Advertisement

Growers Worried: ಕುಸಿತ ಹಾದಿಯಲ್ಲಿ ರಬ್ಬರ್‌ ಧಾರಣೆ

05:42 AM Oct 24, 2024 | Team Udayavani |

ಸುಳ್ಯ: ಮಳೆಗಾಲ ಆರಂಭದಲ್ಲಿ ಏರಿಕೆಯಾಗಿದ್ದ ರಬ್ಬರ್‌ ಧಾರಣೆ ಈಗ ಕುಸಿತದ ಹಾದಿಯಲ್ಲಿ ಸಾಗುತ್ತಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ.
ಹಲವು ವರ್ಷಗಳ ಹಿಂದೆ ರಬ್ಬರ್‌ಗೆ ಉತ್ತಮ ಧಾರಣೆ ಸಿಕ್ಕಿದ್ದ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ರಬ್ಬರ್‌ ಬೆಳೆ ಗಣನೀಯವಾಗಿ ಹೆಚ್ಚಳಗೊಂಡಿತ್ತು.

Advertisement

ಈ ವರ್ಷದ ಜುಲೈ ತಿಂಗಳ ಮೊದಲು ಕೆಜಿ ರಬ್ಬರ್‌ಗೆ(ಗ್ರೇಡ್‌) 200ಕ್ಕಿಂತ ಕಡಿಮೆ ಧಾರಣೆ ಇತ್ತು. ಬಳಿಕದಲ್ಲಿ ನಿಧಾನ ಗತಿಯಲ್ಲಿ ಹೆಚ್ಚಳ ಕಂಡು ಆಗಸ್ಟ್‌ ವೇಳೆಗೆ ಗ್ರೇಡ್‌ ರಬ್ಬರ್‌ ಕೆಜಿಗೆ 244-255 ರೂ. ವರೆಗೂ ಹೆಚ್ಚಳವಾಗಿತ್ತು. ಅನಂತರ ಇಳಿಕೆ ಕಾಣಲು ಆರಂಭಿಸಿದ್ದು, ಅಕ್ಟೋಬರ್‌ ಆರಂಭದಲ್ಲಿ 210ಕ್ಕೆ ತಲುಪಿತ್ತು.

ಮಂಗಳವಾರ (ಅ.22) ಗ್ರೇಡ್‌ ರಬ್ಬರ್‌ ಕೆಜಿಗೆ 178 ಹಾಗೂ ರಬ್ಬರ್‌  ಸ್ಕ್ರಾಪ್‌ ಕೆಜಿಗೆ 112ರಂತೆ ಕ್ಯಾಂಪ್ಕೋ ಸಂಸ್ಥೆಯಲ್ಲಿ ವ್ಯವಹಾರ ನಡೆದಿದೆ. ರಬ್ಬರ್‌ ಧಾರಣೆಯಲ್ಲಿ ಇನ್ನಷ್ಟು ಕುಸಿತ ಮುಂದುವರಿಯುವ ಆತಂಕವನ್ನು ಬೆಳೆಗಾರರು ಹಾಗೂ ವ್ಯಾಪಾರಸ್ಥರು ವ್ಯಕ್ತಪಡಿಸುತ್ತಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ರಬ್ಬರ್‌ ಆಮದು ಆಗಿರುವ ಕಾರಣದಿಂದ ದೇಶೀಯ ರಬ್ಬರ್‌ ಉತ್ಪಾದಕರ ಮೇಲೆ ಧಾರಣೆಯ ಮೇಲೆ ಪರಿಣಾಮ ಬೀರಿದೆ ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ. ಸರಾಸರಿ 200 ರೂ. ಆಸುಪಾಸಿನಲ್ಲಿ ರಬ್ಬರ್‌ ಧಾರಣೆ ಸ್ಥಿರವಾದಲ್ಲಿ ಅನುಕೂಲ ಆಗಲಿದೆ ಎಂಬುದು ಬೆಳೆಗಾರರ ಮಾತು.

Advertisement

Udayavani is now on Telegram. Click here to join our channel and stay updated with the latest news.

Next