Advertisement

ಹೊಸ ವರ್ಷಕ್ಕೆ ಜಿಎಸ್‌ಟಿ ಕೊಡುಗೆ

06:00 AM Dec 23, 2018 | |

ನವದೆಹಲಿ: 32 ಇಂಚಿನೊಳಗಿನ ಟೀವಿಗಳು, ಸಿನಿಮಾ ವೀಕ್ಷಣೆ, ವಿಮಾನ ಪ್ರಯಾಣ, ಕಂಪ್ಯೂಟರ್‌ ಸ್ಕ್ರೀನ್‌ಗಳ ಮೇಲಿನ ತೆರಿಗೆಯನ್ನು ಕಡಿತ ಮಾಡಲಾಗಿದ್ದು, ಶ್ರೀಸಾಮಾನ್ಯನ ಜೇಬಿಗೆ ಕೊಂಚ ಸಮಾಧಾನ ಸಿಕ್ಕಿದೆ.

Advertisement

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ಇಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 31ನೇ ಸಭೆಯಲ್ಲಿ 23 ವಸ್ತುಗಳ ತೆರಿಗೆ ಇಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಎಲ್ಲಾ ಪರಿಷ್ಕೃತ ದರ ಜ.1ರಿಂದಲೇ ಜಾರಿಗೆ ಬರಲಿದೆ. ಜಿಎಸ್‌ಟಿ ಮಂಡಳಿಯ ಈ ತೀರ್ಮಾನದಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 5,500 ಕೋಟಿ ರೂ. ಹೊರೆ ಬೀಳಲಿದೆ.

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಕೂಡ ಶೇ.28ರ ಹಂತದಲ್ಲಿರುವ ಬಹುತೇಕ ವಸ್ತುಗಳನ್ನು ಕೆಳಹಂತಕ್ಕೆ ಇಳಿಸುವ ಬಗ್ಗೆ ಭರವಸೆ ನೀಡಿದ್ದರು. 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ರಾಹಕರ ಮನ ತಣಿಸಲು ಇಂಥ ಕ್ರಮಕ್ಕೆ ಮುಂದಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಬೀಡಿ, ಸಿಗರೇಟು, ತಂಬಾಕು, ತಂಪು ಪಾನೀಯ, ಸಿಮೆಂಟ್‌, ಆಟೋಮೊಬೈಲ್‌ ವಸ್ತುಗಳನ್ನು ಹೊರತುಪಡಿಸಿ ಬಹುತೇಕ ಸರಕುಗಳ ತೆರಿಗೆಯನ್ನು ಇಳಿಕೆ ಮಾಡಲಾಗಿದೆ. ಸದ್ಯ ಹಾನಿಕಾರಕ (ಬೀಡಿ, ಸಿಗರೇಟು, ತಂಬಾಕು) ವಸ್ತುಗಳ ಜತೆಗೆ ಸಿಮೆಂಟ್‌ ಮತ್ತು ಆಟೋಮೊಬೈಲ್‌ ವಸ್ತುಗಳು ಮಾತ್ರ ಶೇ.28ರ ಹಂತದಲ್ಲಿವೆ. ಮುಂದಿನ ಸಭೆಯಲ್ಲಿ ಸಿಮೆಂಟ್‌ ಮೇಲಿನ ತೆರಿಗೆ ಇಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವ ಅರುಣ್‌ ಜೇಟ್ಲಿ ಸಭೆ ನಂತರ ಸುದ್ದಿಗಾರರಿಗೆ ಹೇಳಿದರು. 

ಸದ್ಯ ಆಟೋಮೊಬೈಲ್‌ ಕ್ಷೇತ್ರದಿಂದ 28 ಸಾವಿರ ಕೋಟಿ ರೂ. ಮತ್ತು ಸಿಮೆಂಟ್‌ ಉತ್ಪಾದನಾ ಕ್ಷೇತ್ರದಿಂದ 13 ಸಾವಿರ ಕೋಟಿ ರೂ. ಆದಾಯ ಬರುತ್ತಿದೆ. ಒಮ್ಮೆಗೆ ತೆರಿಗೆ ಇಳಿಕೆ ಮಾಡಿದರೆ ತೆರಿಗೆ ಸಂಗ್ರಹಕ್ಕೆ ಹೊಡೆತ ಬೀಳಲಿದೆ ಎಂದು ಜೇಟಿÉ ತಿಳಿಸಿದರು. 

