ಮುಂಬಯಿ:ಜಿ.ಎಸ್.ಬಿ.ಎಸ್.ಮೆಡಿಕಲ್ ಟ್ರಸ್ಟ್ ವತಿಯಿಂದ ವಡಾಲದ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಆ. 27ರಂದು ಆರೋಗ್ಯವಂತ ಶಿಶು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಒಂದು ವರ್ಷದೊಳಗಿನ ಮಕ್ಕಳು ಹಾಗೂ ಒಂದರಿಂದ ಮೂರು ವರ್ಷದೊಳಗಿನ ಮಕ್ಕಳು ಹೀಗೆ ಎರಡು ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಸಿದ್ಧ ವೈದ್ಯರು ಪಾಲ್ಗೊಂಡು ಶಿಶುಗಳನ್ನು ಪರೀಕ್ಷಿಸಿ ಪ್ರಶಸ್ತಿಗೆ ಆಯ್ಕೆಗೊಳಿಸಿದ್ದರು. ಸ್ಪರ್ಧೆಯಲ್ಲಿ ಪಾಲ್ಗೊಂಡು ಶಿಶುಗಳಿಗೆ ಪೌಷ್ಟಿಕಾಂಶ, ಹಲ್ಲಿನ ಬೆಳವಣಿಗೆ, ಎಲುಬಿನ ಬೆಳವಣಿಗೆ, ಎತ್ತರ, ತೂಕ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಪರೀಕ್ಷೆಗೊಳಪಡಿಸಲಾಗಿತ್ತು. ಅಂತಿಮ ಹಂತದಲ್ಲಿ ತೀರ್ಪುಗಾರರಾಗಿ ಡಾ| ಪ್ರಾಂಜಲ್ ಸಾಠೆ, ಡಾ| ಕೆ. ಸಿ. ಪತ್ರ, ಡಾ| ನಮಿತಾ ಶೆಣಿÌ ಅವರು ಸಹಕರಿಸಿದರು.
ಮೊದಲ ವಿಭಾಗದಲ್ಲಿ ನಿವಾನ್ ಪ್ರಕಾಶ್ ನಾಯಕ್ ಎಂಬ ಶಿಶು ಪ್ರಥಮ ಬಹುಮಾನವನ್ನು ಪಡೆದರೆ, ಎರಡನೇ ವಿಭಾಗದಲ್ಲಿ ಮಾ| ವಿಹಾನ್ ಆರ್. ರಾವ್ ಅವರು ಪ್ರಥಮ ಬಹುಮಾನಕ್ಕೆ ಪಾತ್ರವಾಯಿತು. ಗೀತಾ ಆರ್. ಪೈ ಅವರು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ, ಮಾತನಾಡಿ, ಇದೊಂದು ಅಪೂರ್ವ ಕಾರ್ಯಕ್ರಮವಾಗಿದೆ. ಸಮಾಜದ ಮಕ್ಕಳ ಆರೋಗ್ಯ ಭಾಗ್ಯದ ದೃಷ್ಟಿಯಿಂದ ಪಾಲಕ-ಪೋಷಕರಿಗೆ ಉತ್ತೇಜನವನ್ನು ನೀಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ಅವರನ್ನು ಸುಸಂಸ್ಕೃತರನ್ನಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪಾಲ್ಗೊಂಡ ಎಲ್ಲಾ ವೈದ್ಯರು ಹಾಗೂ ಪಾಲಕ-ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.
ಅತಿಥಿಯಾಗಿ ಪಾಲ್ಗೊಂಡ ಮಹೀಂದ್ರ ಸೋನಾ ಇದರ ಮಾಜಿ ಆಡಳಿತ ನಿರ್ದೇಶಕ ಜಗನ್ನಾಥ್ ಪ್ರಭು ಅವರು ಕಾರ್ಯಕ್ರಮವನ್ನು ಶ್ಲಾಘಿಸಿದರು. ವಿಮಲಾ ಪ್ರಭು ಅವರು ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ಡಾ| ಪ್ರದೀಪ್ ಆಚಾರ್ಯ ಅವರು ಜಿಎಸ್‌ಬಿಸ್ ಮೆಡಿಕಲ್ ಟ್ರಸ್ಟ್‌ನ ಸಿದ್ಧಿ-ಸಾಧನೆಗಳನ್ನು ವಿವರಿಸಿ, ಸಂಸ್ಥೆಯು ಡೆಂಟಲ್, ಪೆಥಾಲಜಿ, ಫಿಸಿಯೋಥೆರಪಿಯನ್ನು ನಾಲ್ಕು ಸೆಂಟರ್‌ಗಳಲ್ಲಿ ಅಳವಡಿಸಿಕೊಂಡು ಸೇವೆಯನ್ನು ಮಾಡುತ್ತಿದೆ. ನಮ್ಮ ಈ ಕಾರ್ಯಕ್ರಮಕ್ಕೆ ಸಹಕರಿಸಿದ ವಡಾಲ ಮಠದ ಎಲ್ಲರಿಗೂ, ಮಹಿಳಾ ವಿಭಾಗಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.