Advertisement

ಸಮೂಹ “ಸನ್ನಿ ಡ್ರೆಸ್‌’!

03:45 PM Apr 04, 2018 | Harsha Rao |

ಹಗುರವಾದ ಹತ್ತಿ ಬಟ್ಟೆಯಿಂದ ತಯಾರಿಸಲಾಗುವ “Sunny ಡ್ರೆಸ್‌’ ಬೇಸಿಗೆಯ ದಿನಗಳಿಗೆ ಮಾತ್ರ ಸೀಮಿತ. ವೆಕೇಷನ್‌ ಡ್ರೆಸ್‌ ಆಗಿರುವ ಕಾರಣ ಇವನ್ನು ಇಂಟರ್‌ವ್ಯೂಗೆ ಅಥವಾ ಶುಭ ಸಮಾರಂಭಗಳಿಗೆ ಹೋಗುವಾಗ ಧರಿಸುವಂತಿಲ್ಲ…

Advertisement

ಬೇಸಿಗೆಯಲ್ಲಿ ಮತ್ತು ಬೇಸಿಗೆಯÇÉೇ ಉಡಲು ಒಂದು ದಿರಿಸು ಇದೆ. ಅದೇ ಸನ್‌ ಡ್ರೆಸ್‌. ಹಗುರವಾದ ಬಟ್ಟೆಯಿಂದ ಮಾಡಲಾದ ಈ ಕ್ಯಾಶುವಲ್‌ ಉಡುಪು ಸೆಕೆಗಾಲದಲ್ಲಿ ತೊಡಲು ಉತ್ತಮ. ಹೆಚ್ಚಾಗಿ ಹತ್ತಿಯಿಂದ ಮಾಡಲಾಗುವ ಈ ದಿರಿಸು, ಸಿಕ್ಕಾಪಟ್ಟೆ ಸಡಿಲವಾಗಿರುತ್ತದೆ. ಇದಕ್ಕೆ ತೋಳುಗಳು ಇರುವುದಿಲ್ಲ, ಅಂದರೆ ಇವು ಸ್ಲಿàವ್‌ಲೆಸ್‌ ಆಗಿರುತ್ತವೆ. ಇವುಗಳಲ್ಲಿ ಆಫ್ ಶೋಲ್ಡರ್‌, ಕೋಲ್ಡ… ಶೋಲ್ಡರ್‌ ಮತ್ತು ಸ್ಪಗೆಟಿ (ನೂಡಲ್‌ ಸ್ಟ್ರಾಪ್‌) ಆಯ್ಕೆಗಳೂ ಲಭ್ಯ. ಇವುಗಳ ನೆಕ್‌ಲೈನ್‌ ಅಗಲ ಅಥವಾ ಡೀಪ್‌(ಆಳ) ಆಗಿರುತ್ತದೆ. ಇದರ ಜೊತೆ ಯಾವುದೇ ಮೇಲುಡುಪು, ಸ್ಕಾಫ್ì ಅಥವಾ ಕೋಟು ಧರಿಸಲಾಗುವುದಿಲ್ಲ. 1960ರಲ್ಲಿ ಫ್ಯಾಷನ್‌ ಡಿಸೈನರ್‌ ಲಿಲಿ ಪುಲಿಟlರ್‌, ಈ ಟ್ರೆಂಡ್‌ ಅನ್ನು ಶುರು ಮಾಡಿದ್ದರು. ಗಾಳಿ ಬೀಸುವಾಗ ಈ ದಿರಿಸನ್ನು ತೊಟ್ಟ ನಾಯಕಿ ಬಣ್ಣದ ಚಿಟ್ಟೆಯಂತೆ ಕಾಣುವುದನ್ನು ಛಾಯಾಗ್ರಾಹಕ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ದೃಶ್ಯವನ್ನು ನೋಡಿದ್ದು ನೆನೆಪಿದೆಯಾ? ಸಿನಿಮಾ ನಟಿಯರು ವಿದೇಶದಲ್ಲಿ ಬೀಚ್‌ ಅಥವಾ ನದಿ ಕಿನಾರೆಯಲ್ಲಿ ಚಿತ್ರೀಕರಿಸುವಾಗ ಇಂಥ ಸನ್‌ ಡ್ರೆಸ್‌ಗಳನ್ನೂ ತೊಟ್ಟಿರುವುದನ್ನು ನೀವು ಗಮನಿಸಿರುತ್ತೀರಾ.

ಈ ಉಡುಪಿನಲ್ಲಿ ಪ್ರತ್ಯೇಕ ರವಿಕೆ ಅಥವಾ ಲಂಗ ಇರುವುದಿಲ್ಲ. ಈ ಒನ್‌-ಪೀಸ್‌ ಉಡುಗೆ, ಅಂಗಿಗಿಂತ ಉದ್ದ ಮತ್ತು ಲಂಗಕ್ಕಿಂತ ಗಿಡ್ಡವಾಗಿರುತ್ತದೆ. ಇದಕ್ಕೆ ಯಾವುದೇ ಕಾಲರ್‌ ಇರುವುದಿಲ್ಲ. ಬದಲಿಗೆ ಭುಜಗಳ ಮೇಲೆ ಸ್ಟ್ರಾಪ್‌ಗ್ಳಿರುತ್ತವೆ. ಇವುಗಳಲ್ಲಿ ಬಗೆಬಗೆಯ ಆಯ್ಕೆಗಳಿವೆ. ಬೆನ್ನಿಗೆ ಜಿಪ್‌, ಕಂಕುಳಲ್ಲಿ (ಸೈಡ್‌ ಜಿಪ್‌) ಜಿಪ್‌, ಮುಂದೆ ಅಥವಾ ಹಿಂದೆ ಬಟನ್‌ (ಗುಂಡಿ)ಗಳು, ಬ್ಯಾಕ್‌ ಟೈ ಅಥವಾ ಸೊಂಟಕ್ಕೆ ಕಟ್ಟಿಕೊಳ್ಳಲು ಲಾಡಿ, ಇತ್ಯಾದಿ.

