Advertisement

ಜಿಎಸ್‌ಬಿಎಸ್‌ ಮೆಡಿಕಲ್‌ ಟ್ರಸ್ಟ್‌ ವಡಾಲ: ಆರೋಗ್ಯವಂತ ಶಿಶು ಸ್ಪರ್ಧೆ

03:30 PM Oct 31, 2018 | Team Udayavani |

ಮುಂಬಯಿ: ಜಿಎಸ್‌ಬಿಎಸ್‌ ಮೆಡಿಕಲ್‌ ಟ್ರಸ್ಟ್‌ ವತಿಯಿಂದ ಗಣೇಶೋತ್ಸವದ ಅಂಗವಾಗಿ ಆರೋಗ್ಯವಂತ ಶಿಶು ಸ್ಪರ್ಧೆ ಕಾರ್ಯಕ್ರಮವು ಇತ್ತೀಚೆಗೆ ವಡಾಲ ಶ್ರೀ ರಾಮ ಮಂದಿರದ ದ್ವಾರಕನಾಥ ಭವನದಲ್ಲಿ ನಡೆಯಿತು.

Advertisement

ಸಮಾಜದ ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಒಂದು ವರ್ಷದೊಳಗಿನ ಮಕ್ಕಳ ವಿಭಾಗ, ಒಂದರಿಂದ ಮೂರು ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಸ್ಪರ್ಧೆಯು ಜರಗಿತು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ತಜ್ಞ ವೈದ್ಯರು ಮಕ್ಕಳನ್ನು ಪರೀಕ್ಷಿಸಿ ವಿಜೇತ ಮಕ್ಕಳನ್ನು ಘೋಷಿಸಿದರು. ತೀರ್ಪುಗಾರರುಗಳಾಗಿ ಡಾ| ಸುಹಾಸ್‌ ಪ್ರಭು, ಡಾ| ಕೆ. ಸಿ. ಪತ್ರ, ಡಾ| ನಮೃತಾ ಶೇಣಿÌ ಮತ್ತು ಡಾ| ಅವಿನಾಶ್‌ ದೇಸಾಯಿ ಅವರು ಸಹಕರಿಸಿದರು.

ವಿಜೇತ ಸ್ಪರ್ಧಿಗಳಿಗೆ ಇಂಡೊಕೋ ರೆಮೇಡಿಯಸ್‌ ಪ್ರಾಯೋಜಕತ್ವದಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಒಂದು ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಮಾ| ದೇವಾಂಶ್‌ ಸಾದ್‌ಫುಲೆ,  1 ವರ್ಷದಿಂದ ಮೂರು ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ನ್ಯಾಸಾ ಸದ್‌ಫುಲೆ ಅವರು ಪ್ರಶಸ್ತಿಯನ್ನು ಪಡೆದರು.

ಡಾ| ಸುಹಾಸ್‌ ಪ್ರಭು ಅವರು ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಸುನೀತಾ ರಾವ್‌ ಅವರು ಪಾಲ್ಗೊಂಡು ಸ್ಪರ್ಧೆಗೆ ಸಹಕರಿಸುವುದರೊಂದಿಗೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಡಾ| ಪ್ರದೀಪ್‌ ಆಚಾರ್ಯ ಮಾತನಾಡಿ, ಜಿಎಸ್‌ಬಿಎಸ್‌ ಮೆಡಿಕಲ್‌ ಟ್ರಸ್ಟ್‌ ನಾಲ್ಕು ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂದಿನ ಸ್ಪರ್ಧೆಗೆ ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೆ, ವಡಾಲದ ಮಠದವರಿಗೆ, ಜಿಎಸ್‌ಬಿಎಸ್‌ ಮಹಿಳಾ ವಿಭಾಗದವರ ಸೇವೆಗೆ ಕೃತಜ್ಞತೆ ಸಲ್ಲಿಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next