ಮರವಂತೆ (ಉಪ್ಪುಂದ): ಜೇಸಿ ಸಂಸ್ಥೆಯಿಂದ ರಾಷ್ಟ್ರ ಮಟ್ಟದಿಂದ ಗ್ರಾಮೀಣ ಪ್ರದೇಶದ ಯುವಜನತೆಯಲ್ಲಿ ಆತ್ಮವಿಶ್ವಾಸದ ಜತೆ ಸೇವಾ ಮನೋಭಾವನೆ ಮೂಡಿಸುವ ಕೆಲಸವಾಗುತ್ತಿದೆ. ಯುವಕರಲ್ಲಿ ವ್ಯಕ್ತಿತ್ವ ವಿಕಸನದ ಮೂಲಕ ಮಾನವೀಯತೆಯ ಮೌಲ್ಯ ರೂಪಿಸಿ ಸಮಾಜದಲ್ಲಿ ನಿಸ್ವಾರ್ಥ ಸೇವೆ ಗೈಯುವಂತೆ ಮಾಡುತ್ತಿರುವುದು ಶ್ಲಾಘಿನೀಯ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಶಾಲೆಬಾಗಿಲು ಮಾತೃಶ್ರೀ ಸಭಾಭವನದಲ್ಲಿ ನಡೆದ ಉಪ್ಪುಂದ ಜೇಸಿ ಸ್ನೇಹ ಜೀವಿ-2017ನೇ ಸಾಲಿನ ಜೇಸಿ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಅರಣ್ಯ ಇಲಾಖೆ ಮಹಾಮಂಡಲ ಅಧ್ಯಕ್ಷ ರಘುರಾಮ ದೇವಾಡಿಗ ಮಾತನಾಡಿ, ದೇಶದ ಉನ್ನತೀಕರಣಕ್ಕೆ ಜೇಸಿ ಮುನ್ನಡೆ ಬರೆಯುತ್ತಿದ್ದು, ಯುವಜನತೆಯನ್ನು ಸಮಾಜದಲ್ಲಿ ಸುದೃಢವಾಗಿಸಲು ಜೇಸಿ ತರಬೇತಿ ಕಾರ್ಯಕ್ರಮಗಳಿಂದ ಸಾಧ್ಯವಾಗುತ್ತಿದೆ ಎಂದರು.
ಈ ಸಂದರ್ಭ ಬೈಂದೂರು ಲಾವಣ್ಯ ಅಧ್ಯಕ್ಷ ಗಿರೀಶ್ ಬೈಂದೂರು, ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ಗುರುಮಾಚಿದೇವ ಸಹಕಾರಿ ಸಂಘದ ಉಡುಪಿ ಅಧ್ಯಕ್ಷ ಎಚ್. ಆನಂದ ಮಡಿವಾಳ, ಕೊಲ್ಲೂರು ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ರಮೇಶ್ ಗಾಣಿಗ ಕೊಲ್ಲೂರು, ಶಾರದಾ ದೇವಾಡಿಗ ನಾಗೂರು, ಕುಂದಾಪುರ ಛತ್ರಪತಿ ಯುವ ಸೇನೆ ಅಧ್ಯಕ್ಷ ಮಹಾಲಿಂಗ ನಾಯ್ಕ ಗೊರ್ಕಲ್, ಜೇಸಿ ಸ್ಥಾಪಕಾಧ್ಯಕ್ಷ ದಿವಾಕರ ಶೆಟ್ಟಿ, ಜ್ಯೂನಿಯರ್ ಜೇಸಿ ಅಧ್ಯಕ್ಷ ರತನ್ ದೇವಾಡಿಗ ಉಪಸ್ಥಿತರಿದ್ದರು.
ಶಾಸಕ ಕೆ. ಗೋಪಾಲ ಪೂಜಾರಿ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ನರಸಿಂಹ ಹಳಗೇರಿ ಇವರನ್ನು ಸಮ್ಮಾನಿಸಲಾಯಿತು.ಉಪ್ಪುಂದ ಜೇಸಿ ಅಧ್ಯಕ್ಷ ಮಂಜುನಾಥ ದೇವಾಡಿಗ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸಪ್ತಾಹ ಸಭಾಪತಿ ಪ್ರಶಾಂತ್ ಪೂಜಾರಿ ವಂದಿಸಿದರು.