Advertisement

ಜಿ.ಎಸ್‌.ಟಿ. ಸಂಗ್ರಹ ಒಂದು ಲಕ್ಷ ಕೋಟಿ ರೂ.ಗಳಿಗೇರಿಕೆ

09:15 AM Aug 02, 2019 | Hari Prasad |

ಹೊಸದಿಲ್ಲಿ: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹಣೆ ಮೊತ್ತ 1.2 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇದರಿಂದ ಕೇಂದ್ರ ಸರಕಾರ ಗೆಲುವಿನ ನಗೆ ಬೀರಿದೆ. ಜುಲೈ ತಿಂಗಳ ಲೆಕ್ಕಾಚಾರದ ಪ್ರಕಾರ, ಜಿ.ಎಸ್‌.ಟಿ. ಸಂಗ್ರಹಣೆಯಲ್ಲಿ ಶೇ.5.8ರಷ್ಟು ಏರಿಕೆಯಾಗಿದ್ದು, ಇದು ಕಳೆದ ವರ್ಷದ ಸಂಗ್ರಹಣೆಗಿಂತ ಹೆಚ್ಚಾಗಿದೆ.

Advertisement

ಕಳೆದ ವರ್ಷ ಇದೇ ಅವಧಿಯಲ್ಲಿ ಜಿಎಸ್‌ಟಿ ಸಂಗ್ರಹಣೆ ಮೊತ್ತ 96,483 ಕೋಟಿ ರೂ. ಆಗಿತ್ತು. ಆದರೆ ಜೂನ್‌ ನಲ್ಲಿ 1 ಲಕ್ಷ ಕೋಟಿ ರೂ. ಗಡುವು ಮುಟ್ಟಲು ಜಿ.ಎಸ್‌.ಟಿ. ವಿಫ‌ಲವಾಗಿತ್ತು. ಆ ತಿಂಗಳು ಸಂಗ್ರಹಣೆ ಒಟ್ಟು 99,939 ಕೋಟಿ ರೂ.ಗಳಷ್ಟೇ ಆಗಿತ್ತು. ಇನ್ನು ಜುಲೈನಲ್ಲಿ ಕೇಂದ್ರೀಯ ಜಿ.ಎಸ್‌.ಟಿ. ಸಂಗ್ರಹಣೆ 17,912 ಕೋಟಿ ರೂ. ಆಗಿದ್ದರೆ, ರಾಜ್ಯ ಜಿಎಸ್‌ಟಿ 25,008 ರೂ. ಆಗಿದೆ. ಏಕೀಕೃತ ಜಿಎಸ್‌ಟಿ ಸಂಗ್ರಹಣೆ ಪ್ರಮಾಣ 50, 612 ಕೋಟಿ ರೂ. ಆಗಿದೆ. ಇದರಲ್ಲಿ 24, 246 ಕೋಟಿ ರೂ. ಆಮದು ಮೇಲಿನ ಜಿ.ಎಸ್‌.ಟಿ. ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next