ರಾಮನಾಥಪುರ: ತಂಬಾಕು ಮಂಡಳಿ ವ್ಯಾಪ್ತಿಯ ರೈತರು ಅಧಿಕ ತಂಬಾಕು ಉತ್ಪಾದನೆ ಆಸೆಗೆ ಕಟ್ಟುಬಿದ್ದು ಬೆಳೆ ವಿಸ್ತೀರ್ಣ ಹೆಚ್ಚಿಸಿಕೊಳ್ಳುವ ಬದಲು ಕಡಿಮೆ ವಿಸ್ತೀರ್ಣದಲ್ಲಿಯೇ ಸಾವಯವ ಕೃಷಿಯಲ್ಲಿ ಗುಣಮಟ್ಟದ ತಂಬಾಕು ಬೆಳೆದರೆ ಮಣ್ಣಿನ ಫಲವತ್ತತೆಯನ್ನೂ ಕಾಪಾಡಿಕೊಳ್ಳಬಹುದು ಎಂದು ರಾಮನಾಥಪುರದ ತಂಬಾಕು ಮಾರುಕಟ್ಟೆ ಪ್ಲಾಟ್ ಫಾರಂ -7 ಅಧೀಕ್ಷಕ ಅಮಲ್ ಡಿ.ಸಾಮ್ ಹೇಳಿದರು.
ತಂಬಾಕು ಬೆಳೆಯಲ್ಲಿ ರಾಸಾಯನಿಕ ಗೊಬ್ಬರದ ಬಳಕೆ ಕಡಿತಗೊಳಿಸಿ ಸಾವ ಯವ ಕೃಷಿ ನಡೆಸಿದರೆ ಮಣ್ಣಿನಲ್ಲಿ ಫಲ ವತ್ತತೆ ಕಾಪಾಡಿಕೊಳ್ಳುವುದರ ಜೊತೆಗೆ ಗಿಡಗಳಿಗೆ ಬಾಧಿಸುವ ಕೀಟಗಳ ಹಾವಳಿ ನಿಯಂತ್ರಿಸಬಹುದು. ಇದರಿಂದ ಮಣ್ಣಿನಲ್ಲಿ ಉಳಿಯುವ ತೇವಾಂಶದಿಂದ ಬೇಗನೆ ಬೆಳವಣಿಗೆ ಹೊಂದಲು ಸಹಾಯಕವಾಗಲಿದೆ ಎಂದರು.
ಹತೋಟಿಗೆ ಕ್ರಮ: ತಂಬಾಕು ಬೆಳೆಗೆ ಬಾಧಿಸುವ ಸೊರಗು ರೋಗ ಹಾಗೂ ಕೀಟಗಳ ಹಾವಳಿ ಹತೋಟಿಗೆ ತರ ಬೇಕಾದರೆ ರೈತರು ಕಡ್ಡಾಯವಾಗಿ ಐದು ಪಂಚಸೂತ್ರ ಅಳವಡಿಸಿಕೊಳ್ಳಬೇಕು. ಬೆಳೆ ಪರಿವರ್ತನೆಗೆ ಆದ್ಯತೆ ನೀಡಬೇಕು. ಸೊರಗು ರೋಗದ ಲಕ್ಷಣ ಕಂಡುಬಂದ ಕೂಡಲೇ ಬಾಸ್ಟಿನ್ ಔಷಧಿಯನ್ನು 1 ಲೀಟರ್ ನೀರಿಗೆ 2 ಗ್ರಾಂ. ಬೆರೆಸಿ 4 ಗಿಡಗಳಿಗೆ ಮಾತ್ರ ಸಿಂಪಡಿಸಬೇಕು. ಏಪ್ರಿಲ್ ಅಥವಾ ಮೇ ತಿಂಗಳ ಮುಂಗಾ ರಿನಲ್ಲಿ ಆಳವಾಗಿ ಭೂಮಿ ಉಳುಮೆ ಮಾಡಿ ಕೊಟ್ಟಿಗೆ ಗೊಬ್ಬರ ಹಾಕಿ ಟ್ರೈಕೋ ಡರ್ಮಾ ಔಷಧಿ ಬಳಸಿ ದರೆ ರೋಗದ ನಿವಾರಣೆ ಸಾಧ್ಯ. ಬೇವಿನ ಕಷಾಯ ಸಿಂಪಡಿಸುವುದ ರಿಂದಲೂ ಹತೋಟಿ ಮಾಡಬಹುದು ಎಂದು ಹೇಳಿದರು.
