ಮಹಾನಗರ: ಯಕ್ಷಗಾನ ಇಂದು ದೇಶ, ಭಾಷೆಗಳ ಎಲ್ಲೆಯನ್ನು ಮೀರಿ ಬೆಳೆಯುತ್ತಿರುವುದು ಸಂತಸದ ವಿಚಾರ ಎಂದು ಶ್ರೀನಿವಾಸ ಸಮೂಹ ವಿದ್ಯಾಸಂಸ್ಥೆಗಳ ನಿರ್ದೇಶಕಿ ವಿಜಯಲಕ್ಷ್ಮೀ ರಾಘವೇಂದ್ರ ಅವರು ರಾವ್ ಹೇಳಿದರು.
ಜನವರಿ 11ರಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ಮಹಿಳಾ ಯಕ್ಷಗಾನ ತಾಳಮದ್ದಳೆ ಬಳಗ ಕದ್ರಿಯ “ಯಕ್ಷ ಮಂಜುಳಾ’ದ ದಶಮ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂಗ್ಲಿಷ್ ಭಾಷೆಯಲ್ಲಿಯೂ ಯಕ್ಷಗಾನ ಪ್ರಸಂಗಗಳು ಪ್ರದರ್ಶನ ಗೊಳ್ಳುತ್ತಿವೆ. ವಿದೇಶಗಳಲ್ಲಿಯೂ ಪ್ರದರ್ಶನವಾಗುತ್ತಿದೆ. ಮಹಿಳೆ ಯರು, ಮಕ್ಕಳ ತಂಡಗಳೂ ಇವೆ. ಇಂದು ಮಕ್ಕಳಿಗೆ ಪುರಾಣವನ್ನು ಪರಿಚಯಿಸುವಲ್ಲಿ ಯಕ್ಷಗಾನದ ಪಾತ್ರ ಬಹಳ ದೊಡ್ಡದಾಗಿದೆ ಎಂದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ರಾವ್ ಮಾತನಾಡಿ, ಮಹಿಳೆಯರು ಕೌಟುಂಬಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಜತೆಗೆ ಸಾಮಾಜಿಕ ಕಾರ್ಯದಲ್ಲಿಯೂ ತೊಡಗಿಸಿಕೊಳ್ಳುತ್ತಿದ್ದಾರೆ. ಮಹಿಳಾ ಸಂಘಟನೆ ಸಾಮಾಜಿಕವಾಗಿ ಉತ್ತಮ ರೀತಿಯಲ್ಲಿ ಹೇಗೆ ತೊಡಗಿ ಸಿಕೊಳ್ಳಬಹುದು ಎಂಬುದಕ್ಕೆ ಯಕ್ಷ ಮಂಜುಳಾ ಮಾದರಿಯಾಗಿದೆ ಎಂದು ಅವರು ಹೇಳಿದರು.
ಭಾಗವತರಾದ ಲೀಲಾವತಿ ಬೈಪಾಡಿತ್ತಾಯ , ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಆಸರೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಡಾ| ಆಶಾಜ್ಯೋತಿ ರೈ, ಕದ್ರಿ ದೇಗುಲದ ಪ್ರಧಾನ ಅರ್ಚಕ ರಾಮ ಅಡಿಗ, ಕದ್ರಿ ದೇಗುಲ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ| ಎ.ಜೆ. ಶೆಟ್ಟಿ, ಪಾಲಿಕೆ ಸದಸ್ಯೆ ಶಕೀಲಾ ಕಾವಾ, ಮಂಗಳೂರು ಆಕಾಶವಾಣಿ ನಿಲಯ ನಿರ್ದೇಶಕಿ ಉಷಾಲತಾ ಸರಪಾಡಿ, ಯಕ್ಷಗಾನ ಕಲಾವಿದ ರವಿ ಅಲೆವೂರಾಯ, ಶ್ರೀಕೃಷ್ಣ ಯಕ್ಷಸಭಾ ಕಾರ್ಯಾಧ್ಯಕ್ಷ ಸುಧಾಕರ ರಾವ್ ಪೇಜಾವರ, ವಾಸುದೇವ ರಾವ್ ಕುಡುಪು, ಹಿರಿಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ| ಆರ್.ರತಿದೇವಿ, ಗೌರವ ಸಲಹೆಗಾರ ಪ್ರಭಾಕರ ರಾವ್ ಪೇಜಾವರ, ಭಾಗವತ ಸತೀಶ್ ಶೆಟ್ಟಿ ಪಟ್ಲ ಉಪಸ್ಥಿತರಿದ್ದರು. ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ ದಂಪತಿ ಯನ್ನು ಸಮ್ಮಾನಿಸಲಾಯಿತು. ಯಕ್ಷ ಮಂಜುಳಾ ಸಂಚಾಲಕಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ಸ್ವಾಗತಿಸಿದರು. ಪೂರ್ಣಿಮಾ ಶಾಸ್ತ್ರಿ ನಿರ್ವಹಿಸಿದರು. ರೂಪಾ ಶಾಸ್ತ್ರಿ ವಂದಿಸಿದರು.