ಮಿಲಿಟರಿ ವಿನ್ಯಾಸ
ಸರಳವಾಗಿ ಹೇಳುವುದಾದರೆ ಇದು ಒಂದು ಫ್ರಾಕ್‌. ಚೆಕÕ… ಡಿಸೈನ್‌, ಫ್ಲೋರಲ್‌ ಪ್ರಿಂಟ್‌ ಅಂದರೆ ಹೂವಿನ ಆಕೃತಿಯುಳ್ಳ ವಿನ್ಯಾಸ ಮತ್ತು ಚಿತ್ರಗಳು, ಇಂಡಿಯನ್‌ ಪ್ರಿಂಟ್‌, ಅನಿಮಲ್‌ ಪ್ರಿಂಟ್‌, ಕ್ಲಾಸಿಕ್‌ ಕಪ್ಪು ಬಣ್ಣ, ಕ್ಯಾಮೊಫ್ಲಾಜ್‌ ಅಂದರೆ ಮಿಲಿಟರಿಯಲ್ಲಿ ತಮ್ಮನ್ನು ಮರೆಮಾಚಲು ಸೈನಿಕರು ಬಳಸುವ ಉಡುಪಿನ ಮಾದರಿಯ ಬಟ್ಟೆಯ ವಿನ್ಯಾಸ, ಲೇಸ್‌ ಹಾಗು ಪೇಸ್ಟಲ್‌ ಶೇvÕ… (ಬಳಪದ ಕಡ್ಡಿಯ ಬಣ್ಣ)ಗಳಲ್ಲೂ ಲಭ್ಯ. ಪಾರ್ಟಿ, ಪಿಕ್ನಿಕ್‌, ಸಿನಿಮಾ ಮತ್ತು ಶಾಪಿಂಗ್‌ಗೆ ಈ ಸನ್‌ ಡ್ರೆಸ್‌ ಅನ್ನು ತೊಡಬಹುದು. ಬಹುತೇಕ ಕಾಲೇಜುಗಳಲ್ಲಿ ಡ್ರೆಸ್‌ ಕೋಡ್‌ ಇರುವ ಕಾರಣ, ಈ ಸನ್‌ ಡ್ರೆಸ್‌ ಅನ್ನು ಕಾಲೇಜಿಗೆ ತೊಟ್ಟುಕೊಂಡು ಹೋಗುವಂತಿಲ್ಲ. ಈ ಉಡುಪಿನ ಜೊತೆ ಚಪ್ಪಲಿ, ಗ್ಲಾಡಿಯೇಟರ್ ಮತ್ತು ಇತರ ಓಪನ್‌ ಶೂಗಳು, ಬೂಟ್ಸ್‌, 
ಸ್ನೀಕರ್ಸ್‌ಗಳನ್ನು ಹಾಕಬಹುದು.

ವೆಕೇಷನ್‌ ದಿರಿಸು
ಈ ದಿರಿಸು ನೋಡಲೂ ಚೆನ್ನ, ತೊಡಲೂ ಉತ್ತಮ. ಸಡಿಲವಾಗಿರುವ ಕಾರಣ, ಈ ಸನ್‌ ಡ್ರೆಸ್‌ ಅತ್ಯಂತ ಆರಾಮದಾಯಕವಾಗಿರುತ್ತದೆ. ಹತ್ತಿಯಿಂದ ಮಾಡಲಾಗಿರುವ ಕಾರಣ, ಈ ದಿರಿಸು ಬೆವರನ್ನು ಹೀರಿಕೊಳ್ಳುತ್ತದೆ. ಆದ್ದರಿಂದ ಬೆವರು, ಬೆವರಿನ ವಾಸನೆ, ಸೆಕೆ ಗುಳ್ಳೆ ಅಥವಾ ಕಡಿತ ಶುರುವಾಗಬಹುದು ಎಂಬ ಚಿಂತೆ ಇಲ್ಲ! ಈ ಸನ್‌ ಡ್ರೆಸ್‌ ಜೊತೆ ಫ್ಯಾಷನ್‌ನ ರೂಪದಲ್ಲಿ ದೊಡ್ಡದಾದ ಟೊಪ್ಪಿಯನ್ನೂ ತೊಟ್ಟುಕೊಳ್ಳಬಹುದು. ಆದರೆ ನೆನಪಿರಲಿ, ಇವು ವೆಕೇಷನ್‌ ಡ್ರೆಸ್‌ ಆಗಿರುವ ಕಾರಣ ಇವನ್ನು ಇಂಟರ್‌ವ್ಯೂ (ಸಂದರ್ಶನ) ಅಥವಾ ಔಪಚಾರಿಕ ಮತ್ತು ಶುಭಸಮಾರಂಭಗಳಿಗೆ ತೊಡಬಾರದು.

Advertisement

-ಅದಿತಿಮಾನಸ ಟಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next