ಟ್ರೇ ಸಸಿ ಮಡಿ ಬೆಳೆಸುವಾಗ ಕೊಕೊಪಿಡ್ ಜೊತೆ ಟ್ರೈಕೋಡರ್ಮಾ ಬೆರಸಬೇಕು. ನಾಟಿಗೆ ಮುನ್ನ ಸಸಿಗಳನ್ನು ಬಾಸ್ಟಿನ್ ಔಷಧಿ ನೀರಿನಲ್ಲಿ ತೊಯ್ಯಿಸ ಬೇಕು. ಕಾಂಚನಾ, ಸಿ.ಎಚ್.3, ಎಫ್. ಸಿ.ಎಚ್. 222 ತಳಿಯ ಸಸಿ ಮಡಿ ಬೆಳೆಸಿ ಎಂದು ಸಲಹೆ ನೀಡಿದ ಅವರು, ಬೆಳೆಗೆ ವಿಪರೀತ ರಾಸಾಯನಿಕ ಅಂಶ ಸೇರ್ಪಡೆ ಆಗದಂತೆ ಹಂತ ಹಂತವಾಗಿ ಅಗತ್ಯ ಪ್ರಮಾಣದಲ್ಲಿ ನೀಡಿದರೆ ಗುಣಮಟ್ಟ ಕಾಯ್ದುಕೊಳ್ಳಬಹುದೆಂದರು.
Advertisement
ತಂಬಾಕು ಸಸಿಗಳ ತಾಕುಗಳಿಗೆ ಭೇಟಿ ನೀಡಿ ಬೆಳೆಯಲ್ಲಿ ಅನುಸರಿಸಬೇಕಾದ ಕೃಷಿ ಕಾರ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
Related Articles
Advertisement
35ರಿಂದ 40 ದಿನಗಳ ನಂತರ ಮೇಲುಗೊಬ್ಬರ ನೀಡುವಾಗ ಡಿಎಪಿ ಬÙಕೆ ನಿಲ್ಲಿಸಬೇಕು. ಇದರಿಂದ ಗಿಡಗಳು ಎತ್ತರವಾಗಿ ಬೆಳೆದು ಎಲೆಗಳು ಕಪ್ಪು ಬಣ್ಣಕ್ಕೆ ತಿರುಗಿ ಹಣ್ಣಾಗುವುದನ್ನು ತಪ್ಪಿಸಿ ಬಲಿಷ್ಠತೆ ಪಡೆದುಕೊಳ್ಳಲಿದೆ ಎಂದರು.
ಔಷಧಿ ಸಿಂಪರಣೆ: ಆರೋಗ್ಯಕ್ಕೆ ಹಾನಿ ಕಾರಕವಾದ ತಂಬಾಕಿನಲ್ಲಿ ಇನ್ನಷ್ಟು ರಾಸಾಯನಿಕ ಉಳಿಕೆ ಅಂಶ ಹೆಚ್ಚಿ ಪ್ರಾಮುಖ್ಯತೆ ಕಳೆದುಕೊಳ್ಳಲಿದೆ. ಸದ್ಯ ಇಲ್ಲಿನ ಉತ್ಪಾದಿತ ಹೊಗೆಸೊಪ್ಪನ್ನು ಅನ್ಯ ದೇಶಗಳಿಗೆ ಹೋಲಿಸಿದರೆ ರಾಸಾಯನಿಕ ಬಳಕೆ ಅಂಶ ಕಡಿಮೆಯಿದೆ. ಅದನ್ನು ಇನ್ನೂ ಕಡಿಮೆ ಮಾಡಬೇಕು. ಇಲ್ಲದಿದ್ದರೆ ವರ್ತಕರು ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬೇಕಾದ ಕಡೆ ಉತ್ಪನ್ನ ಕೊಳ್ಳುವ ಸಾಧ್ಯತೆಯಿದೆ. ರೈತರು ಎಚ್ಚೆತ್ತು ಕೊಂಡು ರಸಗೊಬ್ಬರ ಬಳಕೆ, ಔಷಧಿ ಸಿಂಪರಣೆ ಆದಷ್ಟೂ ಕಡಿಮೆ ಮಾಡಬೇಕೆಂದರು.
ಶಿಫಾರಸು ಪಾಲಿಸಿ: ಬೆಳೆ ನಿರ್ವಹಣೆ ಕುರಿತು ಕೃಷಿ ವಿಜ್ಞಾನಿಗಳು ಹಾಗೂ ಮಂ ಡಳಿ ಅಧಿಕಾರಿಗಳು ನೀಡಿದ ಶಿಫಾರಸು ಗಳನ್ನು ರೈತರು ತಪ್ಪದೇ ಪಾಲಿಸುವ ಮೂಲಕ ತಂಬಾಕಿನ ಗುಣಮಟ್ಟ ಹೆಚ್ಚಿಸಿ ಕೊಳ್ಳಬೇಕು. ಬೆಳೆದ ತಂಬಾಕು ಗಿಡಗ ಳಿಗೆ ಹೊಲಗಳಲ್ಲಿ ಎದುರಾಗುವ ಕೀಟ ಗಳ ಹಾವಳಿ ಕೊಂಚ ಮಟ್ಟಿಗೆ ತಗ್ಗಿಸುವ ಉದ್ದೇಶದಿಂದ ಪ್ರಾಯೋಗಾರ್ಥವಾಗಿ ಅಂಟು ಕಾಗದ ವಿತರಿಸಲಾಗುತ್ತಿದೆ. ಇವುಗಳನ್ನು ಬೆಳೆ ಜಮೀನಿನಲ್ಲಿ ನೆಟ್ಟರೆ ಬಿಸಿಲು, ಮಳೆ ಬಂದರೂ ಅಂಟು ಕರಗುವುದಿಲ್ಲ ಎಂದರು.