Advertisement
ಹೌದು, ಒಟ್ಟು 175 ಕೋಟಿ ಮೊತ್ತಕ್ಕೆ ಇಂಡಿಯಾ ಬುಲ್ಸ್ ಮ್ಯೂಚುವಲ್ ಫಂಡ್ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಗ್ರೋವ್ ತಿಳಿಸಿದೆ.
Related Articles
Advertisement
ಈ ಮೂಲಕ ಗ್ರೋವ್ ಸಂಸ್ಥೆಯು, ಆಸ್ತಿ ನಿರ್ವಹಣಾ ಕ್ಷೇತ್ರವನ್ನು ಪ್ರವೇಶಿಸುತ್ತಿರುವ ಮೊದಲ ಹಣಕಾಸು ತಂತ್ರಜ್ಞಾನ ಕಂಪನಿ ಆಗಲಿದೆ.
ಇನ್ನು, ಇಂಡಿಯಾಬುಲ್ಸ್ ಮ್ಯೂಚುವಲ್ ಫಂಡ್ ಬಳಿ 13 ಫಂಡ್‌ಗಳಿವೆ. ತ್ರೈಮಾಸಿಕದ ಸರಾಸರಿ ಆಸ್ತಿ ನಿರ್ವಹಣಾ ಮೊತ್ತವು 2021ರ ಡಿಸೆಂಬರ್ ನಲ್ಲಿ 921.33 ಕೋಟಿಗಳಷ್ಟಿತ್ತು. 2021ರ ಮಾರ್ಚ್ ಅಂತ್ಯಕ್ಕೆ 663.68 ಕೋಟಿಗೆ ಕುಸಿತ ಕಂಡಿದೆ.
ಮ್ಯೂಚುವಲ್ ಫಂಡ್ ವಹಿವಾಟನ್ನು ಮಾರಾಟ ಮಾಡುವುದರಿಂದ ಮಾತೃಸಂಸ್ಥೆ ಆಗಿರುವ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ನ ಬಂಡವಾಳ ಸ್ಥಿತಿ ಸುಧಾರಿಸಲಿದೆ.
ಮ್ಯೂಚುವಲ್ ಫಂಡ್, ಷೇರುಪೇಟೆ ಮತ್ತು ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್) ಹೂಡಿಕೆ ಮಾಡಲು ಡಿಜಿಟಲ್ ವೇದಿಕೆಯನ್ನು ಬಳಸುವ 1.5 ಕೋಟಿಗೂ ಅಧಿಕ ಗ್ರಾಹಕರನ್ನು ಗ್ರೋವ್ ಸಂಸ್ಥೆ ಹೊಂದಿದ್ದು, ಈಕ್ವಿಟಿ ಹೂಡಿಕೆಗಳಲ್ಲಿ ಸಣ್ಣ ಹೂಡಿಕೆದಾರರ ಪಾಲುದಾರಿಕೆಯನ್ನು ಹೆಚ್ಚಿಸುವುದಾಗಿ ಗ್ರೋವ್ ತಿಳಿಸಿದೆ.
ಇದನ್ನೂ ಓದಿ : ಸ್ಫುಟ್ನಿಕ್ v ಲಸಿಕೆ ಬೆಲೆ ಎಷ್ಟು? ಡಾ.ರೆಡ್ಡೀಸ್ ಲ್ಯಾಬ್ ನಿಂದ ಮೊದಲ ಲಸಿಕೆ ವಿತರಣೆ