುವಂತಿಲ್ಲ.