ಮುಂಬಯಿ, ಸೆ. 17: ಜ್ಯೋತಿ ಕೋ – ಆಪರೇಟಿವ್ ಕ್ರೆಡಿಟ್ ಸೊಸೈಟಿ ಉತ್ತಮ ಸಾಧನೆಯೊಂದಿಗೆ ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಸದಸ್ಯರ ಸಹಕಾರದಿಂದ ಇದು ಸದಾ ಬೆಳೆಯುತ್ತಿರುವ ಒಂದು ಆರ್ಥಿಕ ಸಂಸ್ಥೆಯಾಗಿದೆ. ಇದಕ್ಕಾಗಿ ನಾನು ಎಲ್ಲರನ್ನೂ ಅಭಿನಂದಿಸುತ್ತಿದ್ದೇನೆ. ಇನ್ನು ಮುಂದೆ ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹವು ನಮ್ಮೊಂದಿಗಿದ್ದರೆ ಇನ್ನಷ್ಟು ಪ್ರಗತಿಯು ಸಾಧ್ಯ ಎಂದು ಜ್ಯೋತಿ ಕೋ- ಆಪರೇಟಿವ್ ಕ್ರೆಡಿಟ್ ಸೊಸೈಟಿ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಅವರು ನುಡಿದರು.
ಸೆ. 15ರಂದು ಸಯಾನ್ ಪಶ್ಚಿಮದ ನಿತ್ಯಾನಂದ ಸಭಾಗೃಹದಲ್ಲಿ ನಡೆದ ಕುಲಾಲ ಸಂಘ ಮುಂಬಯಿ ಇದರ ಸಂಚಾಲಕತ್ವದ ಜ್ಯೋತಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ 38 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರುವ ಆರ್ಥಿಕ ವರ್ಷದಲ್ಲಿ 100 ಸದಸ್ಯರನ್ನು ಮಾಡಿದ ಓರ್ವರಿಗೆ ಹಾಗೂ ಒಂದು ಕೋ. ರೂ. ಠೇವಣಿ ಸಂಗ್ರಹಿಸಿದವರಿಗೆ ಚಿನ್ನದ ಪದಕ ನೀಡುವುದಾಗಿ ಘೋಷಿಸಿ, ಸೊಸೈಟಿಯ ಪ್ರಗತಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕುಲಾಲ ಸಂಘ ಮುಂಬಯಿ ಅಧ್ಯಕ್ಷ, ಜ್ಯೋತಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್ ಎಸ್. ಕುಲಾಲ್ ವರದಿ ಮಂಡಿಸಿದರು.
ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ಜೆಡಿಡಿ ಪ್ರತಿನಿಧಿಗಳಾದ ಮುಖ್ಯ ಕಚೇರಿಯ ಸಿ. ಎಲ್. ಬಂಗೇರ ಮತ್ತು ಜಯ ಅಂಚನ್ ಹಾಗೂ ವಿವಿಧ ಶಾಖೆಗಳ ಪ್ರತಿನಿಧಿಗಳಾದ ಭಾಸ್ಕರ್ ಎಂ. ಮೂಲ್ಯ, ಕೃಷ್ಣ ಮೂಲ್ಯ, ಹರಿಶ್ಚಂದ್ರ ಮೂಲ್ಯ, ಕೃಷ್ಣ ಮೂಲ್ಯ ಅವರನ್ನು ಗೌರವಿಸಲಾಯಿತು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆಗೈದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಪ್ರಾರಂಭದಲ್ಲಿ ಗಣ್ಯರು ದೀಪಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ಕಾರ್ಯದರ್ಶಿ ದೇವದಾಸ್ ಎಲ್. ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆ ಯಲ್ಲಿ ಉಪ ಕಾರ್ಯಾಧ್ಯಕ್ಷ ಪಿ. ಶೇಖರ್ ಮೂಲ್ಯ, ಭಾರತಿ ಪಿ. ಅಕ್ರ್ಯಾನ್, ಸದಸ್ಯರಾದ ಹಿಂದುರಾವ್ ಎಂ. ಥೋರಟ್, ಡಿ. ಐ. ಮೂಲ್ಯ, ಚಂದು ಕೆ. ಮೂಲ್ಯ, ಬಾಬು ಜಿ. ಅಂಚನ್, ಗಿರೀಶ್ ವಿ. ಕರ್ಕೇರ, ನ್ಯಾಯವಾದಿ ಸವಿತಾ ಕೆ. ಎಸ್. ಕುಲಾಲ್, ರಾಜೇಶ್ ಬಂಜನ್, ಕರುಣಾಕರ ಬಿ. ಸಾಲ್ಯಾನ್, ನ್ಯಾಯವಾದಿ ಉಮನಾಥ್ ಕೆ. ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ 2019-2020 ನೇ ಲೆಕ್ಕಪರಿಶೋಧಕರಾಗಿ ಸಿಎ ರಮೇಶ್ ಎ. ಶೆಟ್ಟಿ ರಾವ್ ಆ್ಯಂಡ್ ಕಂಪೆನಿಯನ್ನು ನೇಮಿಸಲಾಯಿತು. ಹಾಗೂ ಆಂತರಿಕ ಲೆಕ್ಕಪರಿಶೋಧಕರಾಗಿ ಯುಡಿಎಸ್ ಅಸೋಸಿಯೇಟ್ಸ್‌ನ್ನು ನೇಮಿಸಲಾಯಿತು. ಕೋಶಾಧಿಕಾರಿ ಭಾರತಿ ಪಿ. ಆಕ್ರ್ಯಾನ್ ವಂದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯ ಬಾಂಧವರು ಉಪಸ್ಥಿತರಿದ್ದರು.
ಚಿತ್ರ-ವರದಿ : ಸುಭಾಷ್ ಶಿರಿಯಾ