Advertisement
ಜಿಎಸ್ ಟಿ ಕ್ರಾಂತಿಕಾರಿ ಮಸೂದೆಯಾಗಿದೆ. ಈ ವ್ಯವಸ್ಥೆ ಜಾರಿಯಿಂದಾಗಿ ಎಲ್ಲರಿಗೂ ಲಾಭವಾಗಲಿದೆ. ಜಿಎಸ್ ಟಿ ಗೆ ಸಂಬಂಧಿಸಿದಂತೆ ಒಮ್ಮತಾಭಿಪ್ರಾಯ ಮತ್ತು ಶಿಫಾರಸ್ಸಿಗಾಗಿ 12 ಸಭೆಗಳನ್ನು ನಡೆಸಲಾಗಿತ್ತು ಎಂದು ಜೇಟ್ಲಿ ಹೇಳಿದರು.ಜಿಎಸ್ ಟಿ ಯಿಂದಾಗಿ ರಾಜ್ಯ ಹಾಗೂ ದೇಶಾದ್ಯಂತ ಏಕರೂಪದ ತೆರಿಗೆ ಜಾರಿಯಾಗಲಿದೆ. ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದಾಗಿ ತೆರಿಗೆಯ ವ್ಯತ್ಯಾಸಕ್ಕೆ ಅಂತ್ಯಹಾಡಲಿದೆ ಎಂದು ವಿವರಿಸಿದರು.
ಜಿಎಸ್ ಟಿ ಸಾಧಕ, ಬಾಧಕಗಳ ಕುರಿತು ಚರ್ಚೆ ನಡೆಸಲು ಇಂದು 7ಗಂಟೆಗಳನ್ನು ಮೀಸಲಿಡಲಾಗಿದೆ. ಜಿಎಸ್ ಟಿ ಜಾರಿಯಿಂದ ಇ ಕಾಮರ್ಸ್ ಕ್ಷೇತ್ರಕ್ಕೂ ಬಲ ತುಂಬಲಿದೆ. ಜಿಎಸ್ ಟಿ ಜಾರಿಯಿಂದಾಗಿ ಪ್ರತ್ಯಕ್ಷ, ಪರೋಕ್ಷವಾಗಿರುವ ಎಲ್ಲಾ ತೆರಿಗೆ ರದ್ದಾಗಲಿದೆ. ದೇಶದ ಆರ್ಥಿಕತೆಗೆ ಬಲ ತುಂಬಲಿದೆ. ಎಲ್ಲಾ ಸರಕು, ಸೇವೆಗಳಿಗೆ ಏಕ ರೂಪದ ತೆರಿಗೆ ಜಾರಿಯಾಗಲಿದೆ. ಮನೆ ಬಾಡಿಗೆಗೂ ಜಿಎಸ್ ಟಿ ಅನ್ವಯವಾಗಲಿದೆ, ಎಲೆಕ್ಟ್ರಾನಿಕ್ಸ್, ರಿಯಲ್ ಎಸ್ಟೇಟ್ ಕ್ಷೇತ್ರ ಅಭಿವೃದ್ಧಿಯಾಗುತ್ತೆ, ತಂಬಾಕು, ಆಲ್ಕೋಹಾಲ್ ಉತ್ಪನ್ನಗಳ ಮೇಲೆ ಜಿಎಸ್ ಟಿ ಜಾರಿಯಾಗಲಿದೆ.
Related Articles
*ಸದ್ಯ ಜಾರಿಯಲ್ಲಿರುವ ಕೇಂದ್ರ, ರಾಜ್ಯದ ಎಲ್ಲ ಪರೋಕ್ಷ ತೆರಿಗೆ ರದ್ದಾಗಲಿದೆ. ಏಕರೂಪದ ತೆರಿಗೆ ಜಾರಿಯಾಗಲಿದೆ.
Advertisement
*ನೂತನ ಜಿಎಸ್ ಟಿ ಜಾರಿಯಿಂದ ದೇಶಾದ್ಯಂತ ಏಕರೂಪದಲ್ಲಿರಲಿದೆ.
*ವಹಿವಾಟಿನ ಪ್ರತಿಯೊಂದು ಹಂತದಲ್ಲಿ ವಿಧಿಸಿದ ತೆರಿಗೆಯನ್ನು ಮುಂದಿನ ಹಂತದಲ್ಲಿ ತೆರಿಗೆ ಪಾವತಿಸಲು ಬಳಸಿಕೊಳ್ಳಬಹುದು. ಹೀಗಾಗಿ ಮೌಲ್ಯವರ್ಧಿತ ಭಾಗಕ್ಕೆ ಮಾತ್ರ ತೆರಿಗೆ ಅನ್ವಯವಾಗಲಿದೆ. ಇದರಿಂದಾಗಿ ದುಪ್ಪಟ್ಟು ತೆರಿಗೆ ತಪ್ಪಿಸಬಹುದಾಗಿದೆ.