Advertisement

ಜಿಎಸ್‌ಟಿ: ಕುಂಬಳೆ ತಾಲೂಕಿನಲ್ಲಿಯೂ ಬಂದ್‌

02:20 AM Jul 12, 2017 | Harsha Rao |

ಕುಂಬಳೆ : ಕೇಂದ್ರ ಸರಕಾರ ದೇಶಾದ್ಯಂತ ಏಕರೂಪದಲ್ಲಿ ಹೆಚ್ಚಿನೆಲ್ಲ ವಿಪಕ್ಷಗಳ ಸಮ್ಮತಿಯೊಂದಿಗೆ ಜು. 1ರಿಂದ ಜಿ.ಎಸ್‌.ಟಿ. ತೆರಿಗೆ ಜಾರಿಗೊಳಿಸಿದರೂ ಹರತಾಳದ ನಾಡಾದ ಕೇರಳದಲ್ಲಿ  ಜಿ.ಎಸ್‌.ಟಿ.ಯ ನೆಪದಲ್ಲೊಂದು ಬಂದ್‌ಮಂಗಳವಾರ ಆಗಿದೆ. 

Advertisement

ಜಿ.ಎಸ್‌.ಟಿ. ಅವ್ಯಕ್ತತೆಯನ್ನು ಮುಂದಿನ ಕೆಲ ದಿನಗಳಲ್ಲಿ ಸರದೂಗಿಸುವುದಾಗಾಗಿ ರಾಜ್ಯ ಆರ್ಥಿಕ ಸಚಿವ ಡಾ| ಥೋಮಸ್‌ ಐಸಾಕ್‌ ರವರು ವ್ಯಾಪಾರಿ ಸಂಘಟನೆಗೆ ಭರವಸೆ ನೀಡಿದ್ದಾರೆ. ಇದರಂತೆ ರಾಜ್ಯ ವ್ಯಾಪಾರಿ ಸಂಘಟನೆಯ ಘಟಕವೊಂದು ಬಂದ್‌ಗೆ ಬೆಂಬಲವಿಲ್ಲವೆಂಬುದಾಗಿ ಘೋಷಿಸಿದರೂ ರಾಜ್ಯ ವ್ಯಾಪಾರಿ ವ್ಯವಸಾಯಿ ಸಂಘಟನೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶಿಸಿದೆ. 

ಇದರಂತೆ   ಜಿ.ಎಸ್‌.ಟಿ.ಗಾಗಿ   ದೇಶದಲ್ಲೇ ಪ್ರಥಮ ಬಂದ್‌ ಆಚರಿಸಿದ ಕೀರ್ತಿ ಕೇರಳ ರಾಜ್ಯಕ್ಕೆ ಸಲ್ಲುವುದು. ರಾಜ್ಯ ಸಚಿವರ ಭರವಸೆಯ ವಿಶ್ವಾಸದಲ್ಲಿ ಹೋಟೆಲ್‌ ಮಾಲಕರ ಸಂಘಟನೆ ಜು.11ರಂದು ಬಂದ್‌ ಮಾಡುವುದಿಲ್ಲವೆಂದರೂ ಹೆಚ್ಚಿನ ಹೋಟೆಲ್‌ಗ‌ಳು ಕೂಡ ಗಿರಾಕಿಗಳ ಕೊರತೆಯ ನೆಪದಲ್ಲಿ ಬಂದ್‌ ಮಾಡಿವೆೆ. ಆದರೆ ಸರಕಾರಿ ಖಾಸಗಿ ಮತ್ತಿನ್ನಿತರ ವಾಹನಗಳು ರಸ್ತೆಯಲ್ಲಿ ಸಂಚರಿಸಿದ ಕಾರಣ ಕೇರಳದ ಸಂಪ್ರದಾಯದ ಹರತಾಳ ಯಾನೆ ಬಂದ್‌  ಕೊಂಚ ಸರಳವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next