ಹಣಕಾಸು ಸಚಿವಾಲಯ ಕೇವಲ ಜಿಎಸ್‌ಟಿ ಆದಾ ಯ ಹೆಚ್ಚಿಸುವುದರ ಮೇಲೆ ಗಮನ ಕೇಂದ್ರೀಕರಿಸಿಲ್ಲ, ಅದರ ಜತೆಗೆ ಎಲ್ಲ ರೀತಿಯ ಉದ್ದಿಮೆ ಸಂಸ್ಥೆಗಳನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರುವುದು ಕೂಡ ನಮ್ಮ ಉದ್ದೇ ಶವಾಗಿದೆ ಎಂದು ಸಚಿವೆ ನಿರ್ಮಲಾ ಹೇಳಿದ್ದಾರೆ. ಗುಜರಾತ್‌ನಲ್ಲಿ 12 ಜಿಎಸ್‌ಟಿ ಸುವಿಧಾ ಕೇಂದ್ರಗಳ ಉದ್ಘಾಟನೆ ವೇಳೆ ಅವರು ಈ ಮಾತುಗಳನ್ನಾಡಿದ್ದಾರೆ.
Advertisement
ಜಿಎಸ್‌ಟಿ ಸಂಗ್ರಹವು ಪ್ರತೀ ತಿಂಗಳು, ಪ್ರತೀ ವರ್ಷ ಹೆಚ್ಚಾಗುತ್ತಿದೆ. ಜಿಎಸ್‌ಟಿಯಿಂದಾಗಿ ಹಲವು ಸರಕು ಗಳ ತೆರಿಗೆ ದರವು ಹಿಂದಿಗಿಂತಲೂ ಕಡಿಮೆಯಾಗಿದೆ. ಆದರೆ ಹಲವಾರು ಉದ್ದಿಮೆ ಸಂಸ್ಥೆಗಳು ಈಗಲೂ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಉಳಿದಿದ್ದು, ಔಪ ಚಾರಿಕ ಆರ್ಥಿಕತೆಯ ಭಾಗವಾಗಿಲ್ಲ. ಅಂಥ ಸಂಸ್ಥೆ ಗಳು ಏಕೆ ತೆರಿಗೆ ವ್ಯಾಪ್ತಿಗೆ ಬರಬಾರದು? ಆರ್ಥಿಕತೆ ಯಿಂದ ಹೊರಗುಳಿಯುವುದು ದೇಶಕ್ಕೂ ಒಳ್ಳೆಯ ದಲ್ಲ, ವ್ಯಕ್ತಿ ಗಳಿಗೂ ಒಳ್ಳೆಯದಲ್ಲ. ಹೀಗಾಗಿ ಎಲ್ಲ ಉದ್ದಿಮೆ ಗಳನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರುವತ್ತ ಗಮನ ಹರಿಸಲಾಗುವುದು ಎಂದು ಹೇಳಿದ್ದಾರೆ.