ಎಲ್ಲದಕ್ಕಿಂತ ಹೆಚ್ಚಾಗಿ ಸಿನಿಮಾ ಟಿಕೆಟ್‌ಗಳ ಮೇಲಿನ ಜಿಎಸ್‌ಟಿಯನ್ನೂ ಇಳಿಕೆ ಮಾಡಲಾಗಿದೆ. 100 ರೂ. ಮುಖಬೆಲೆಗಿಂತ ಹೆಚ್ಚಿನ ಟಿಕೆಟ್‌ ಮೇಲಿನ ತೆರಿಗೆಯನ್ನು ಶೇ.28 ರಿಂದ ಶೇ.18ಕ್ಕೆ ಇಳಿಕೆ ಮಾಡಿದ್ದರೆ, 100 ರೂ. ಮುಖಬೆಲೆಗಿಂತ ಕೆಳಗಿನ ಟಿಕೆಟ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇ.18 ರಿಂದ ಶೇ.12ಕ್ಕೆ ಕಡಿತ ಮಾಡಲಾಗಿದೆ. ಇದರಿಂದಾಗಿ ಸಿನಿಮಾ ಉದ್ಯಮದ ಮಂದಿ ಸಂತಸಗೊಂಡಿದ್ದು, ಸರ್ಕಾರಕ್ಕೆ ಆಭಾರಿಗಳಾಗಿರುತ್ತೇವೆ ಎಂದಿದ್ದಾರೆ. ಮುಂದಿನ ಸಭೆಯಲ್ಲಿ ಲಾಟರಿ ಮೇಲೆ ತೆರಿಗೆ ವಿಧಿಸುವುದು ಮತ್ತು ಸಣ್ಣ  ಉದ್ಯಮಗಳ ತೆರಿಗೆ ಮಿತಿಯನ್ನೂ ನಿರ್ಧರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

Advertisement

ಶೇ.28 ರಿಂದ ಶೇ.18
– 32 ಇಂಚಿಗಿಂತ ಕೆಳಗಿನ ಮಾನಿಟರ್‌ಗಳು ಮತ್ತು ಟೀವಿಗಳು
– ರಾಟೆಯಲ್ಲಿ ಬಳಕೆ ಮಾಡುವ ವಸ್ತುಗಳು, ಗೇರ್‌ ಬಾಕ್ಸ್‌ಗಳು
– ಪುನರ್ಬಳಕೆ ಮಾಡಬಹುದಾದ ಟೈರ್‌ಗಳು ಮತ್ತು ರಬ್ಬರ್‌
– ಲೀಥಿಯಂ ಬ್ಯಾಟರಿಗಳನ್ನೊಳಗೊಂಡ ಬ್ಯಾಟರಿಗಳು
– ಡಿಜಿಟಲ್‌ ಕ್ಯಾಮೆರಾಗಳು ಮತ್ತು ವಿಡಿಯೋ ಕ್ಯಾಮೆರಾ ರೆಕಾರ್ಡರ್‌ಗಳು
– ವಿಡಿಯೋ ಗೇಮ್ಸ್‌ ಸಲಕರಣೆಗಳು, ಇತರೆ ಗೇಮ್‌ಗಳು ಮತ್ತು ಕ್ರೀಡಾ ಪರಿಕರಗಳು

