ವಿಟ್ಲ: ಕಷ್ಟವನ್ನು ಅರಿತವರಿಗೆ ಸಹಾಯ ಮಾಡುವ ಮನಸ್ಸು ಇರುತ್ತದೆ. ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಂಡು ಎತ್ತರಕ್ಕೆ ಏರಬೇಕು. ಕನ್ನಡ ಮಾಧ್ಯಮದಲ್ಲಿ ಓದಿದರೂ ಎತ್ತರಕ್ಕೇರಲು ಸಾಧ್ಯ ಎಂದು ಬೆಂಗಳೂರು ಸುಪ್ರಜಿತ್ ಫೌಂಡೇಶನ್ ಅಧ್ಯಕ್ಷ ಅಜಿತ್ ಕುಮಾರ್ ರೈ ಹೇಳಿದರು.
ರವಿವಾರ ವಿಟ್ಲದ ವಿಟuಲ ಪ.ಪೂ. ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಬೆಂಗಳೂರು ಸುಪ್ರಜಿತ್ ಎಂಜಿನಿಯರಿಂಗ್ ಲಿಮಿಟೆಡ್‌ನ ಸುಪ್ರಜಿತ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಟ್ಲದಲ್ಲಿ ಆರಂಭಿಸಿದಾಗ ಈ ವಿದ್ಯಾರ್ಥಿವೇತನ ವಿತರಣೆ ಯೋಜನೆ ಸಣ್ಣ ಯೋಚನೆಯದಾಗಿತ್ತು. ಇಂದು ಬಂಟ್ವಾಳ ತಾಲೂಕಿನ ಎಲ್ಲ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಲಭಿಸುವಂತಾಗಿದೆ. ಮಳೆಗಾಲ ದಲ್ಲೂ ಮನೆ ಮನೆಗೆ ತೆರಳಿ ಅರ್ಹ ಫಲಾನುಭವಿ ಯನ್ನು ಆಯ್ಕೆ ಮಾಡುವ ಶಿಕ್ಷಕರ ಶ್ರಮ ಮೆಚ್ಚು ವಂಥದ್ದು ಎಂದರು.
ವಿದ್ಯಾರ್ಥಿವೇತನ ವಿತರಣೆ ಸಮಿತಿ ಅಧ್ಯಕ್ಷ ಎಂ. ಅನಂತಕೃಷ್ಣ ಹೆಬ್ಟಾರ್ ಮಾತನಾಡಿ, 2012ರಲ್ಲಿ 61 ಮಕ್ಕಳಿಗೆ ನೆರವು ನೀಡುವ ಮೂಲಕ ವಿದ್ಯಾರ್ಥಿ ವೇತನ ವಿತರಣೆ ಆರಂಭಿಸಲಾಗಿತ್ತು. 2018ರಲ್ಲಿ 575 ವಿದ್ಯಾರ್ಥಿಗಳಿಗೆ ಸುಮಾರು 34.13 ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ. 7 ವರ್ಷಗಳಲ್ಲಿ ಒಟ್ಟು 2,409 ಫಲಾನುಭವಿಗಳಿಗೆ 1.35 ಕೋಟಿ ರೂ. ವಿತರಿಸಲಾಗಿದೆ ಎಂದು ಹೇಳಿದರು.
ಉದ್ಯಮಿ ಸುಬ್ರಾಯ ಪೈ, ವಿಟuಲ ವಿದ್ಯಾ ಸಂಘದ ಸಂಚಾಲಕ ಎಲ್.ಎನ್. ಕೂಡೂರು ಮಾತನಾಡಿದರು. ಶಿಕ್ಷಕರಾದ ಚಂದ್ರಕಾಂತ ಡಿ., ಲಕ್ಷ್ಮಣ ನಾಯಕ್, ರಮೇಶ್ ಬಿ.ಕೆ., ಪ್ರಕಾಶ್ ನಾಯಕ್, ಸುಶೀಲಾ ಶಂಭೂರು, ಶ್ರೀಪತಿ ನಾಯಕ್, ಮಹೇಶ್ ಕೆ., ರಾಜಶೇಖರ, ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ವಿದ್ಯಾರ್ಥಿ ವೇತನ ಪಡೆದವರ ಪಟ್ಟಿ ಓದಿದರು.
2012ರಿಂದ ಸತತವಾಗಿ ವಿದ್ಯಾರ್ಥಿವೇತನ ಪಡೆಯುತ್ತಿ ರುವ ವಿದ್ಯಾ ಸರಸ್ವತಿ, ಜಸ್ಟಿನ್ ಲೂಯಿಸ್, ಶಿಲ್ಪಾ ಕೆ., ಪೂರ್ಣಿಮಾ ಪಿ.ಬಿ. ಅನಿಸಿಕೆ ವ್ಯಕ್ತಪಡಿಸಿದರು.ವಿಟuಲ ಪ.ಪೂ. ಕಾಲೇಜು ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಸ್ವಾಗತಿಸಿ, ವಿಟuಲ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ ವಂದಿಸಿದರು. ಉಪನ್ಯಾಸಕ ಅಣ್ಣಪ್ಪ ಸಾಸ್ತಾನ ನಿರೂಪಿಸಿದರು.