Advertisement

Gruha Jyothi:15 ಅಲ್ಲ,18ರಿಂದ ನೋಂದಣಿ ಆರಂಭ

10:52 PM Jun 14, 2023 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ “ಗೃಹ ಜ್ಯೋತಿ’ ಯೋಜನೆಗೆ ನೋಂದಣಿ ಜೂನ್‌ 15ರ ಬದಲು ಜೂ.18ರಿಂದ ಪ್ರಾರಂಭವಾಗಲಿದೆ.

Advertisement

ಇದನ್ನು ಟೀಕಿಸಿರುವ ಬಿಜೆಪಿ “ಪುಕ್ಸಟ್ಟೆ ವಿದ್ಯುತ್‌ ಅಂತ ವಿದ್ಯುತ್‌ ದರ ಏರಿಸಿದಿರಿ, ಗೃಹ ಜ್ಯೋತಿ ಅರ್ಜಿ ದಿನಾಂಕ ಮುಂದಕ್ಕೆ ತಳ್ಳಿದ್ದೀರಿ’, ನಿಮ್ಮ ಗ್ಯಾರಂಟಿ ಹುನ್ನಾರ ನಾಡಿನ ಸಮಸ್ತ ಜನರಿಗೆ ಅರ್ಥವಾಗಿದೆ’ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಗೃಹ ಜ್ಯೋತಿ ಯೋಜನೆಯ ನೋಂದಣಿ ಕುರಿತು ಪ್ರಕಟಣೆ ಹೊರಡಿಸಿರುವ ಇಂಧನ ಇಲಾಖೆ, ನೋಂದಣಿಯನ್ನು ಜೂನ್‌ 18, 2023ರಿಂದ ಪ್ರಾರಂಭಿಸಲಾಗು ತ್ತದೆ. ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲಿಚ್ಛಿಸುವವರು ವಿಶೇಷವಾಗಿ ಸೃಜಿಸಲಾಗಿರುವ (ಕಸ್ಟಮ್‌ ಮೇಡ್‌) ಸೇವಾ ಸಿಂಧು ಪೋರ್ಟಲ್‌ನಲ್ಲಿ
https://sevasindhugs.karnataka.gov.in/gruhajyothi
ನೋಂದಾಯಿಸಬೇಕಾಗಿದೆ.

ಈ ತಂತ್ರಾಂಶವನ್ನು ಮೊಬೈಲ್‌ ಫೋನ್‌/ ಕಂಪ್ಯೂಟರ್‌ /ಲ್ಯಾಪ್‌ ಟ್ಯಾಪ್‌ಗಳ ಮೂಲಕವೂ ಬಳಸಬಹುದಾಗಿದೆ ಎಂದಿದೆ.

ಫ‌ಲಾನುಭವಿಗಳು ಆಧಾರ್‌ ಕಾರ್ಡ್‌, ವಿದ್ಯುತ್‌ ಖಾತೆ ಸಂಖ್ಯೆಗಳ ಮಾಹಿತಿಗಳನ್ನು (ವಿದ್ಯುತ್‌ ಬಿಲ್‌ನಲ್ಲಿ ಇರುವಂತೆ) ನೋಂದಣಿ ಸಮಯದಲ್ಲಿ ನೀಡಬೇಕು.

Advertisement

ಬೆಂಗಳೂರು ಒನ್‌, ಗ್ರಾಮ ಒನ್‌ ಮತ್ತು ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಅಥವಾ ಯಾವುದೇ ವಿದ್ಯುತ್‌ ಕಚೇರಿಗಳಲ್ಲಿಯೂ ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯುತ್‌ ಕಚೇರಿ ಸಂಪರ್ಕಿಸಬಹುದು ಅಥವಾ 24 * 7 ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next