ಶೇ.28 ರಿಂದ ಶೇ.5
– ವಿಕಲ ಚೇತನರು ಬಳಸುವ ಗಾಡಿಗಳ ಪರಿಕರಗಳು

ಶೇ.18 ರಿಂದ ಶೇ.12
– ವಿವಿಧ ಕಾರ್ಕ್‌ ಉತ್ಪನ್ನಗಳು

ಶೇ.18 ರಿಂದ ಶೇ.5
– ಮಾರ್ಬಲ್‌ ವಸ್ತುಗಳು

ಶೇ.12 ರಿಂದ ಶೇ.5
– ಸಾಮಾನ್ಯ ಕಾರ್ಕ್‌
– ವಾಕಿಂಗ್‌ ಸ್ಟಿಕ್ಸ್‌
– ಫ್ಲೈ ಆಶ್‌ ಬ್ಲಾಕ್ಸ್‌

ಶೇ.12 ರಿಂದ ಶೇ.0
– ಸಂಗೀತ ಪುಸ್ತಕಗಳು

ಶೇ.5 ರಿಂದ ಶೇ.0
– ತರಕಾರಿಗಳು (ಬೇಯಿಸದ ಅಥವಾ ಸ್ಟೀಮಿಂಗ್‌ ಅಥವಾ ಬಿಸಿನೀರಿನಲ್ಲಿ ಬೇಯಿಸಿದ್ದು), ಶೀಥಲೀಕರಿಸಿದ್ದು, ಬ್ರಾಂಡೆಡ್‌ ಮತ್ತು ಡಬ್ಟಾದಲ್ಲಿ ಸಂರಕ್ಷಿಸಿಟ್ಟ ತರಕಾರಿಗಳು
– ಸಲ#ರ್‌ ಡೈ ಆಕ್ಸೆ„ಡ್‌ ಗ್ಯಾಸ್‌, ಸಲ#ರ್‌ ನೀರಿನಲ್ಲಿ ಇರಿಸಿದ, ತತ್‌ಕ್ಷಣಕ್ಕೆ ಬಳಕೆ ಮಾಡಲು ಸಾಧ್ಯವಾಗದ ತರಕಾರಿಗಳು

ಸೇವೆಗಳ ಮೇಲಿನ ಜಿಎಸ್‌ಟಿ ಕಡಿತ
– 100 ರೂ. ಗಿಂತ ಹೆಚ್ಚಿನ ದರದ ಸಿನಿಮಾ ಟಿಕೆಟ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇ.28 ರಿಂದ ಶೇ.18ಕ್ಕೆ ಇಳಿಕೆ. 100 ರೂ.ಗಿಂತ ಒಳಗಿನ ಟಿಕೆಟ್‌ ದರದ ಮೇಲಿನ ಜಿಎಸ್‌ಟಿ ಶೇ.18 ರಿಂದ ಶೇ.12ಕ್ಕೆ ಇಳಿಕೆ 
– ಸರಕುಗಳ ಸಾಗಾಟ ಮಾಡುವ ವಾಹನಗಳ ಥರ್ಡ್‌ ಪಾರ್ಟಿ ಇನುÏರೆನ್ಸ್‌ ಕಂತಿನ ಜಿಎಸ್‌ಟಿ ಶೇ.18 ರಿಂದ ಶೇ.12ಕ್ಕೆ ಇಳಿಕೆ
– ಜನಧನ ಬ್ಯಾಂಕ್‌ ಖಾತೆಗಳಿಗೆ ಜಿಎಸ್‌ಟಿಯಿಂದ ವಿನಾಯ್ತಿ
– ಭಾರತ ಸರ್ಕಾರ ಆಯೋಜಿಸುವ ಧಾರ್ಮಿಕ ಯಾತ್ರೆಗಳ ವೇಳೆ ಮೊದಲೇ ಕಾಯ್ದಿರಿಸದೇ ವಿಮಾನ ಪ್ರಯಾಣ ಮಾಡುವವರಿಗೆ, ಎಕಾನಮಿ ಕ್ಲಾಸ್‌ನ ಮಾದರಿಯಲ್ಲೇ ಶೇ.5 ರಷ್ಟು ಜಿಎಸ್ಟಿ ಹಾಕುವುದು. ಮೊದಲಿಗೆ ಇದು ಶೇ.28 ರಷ್ಟಿತ್ತು. 

ಮೇಲ್ಮನವಿ ಪ್ರಾಧಿಕಾರ
2019ರ ಜ.1ರಿಂದ ಹೊಸ ರಿಟರ್ನ್ ಫೈಲಿಂಗ್‌ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಜೇಟ್ಲಿ ಹೇಳಿದ್ದಾರೆ. ಜತೆಗೆ ಕೇಂದ್ರೀಕೃತ ಅಡ್ವಾನ್ಸ್‌ ರೂಲಿಂಗ್‌ ಪ್ರಾಧಿಕಾರ ರಚನೆಗೂ ಒಪ್ಪಿಗೆ ಸಿಕ್ಕಿದೆ ಎಂದಿದ್ದಾರೆ. ಇದರಲ್ಲಿ ಏಳು ಮಂದಿ ಸದಸ್ಯರಿರುತ್ತಾರೆ ಎಂದು ವಿತ್ತ ಸಚಿವರು ಹೇಳಿದ್ದಾರೆ. ಒಂದೇ ವಿಷಯದ ಮೇಲೆ ಎರಡು  ಅಥವಾ ಮೂರು ರಾಜ್ಯಗಳಲ್ಲಿ ವಿವಾದ ಉಂಟಾದರೆ, ಈ ಪ್ರಾಧಿಕಾರ ಬಗೆಹರಿಸುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next