Advertisement
ಗಣೇಶೋತ್ಸವ ಆಯೋಜನ ಸಮಿತಿಯ ಸಂಚಾಲಕ ಡಾ| ಭುಜಂಗ ಪೈ ಅವರು ಅಧ್ಯಕ್ಷತೆ ವಹಿಸಿ ಪ್ರಾರ್ಥನೆಗೈದು, ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಮತ್ತು ಸಂಯಮೀದ್ರತೀರ್ಥ ಸ್ವಾಮೀಜಿ ಅವರನ್ನು ಸ್ಮರಿಸಿ ವಂದಿಸಿದರು. ಬಳಿಕ ಪ್ರಸಕ್ತ ಗಣೇಶೋತ್ಸವಕ್ಕೆ ಪೂಜೆ, ಸೇವೆ ಇತ್ಯಾದಿಗಳಿಂದ ಜಮೆಯಾಗಿರುವ ಗಳಿಕೆಯ ವಿವರವನ್ನು ನೀಡಿದರು.
Related Articles
Advertisement
ಕೃಷ್ಣ ಭಟ್ ಅವರು ಮಾತನಾಡಿ, ದೇವರಲ್ಲಿ ವಿಶ್ವಾಸ ಹಾಗೂ ಶ್ರದ್ಧೆ ಇಟ್ಟಲ್ಲಿ ಯಾವುದೇ ಘನ ಕಾರ್ಯಗಳು ನಡೆಯಲು ಸಾಧ್ಯವಿದೆ. ನಮ್ಮ ಗಣಪತಿಯಲ್ಲಿ ಪ್ರಾರ್ಥಿಸಿದಂತೆ ಭಕ್ತರಿಗೆ ಲಭಿಸಿದ ಒಳಿತಿನ ಬಗ್ಗೆ ತಿಳಿಸಿದರು.
ಹಿರಿಯ ಸ್ವಯಂ ಸೇವಕ ಸತೀಶ್ ರಾಮ್ ನಾಯಕ್ ಅವರು, ಗಣೇಶೋತ್ಸವ ಮಂಟಪದ ಕಾಮಗಾರಿಯ ವಿವರ ನೀಡಿ, ಪ್ಲಾಸ್ಟಿಕ್ ಚೀಲವನ್ನು ಬಳಸದಿರಲಿ ಎಂದು ವಿನಂತಿಸಿದರು.
ಸೇವಾ ಮಂಡಳದ ಅಧ್ಯಕ್ಷ ರಮೇಶ್ ಭಂಡಾರ್ಕರ್ ಅವರು ಸ್ವಯಂ ಸೇವಕರು, ಗಣೇಶೋತ್ಸವದ ಸಮಯ, ಆಯಾ ವಿಭಾಗಗಳ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಬೇಕು. ಐದು ದಿನಗಳ ಗಣೇಶೋತ್ಸವದಲ್ಲಿ ಸಾವಿರಾರು ಪೂಜೆ, ಸೇವೆಗಳು ನೆರವೇರಬೇಕಾಗುತ್ತದೆ. ಸರ್ವರೂ ಸಹಕರಿಸುವಂತೆ ವಿನಂತಿಸಿದರು. ಮುಂದಿನ ಸಭೆಯು ಆ. 25ರಂದು ಸಂಜೆ 7.35ಕ್ಕೆ ಜಿಎಸ್‌ಬಿ ಸೇವಾ ಮಂಡಲ ಶ್ರೀ ಗುರುಗಣೇಶ್ ಪ್ರಸಾದ್ ಸಭಾಗೃಹದ ಸಯಾನ್ ಪೂರ್ವ ಇಲ್ಲಿ ನಡೆಯಲಿದೆ ಎಂಬುವುದಾಗಿ ಈ ಸಂದರ್ಭದಲ್ಲಿ ತಿಳಿಸಲಾಯಿತು.