Advertisement

ಮನೆ ಮೇಲೆ ಜಿಎಸ್‌ಟಿ ಇಳಿಕೆ ಎ. 1ರಿಂದ ಜಾರಿ

12:30 AM Mar 21, 2019 | |

ಹೊಸದಿಲ್ಲಿ: ಗೃಹ ಯೋಜನೆಗಳ ಮೇಲಿನ ಜಿಎಸ್‌ಟಿಯನ್ನು ಶೇ. 12ರಿಂದ ಶೇ. 5ಕ್ಕೆ ಇಳಿಸಲಾಗಿದ್ದು, ಹೊಸ ಆದೇಶ ಇದೇ ಎಪ್ರಿಲ್‌ನ ಅನಂತರ ಜಾರಿಗೊಳ್ಳಲಿದೆ ಎಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್‌ ಹೇಳಿದೆ. 

Advertisement

ಅಂದರೆ, ಎಪ್ರಿಲ್‌ನ ಅನಂತರ ಶುರುವಾಗುವ ಗೃಹ ನಿರ್ಮಾಣ ಯೋಜನೆಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಇದೇ ವೇಳೆ, ಮುಂಬಯಿನಲ್ಲಿ 75 ಲಕ್ಷ ರೂ.ವರೆಗಿನ ಮನೆಗಳನ್ನು ಕೈಗಟಕುವ ಮನೆ ಯೋಜನೆಯ ವ್ಯಾಪ್ತಿಗೆ ತರಬೇಕೆಂದು ಮಹಾರಾಷ್ಟ್ರ ಸರಕಾರ ಮನವಿ ಮಾಡಿದ್ದು, ಆ ಕುರಿತ ನಿರ್ಧಾರವನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಕೌನ್ಸೆಲ್‌ ತಿಳಿಸಿದೆ. 

ಪ್ರಸ್ತುತ, ಕೈಟಕುವ ಮನೆಗಳ ಮೇಲಿನ ಜಿಎಸ್‌ಟಿ ಶೇ. 5ರಷ್ಟಿದ್ದು, ಇತರ ಗೃಹ ಯೋಜನೆಗಳ ಮೇಲಿನ ಜಿಎಸ್‌ಟಿ ಶೇ. 12ರಷ್ಟಿದೆ. ಎಪ್ರಿಲ್‌ನಿಂದ ಜಾರಿಗೆ ಬರಲಿರುವ ಹೊಸ ನಿಯಮ ದಂತೆ, ಕೈಗಟಕುವ ಮನೆಗಳ ವ್ಯಾಪ್ತಿಯೊಳಗಿನ ಮನೆಗಳಿಗೆ ಶೇ. 1ಕ್ಕೆ ಇಳಿಯಲಿದ್ದು, ಇತರೆ ನಿರ್ಮಾಣ ಹಂತದ ಗೃಹ ಯೋಜ ನೆಗಳ ಮೇಲಿನ ಜಿಎಸ್‌ಟಿ ಶೇ. 5ಕ್ಕೆ ಇಳಿಯಲಿದೆ. ಹಾಗಾಗಿ, ಮಹಾರಾಷ್ಟ್ರ ಸರಕಾರ 75 ಲಕ್ಷ ರೂ.ವರೆಗಿನ ಮನೆಗಳನ್ನು ಕೈಗಟಕುವ ಮನೆಗಳೆಂದು ಪರಿಗಣಿಸಲು ಮನವಿ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next