Advertisement

ಅಕ್ಟೋಬರ್‌ನಲ್ಲಿ ದಾಖಲೆ ಸೃಷ್ಟಿಸಿದ ಜಿ ಎಸ್ ಟಿ ಸಂಗ್ರಹ

06:12 PM Nov 01, 2021 | |

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಸತತವಾಗಿ ಕಳೆದ ನಾಲ್ಕು ತಿಂಗಳಿನಲ್ಲಿ ಅತಿ ಹೆಚ್ಚು ಸಂಗ್ರಹವಾಗಿದೆ. ಜಿಎಸ್‌ ಟಿ ಜಾರಿಯಾದ ಜುಲೈ 2017ರ ನಂತರ ಮೊದಲ ಬಾರಿಗೆ ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ಅಂದರೆ 1.30ಲಕ್ಷ ಕೋಟಿ ಸಂಗ್ರಹವಾಗಿದೆ. ಈ ಹಿಂದೆ ಅತಿಹೆಚ್ಚು ಅಂದರೆ 1 ಲಕ್ಷ ಕೋಟಿ ರೂಪಾಯಿಗಳಷ್ಟು ಸಂಗ್ರಹವಾಗಿತ್ತು.

Advertisement

ಅಕ್ಟೋಬರ್ 2021 ರಲ್ಲಿ ಒಟ್ಟು GST ಆದಾಯವು 1,30,127 ಕೋಟಿ ರೂ.ಗಳಾಗಿದ್ದು, ಇದರಲ್ಲಿ CGST 23,861 ಕೋಟಿ ರೂ., SGST ರೂ. 30,421 ಕೋಟಿ, IGST 8,484 ಕೋಟಿ ರೂಪಾಯಿಗಳಾಗಿವೆ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 699 ಕೋಟಿ ರೂಪಾಯಿಗಳು ಸೇರಿದಂತೆ).

ಅಕ್ಟೋಬರ್ 2021 ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು CGSTಯಲ್ಲಿ 51,171 ಕೋಟಿ ಮತ್ತು SGSTಯಲ್ಲಿ 52,815 ಕೋಟಿ ರೂಪಾಯಿಗಳಾಗಿವೆ.

ಇದನ್ನೂ ಓದಿ;- ಹಿಂದೂಗಳಿಗೆ ಅಯೋಧ್ಯೆ,ಕ್ರಿಶ್ಚಿಯನ್ನರಿಗೆ ವೆಲಂಕಣಿ ಉಚಿತ ಯಾತ್ರೆ : ಕೇಜ್ರಿವಾಲ್

ಅಕ್ಟೋಬರ್ 2021 ರ ಆದಾಯವು ಕಳೆದ ವರ್ಷದ ಅದೇ ತಿಂಗಳ GST ಆದಾಯಕ್ಕಿಂತ 24% ಹೆಚ್ಚಾಗಿದೆ ಮತ್ತು 2019-20ರ ಆದಾಯಕ್ಕಿಂತ 36% ಹೆಚ್ಚಾಗಿದೆ. ತಿಂಗಳಿನಲ್ಲಿ, ಸರಕುಗಳ ಆಮದು ಆದಾಯವು 39% ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷದ ಇದೇ ತಿಂಗಳ ಆದಾಯಕ್ಕಿಂತ 19% ಹೆಚ್ಚಾಗಿದೆ.

Advertisement

“ಅರೆ-ವಾಹಕಗಳ ಪೂರೈಕೆಯಲ್ಲಿನ ಅಡಚಣೆಯಿಂದಾಗಿ ಕಾರುಗಳು ಮತ್ತು ಇತರ ಉತ್ಪನ್ನಗಳ ಮಾರಾಟದ ಮೇಲೆ ಪರಿಣಾಮ ಬೀರದಿದ್ದರೆ ಆದಾಯವು ಇನ್ನೂ ಹೆಚ್ಚಿರುತ್ತಿತ್ತು. ವರದಿಗಳು 1 ತಿಂಗಳಲ್ಲಿ ಉತ್ಪತ್ತಿಯಾಗುವ ಇ-ವೇ ಬಿಲ್‌ಗಳ ಸಂಖ್ಯೆಯಲ್ಲಿನ ಮೇಲ್ಮುಖ ಪ್ರವೃತ್ತಿಯನ್ನು ತೋರಿಸುತ್ತಿವೆ ಮತ್ತು ತೆರಿಗೆಯ ಮೌಲ್ಯದ ಮೊತ್ತವು ಆರ್ಥಿಕ ಚಟುವಟಿಕೆಯಲ್ಲಿ ಚೇತರಿಕೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ, ” ಎಂದು ಹಣಕಾಸು ಸಚಿವಾಲಯವು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next