Advertisement

ಜಿಎಸ್‌ಬಿಎಸ್‌. ಮೆಡಿಕಲ್‌ ಟ್ರಸ್ಟ್‌:ವೈದ್ಯಕೀಯ ಶಿಬಿರ

03:33 PM Oct 30, 2018 | |

ಮುಂಬಯಿ: ದಾದರ್‌ನಲ್ಲಿರುವ ಜಿ. ಎಸ್‌. ಬಿ. ಎಸ್‌. ಮೆಡಿಕಲ್‌ ಟ್ರಸ್ಟ್‌ ವತಿಯಿಂದ ನವರಾತ್ರಿಯ ಅಂಗವಾಗಿ ವೈದ್ಯಕೀಯ ಶಿಬಿರವು ಇತ್ತೀಚೆಗೆ ದಾದರ್‌ ಪೂರ್ವದ ಶಿಲ್ಪಾ ಅಪಾರ್ಟ್‌ಮೆಂಟ್‌ನಲ್ಲಿರುವ ಜಿಎಸ್‌ಬಿಎಸ್‌ ಮೆಡಿಕಲ್‌ ಸೆಂಟರ್‌ನಲ್ಲಿ ನಡೆಯಿತು.

Advertisement

ಸ್ಥಳೀಯ ಪರಿಸರದ ನಿವಾಸಿಗಳಿಗೆ ಅನುಕೂಲವಾಗುವಂತೆ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಜಿಎಸ್‌ಬಿಎಸ್‌ ಮೆಡಿಕಲ್‌ ಟ್ರಸ್ಟ್‌ ಇದರ ಟ್ರಸ್ಟಿ ದಿಲೀಪ್‌ ಪೈ ಅವರ ಮುತುವರ್ಜಿಯಿಂದ ನಡೆದ ಶಿಬಿರದಲ್ಲಿ ನೂರಾರು ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

ರಕ್ತದೊತ್ತಡ, ಇಸಿಜಿ ಬಿಎಂಡಿ ಪರೀಕ್ಷೆ, ಇಎನ್‌ಟಿ, ದಂತ ತಪಾಸಣೆ, ನೇತ್ರ ತಪಾಸಣೆ, ಫಿಜಿಶೀಯನ್‌ ತಪಾಸಣೆ, ಧೂಮಪಾನದಿಂದ ಬಳಲುತ್ತಿರುವವರಿಗೆ ಕೌನ್ಸಿಲಿಂಗ್‌ ಇನ್ನಿತರ ವ್ಯವಸ್ಥೆಯನ್ನು ಶಿಬಿರದಲ್ಲಿ ಆಯೋಜಿಸಲಾಗಿತ್ತು. 

ಆರ್ಥಿಕವಾಗಿ ಹಿಂದುಳಿದ  ಸ್ಥಳೀಯ ತುಳು-ಕನ್ನಡಿಗರು ಸೇರಿ ದಂತೆ, ಸಮಾಜ ಬಾಂಧ ವರು, ಅನ್ಯಭಾಷಿಗರು ಇದರ ಪ್ರಯೋಜನವನ್ನು ಪಡೆದು ಕೊಂಡರು. 

ತಜ್ಞ ವೈದ್ಯರ ತಂಡವು ಶಿಬಿರದಲ್ಲಿ ಪಾಲ್ಗೊಂಡು ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next