Advertisement
ಹಿಂದೆಲ್ಲ ಗ್ರಾಮೀಣ ಪ್ರದೇಶಗಳ ಮನೆಗಳಲ್ಲಿ ಕಂಡುಬರುತ್ತಿದ್ದ ಬಿದಿರಿನ ಪೀಠೊಪಕರಣಗಳ ಬಳಕೆ ಈಗ ನಗರ ಜೀವನದಲ್ಲೂ ಹಾಸುಹೊಕ್ಕಾಗಿವೆ. ಮರದ ಪೀಠೊಪಕರಣಗಳು ಒಂದು ಹಂತಕ್ಕೆ ಔಟ್ಡೇಟೆಡ್ ಅನ್ನಿಸಿದರೂ ಈಗ ಹಾಗಿಲ್ಲ. ಫ್ಯಾಷನ್ ಎಂಬುದು ಎಂದೂ ಒಂದೇ ರೀತಿ ಇರುವುದಿಲ್ಲ. ಮರದ ಉತ್ಪನ್ನಗಳು ಅಗ್ಗದ ಸೊತ್ತುಗಳೂ ಅಲ್ಲ. ಸ್ಥಾನಮಾನದ ದೃಷ್ಟಿಯಿಂದಲೂ ಮರದ ಪೀಠೊಪಕರಣಗಳು ಹೆಚ್ಚುಗಾರಿಕೆ ಹೊಂದಿವೆ. ಮರ ಮತ್ತು ಬಿದಿರಿನ ಪೀಠೊಪಕರಣಗಳಲ್ಲಿ ಕಲಾತ್ಮಕತೆಗೆ ಅವಕಾಶ ಹೆಚ್ಚು. ಇದು ಮನೆಯ ಮೆರುಗನ್ನು ಹೆಚ್ಚಿಸುತ್ತದೆ.
Related Articles
ಮರದ ಬಾಗಿಲಿಗೆ ಅತ್ಯಂತ ಬೇಡಿಕೆ. ಅದ್ಭುತ ಕಲಾತ್ಮಕತೆಯನ್ನು ಇದರಲ್ಲಿ ತರಬಹುದು. ನುರಿತ ಬಡಗಿಗಳಿಂದ ಚಿತ್ತಾರಗಳನ್ನು ಕೆತ್ತಿಸಿದ ಬಾಗಿಲುಗಳು ಮನೆಗೆ ವಿಶೇಷ ಮೆರುಗು ನೀಡುತ್ತವೆ.
Advertisement
ಡ್ರೆಸ್ಸರ್
ಬೆಡ್‌ರೂಂನಲ್ಲಿ ಬಟ್ಟೆ, ಆಭರಣಗಳನ್ನು ನೇತುಹಾಕಲು ಬಳಕೆಯಾಗುವ, ಹಲವು ಡ್ರಾಯರ್‌ಗಳಿರುವ ಡ್ರೆಸ್ಸರ್ ಮರದಿಂದ ತಯಾರಾಗುತ್ತದೆ.
ಬ್ಯಾಂಬೂ ಸ್ಟಿಕ್ಸ್ಮನೆಯ ಗೋಡೆಗಳನ್ನು ಬಿದಿರಿನ ಕೋಲುಗಳಿಂದ ಅಲಂಕರಿಸುವುದು ಹೊಸ ಟ್ರೆಂಡ್. ರೂಂ ಡಿವೈಡರ್ ಆಗಿಯೂ ಬಿದಿರು ಬಳಕೆಯಾಗುತ್ತದೆ. ವಿದ್ಯುತ್ ದೀಪಗಳನ್ನು ಬಿದಿರಿನ ಬೊಂಬುಗಳಿಗೆ ಅಳವಡಿಸಿ, ದೀಪಗಳನ್ನು ತಯಾರಿಸುವುದು, ಗೋಡೆಗಳಲ್ಲಿ ಬಿದಿರುಗಳ ಹಿನ್ನೆಲೆಯಲ್ಲಿ ವಿದ್ಯುತ್ ದೀಪಗಳನ್ನು ಬಳಸಿ ಮನೆಯ ಕೊಠಡಿಗಳನ್ನು ಅದ್ಭುತವಾಗಿ ಸಿಂಗರಿಸುವ ಟ್ರೆಂಡ್ ಕೂಡ ಇದೆ. ಬಿದಿರಿನ ಪೀಠೊಪಕರಣಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಕಬೋರ್ಡ್
ಸಣ್ಣ ಸಣ್ಣ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 5-6 ಡ್ರಾಯರ್‌ಗಳಿರುವ ಕಬೋರ್ಡ್‌ಗಳ ಬಳಕೆ ಈಗ ಟ್ರೆಂಡ್. ತೀರಾ ಅಗತ್ಯದ ವಸ್ತುಗಳಿಗೆ ಇದು ಉತ್ತಮ ಸ್ಥಳ. ಸುಂದರ ವಿನ್ಯಾಸಗಳಲ್ಲಿ ಇದು ಲಭ್ಯವಾಗುವುದರಿಂದ ಮನೆಗೆ ಅಂದ. ಮಾಡರ್ನ್ ಬಾತ್‌ರೂಂಗಳಲ್ಲಿ ಸ್ನಾನದ ಸಾಮಗ್ರಿಗಳನ್ನಿಡುವುದಕ್ಕೆ ದೊಡ್ಡ ಕನ್ನಡಿ ಹೊಂದಿರುವ ಮರದಿಂದ ತಯಾರಿಸಿದ, ಬಿದಿರಿನಿಂದ ಫ್ರೇಮ್ ಇರುವ ಕಬೋರ್ಡ್ ಗಳು ಒಳ್ಳೆಯ ಲುಕ್ ನೀಡುತ್ತವೆ. – ಎಸ್ಕೆ