Advertisement

GST: ಹಳೆ ವಾಹನ ಮಾರಾಟಕ್ಕೆ ಶೇ.18ರ ಜಿಎಸ್‌ಟಿ? ನೀತಿ ಜಾರಿಯಾದರೆ ಹಳೆಯ ವಾಹನ ಖರೀದಿ ದುಬಾರಿ

01:06 AM Dec 17, 2024 | Team Udayavani |

ಹೊಸದಿಲ್ಲಿ: ಹಳೆಯ ಹಾಗೂ ಬಳಕೆಯಾಗಿರುವ ವಿದ್ಯುತ್‌ ಚಾಲಿತ ವಾಹನಗಳು ಮತ್ತು ಸಣ್ಣ ಪೆಟ್ರೋಲ್‌-ಡೀಸೆಲ್‌ ವಾಹನಗಳ ಮಾರಾಟದ ಮೇಲೆ ವಿಧಿಸಲಾಗುವ ಜಿಎಸ್‌ಟಿಯನ್ನು ಶೇ. 12ರಿಂದ ಶೇ. 18ಕ್ಕೆ ಏರಿಸುವ ಬಗ್ಗೆ ಜಿಎಸ್‌ಟಿ ಫಿಟೆ¾ಂಟ್‌ ಕಮಿಟಿ ಶಿಫಾರಸು ಸಲ್ಲಿಸಿದೆ. ಇದಕ್ಕೆ ಜಿಎಸ್‌ಟಿ ಮಂಡಳಿ ಒಪ್ಪಿಗೆ ನೀಡಿದರೆ, ಹಳೆಯ ಮತ್ತು ಬಳಕೆಯಾಗಿರುವ ಇವಿ ವಾಹನಗಳ ಮರು ಮಾರಾಟದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಡಿ. 20-21ರಂದು ರಾಜಸ್ಥಾನದಲ್ಲಿ ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಪ್ರಸ್ತಾವದ ಬಗ್ಗೆ ಚರ್ಚಿಸಲಾಗುತ್ತದೆ ಎಂದಿವೆ ಮೂಲಗಳು.

Advertisement

ಹಾಲಿ ನಿಯಮಗಳ ಪ್ರಕಾರ ಹಳೆಯ ಮತ್ತು ಬಳಸಲಾದ ವಾಹನಗಳಿಗೆ ಪೂರೈಕೆದಾರರ ಮಾರ್ಜಿನ್‌ ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತಿದೆ. 1,200 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಎಂಜಿನ್‌ ಸಾಮರ್ಥ್ಯದ ಮತ್ತು 4,000 ಎಂ.ಎಂ.ಗಿಂತ ಉದ್ದದ ಪೆಟ್ರೋಲ್‌, ಎಲ್‌ಪಿಜಿ ಅಥವಾ ಸಿಎನ್‌ಜಿ ಚಾಲಿತ ವಾಹನಗಳಿಗೆ ಶೇ. 18 ತೆರಿಗೆ ವಿಧಿಸಲಾಗುತ್ತಿದೆ.

ಹಾಗೆಯೇ 1,500 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಎಂಜಿನ್‌ ಸಾಮರ್ಥ್ಯದ, 4,000 ಎಂ.ಎಂ.ಗಿಂತ ಉದ್ದದ ಡೀಸೆಲ್‌ ವಾಹನಗಳಿಗೆ ಮತ್ತು 1,500 ಸಿಸಿಗಿಂತ ಹೆಚ್ಚಿನ ಎಂಜಿನ್‌ ಸಾಮರ್ಥ್ಯದ ಎಸ್‌ಯುವಿಗಳಿಗೆ ಶೇ. 18 ತೆರಿಗೆ ವಿಧಿಸಲಾಗುತ್ತಿದೆ. ಉಳಿದ ಎಲ್ಲ ವಾಹನಗಳಿಗೆ (ಇವಿಗಳೂ ಸೇರಿ) ಶೇ. 12 ಜಿಎಸ್‌ಟಿ ವಿಧಿಸಲಾಗುತ್ತಿದೆ. ಈಗ ಈ ವಾಹನಗಳ ಜಿಎಸ್‌ಟಿಯನ್ನೂ ಶೇ. 18ರ ಸ್ಲಾéಬ್‌ಗ ಏರಿಸಲು ಶಿಫಾರಸು ಮಾಡಲಾಗಿದೆ. ತೆರಿಗೆ ಹೆಚ್ಚಳವಾದರೆ ಸೆಕೆಂಡ್‌ ಹ್ಯಾಂಡ್‌ ಇವಿಗಳನ್ನು ಖರೀದಿಸಲು ಜನರು ಹಿಂದೇಟು ಹಾಕಬಹುದು ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next