Advertisement

ಗೋಧಿ ಬೆಳೆದೆ‌ು ಗೆದ್ದವರು

11:45 AM Mar 05, 2018 | Harsha Rao |

ಗೋಧಿ ಮಧ್ಯೆ ಇತರ ಬೆಳೆಗಳನ್ನು ಬೆಳೆಯುವುದು ಕಷ್ಟ ಎಂಬ ನಂಬಿಕೆ ಬೆಳೆಗಾರರಲ್ಲಿದೆ. ಇವರು ಮಿಶ್ರಬೆಳೆಯಾಗಿ ಗೋಧಿಯೊಂದಿಗೆ ಜೋಳವನ್ನು ಬಿತ್ತಿದ್ದು ಅವುಗಳಿಂದಲೂ ಉತ್ತಮ ಇಳುವರಿ ದೊರೆತಿದೆ.

Advertisement

ಗೋಧಿ ಬೆಳೆಯಿಂದಲೇ ಪ್ರತಿ ವರ್ಷ ಐವತ್ತು ಸಾವಿರ ರೂಪಾಯಿಗೂ ಅಧಿಕ ಆದಾಯ ಗಳಿಸುತ್ತಿರುವ ಕೃಷಿ ಕುಟುಂಬವೊಂದು ಸವದತ್ತಿ ತಾಲೂಕಿನ ಬೆಟ್ಟಸೂರುನಲ್ಲಿದೆ. ಆ ಕುಟುಂಬದ ಮುಖ್ಯ ಕೃಷಿಕನ ಹೆಸರು ಮಂಜುನಾಥ್‌.  ಇವರು ಪೂರ್ವಜರ ಕಾಲದಿಂದಲೂ ಬೆಳೆದುಕೊಂಡು ಬಂದ ಬೆಳೆಯಿದು. ತಾಯಿ ಶಶಿಕಲಾ ಇವರ ಜೊತೆ ಕೈ ಜೋಡಿಸಿದ್ದಾರೆ. ಅಕ್ಟೋಬರ್‌ನಲ್ಲಿ ತನ್ನ ಒಂದೂವರೆ ಎಕರೆಯಲ್ಲೂ ಬಿತ್ತಿದ್ದಾರೆ. ಒಣ ಬೇಸಾಯ ಮತ್ತು ನಿರಾಶ್ರಿತವಾಗಿ ಹೀಗೆ ಎರಡು ವಿಧದಲ್ಲಿ ಬೆಳೆಯುತ್ತಿದ್ದಾರೆ. ಒಣ ಬೇಸಾಯದಲ್ಲಿ ಬೆಳೆದ ಗೋಧಿಯನ್ನು ಚಪಾತಿ, ರವೆ ತಯಾರಿಯಲ್ಲಿ, ನಿರಾಶ್ರಿತವಾಗಿ ಬೆಳೆದದ್ದನ್ನು ಉಪ್ಪಿಟ್ಟು ತಯಾರಿಯಲ್ಲಿ ಬಳಸಲಾಗುತ್ತದೆ. ಒಂದುವರೆ ಎಕರೆ ಬಿತ್ತನೆಗೆ 37 ಸೇರು ಗೋಧಿ ಬೇಕು.

ಪ್ರತಿವರ್ಷ ಅಕ್ಟೋಬರ್‌ ತಿಂಗಳಲ್ಲಿ ಭೂಮಿಯನ್ನು ಉಳುಮೆ ಮಾಡಿ ಗೋಧಿ ಬಿತ್ತುತ್ತಾರೆ. ಯಾವುದೆ ರೀತಿಯ ಗೊಬ್ಬರ, ಔಷಧ, ನೀರಾವರಿ ವ್ಯವಸ್ಥೆಯನ್ನು ನೀಡುವುದಿಲ್ಲ. ಗಿಡ ಕೆಂಬಣ್ಣಕ್ಕೆ ಬಂದ ನಂತರ ಗಿಡ ಸಮೇತ ಕಟಾವು ಮಾಡುತ್ತಾರೆ. ನಂತರ ಕಾಳನ್ನು ಬೇರ್ಪಡಿಸಿ ಒಣಗಿಸಿಟ್ಟುಕೊಳ್ಳುತ್ತಾರೆ. ಕ್ವಿಂಟಾಲ್‌ಗೆ ರೂ. 3000 ದರವಿದೆ. ಒಂದೂವರೆ ಎಕರೆಯಲ್ಲಿ ಹದಿನೈದು ಕ್ವಿಂಟಾಲ್‌ ಇಳುವರಿ ಪಡೆಯುತ್ತಾರೆ. ಗೋಧಿಯನ್ನು ಹೆಚ್ಚಾಗಿ ಮನೆ ಬಳಕೆಗೆ ಉಪಯೋಗಿಸುತ್ತಾರೆ. ಒಣ ಕಡ್ಡಿಗಳನ್ನು ದನಗಳಿಗೆ ಮೇವಿವಾಗಿ ಬಳಸುತ್ತಾರೆ.

ಗೋಧಿ ಮಧ್ಯೆ ಇತರ ಬೆಳೆಗಳನ್ನು ಬೆಳೆಯುವುದು ಕಷ್ಟ ಎಂಬ ನಂಬಿಕೆ ಬೆಳೆಗಾರರಲ್ಲಿದೆ. ಇವರು ಮಿಶ್ರಬೆಳೆಯಾಗಿ ಗೋಧಿಯೊಂದಿಗೆ ಜೋಳವನ್ನು ಬಿತ್ತಿದ್ದು ಅವುಗಳಿಂದಲೂ ಉತ್ತಮ ಇಳುವರಿ ದೊರೆತಿದೆ. ವರ್ಷದಲ್ಲಿ ಒಂದು ಬೆಳೆಯಾಗಿ ಮಾತ್ರ ಗೋಧಿ ಬೆಳೆಯಬೇಕು. ಮಳೆಗಾಲದಲ್ಲಿ ತರಕಾರಿ ಬೆಳೆಯಲಾಗುತ್ತದೆ. ತರಕಾರಿಗಳಿಗೆ ಹಾಕಿದ ಗೊಬ್ಬರವೇ ಗೋಧಿಗೂ ಸಾಕಾಗುತ್ತದೆ. ಚಳಿಗಾಲದಲ್ಲಿ ಭೂಮಿಗೆ ಇಬ್ಬನಿಗಳು ಬೀಳುವುದರಿಂದ ಮಣ್ಣಿನಲ್ಲಿ ನೀರಿನ ಅಂಶ ಇರುತ್ತದೆ. ಆದ್ದರಿಂದ ನೀರು ನೀಡುವ ಅಗತ್ಯವೂ ಇಲ್ಲ ಎಂಬುದು ಮಂಜುನಾಥ್‌ರ ಅನುಭವದ ಮಾತು.

ಮಾಹಿತಿಗೆ: 8722045525

Advertisement
Advertisement

Udayavani is now on Telegram. Click here to join our channel and stay updated with the latest news.

Next