Advertisement

ದಿನಪತ್ರಿಕೆಗಳು, ಹಾಲು ವಿತರಕರಿಗೆ ಗುಂಪು ವಿಮೆ

12:54 AM Apr 21, 2020 | Sriram |

ಬೆಂಗಳೂರು: ದಿನಪತ್ರಿಕೆಗಳು ಮತ್ತು ಹಾಲು ವಿತರಿಸುವವರಿಗೆ “ಗುಂಪು ಆರೋಗ್ಯ ವಿಮೆ’ ಭಾಗ್ಯ ಸಿಕ್ಕಿದೆ. ದಿನಪತ್ರಿಕೆ ಮತ್ತು ಹಾಲು ವಿತರಿಸುವ ಹುಡುಗರಿಗೆ ಈ ಯೋಜನೆ ಇರಲಿದ್ದು 70 ಲಕ್ಷ ರೂ. ಮೀಸಲಿಡಲಾಗಿದೆ ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್‌. ಶ್ರೀನಿವಾಸ್‌ ಹೇಳಿದರು.

Advertisement

ಕನ್ನಡ ಪತ್ರಿಕೋದ್ಯಮ ಉಳಿಸಿ ಬೆಳೆಸುವ ಉದ್ದೇಶದಿಂದ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸಾರವಾಗುವ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು, ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ ಪತ್ರಿಕೆಗಳನ್ನು ಜನರಿಗೆ ತಲುಪಿಸಲು ಹಾಗೂ ಅವುಗಳನ್ನು ಉತ್ತೇಜಿಸಲು ಪ್ರತಿ ವಾರ್ಡ್‌ನ ಆಯ್ದ ಸ್ಥಳಗಳಲ್ಲಿ ಒಂದು ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ 1 ಕೋಟಿ ರೂ. ಮೀಸಲಿಡಲಾಗಿದೆ.

ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಪತ್ರಕರ್ತರಿಗೆ ಆರೋಗ್ಯ ದೃಷ್ಟಿಯಿಂದ ನೆರವಾಗಲು 15 ಲಕ್ಷ ರೂ. ಅನುದಾನದಲ್ಲಿ
“ಅಪಘಾತ ವಿಮೆ’ ಜಾರಿಗೆ ತರಲಾಗುವುದು. ಅದೇ ರೀತಿ ಪಾಲಿಕೆ ಮಾಹಿತಿ ವರದಿ ಮಾಡುವ ಮಾಧ್ಯಮ ವರದಿಗಾರರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಮೇಯರ್‌ ವಿವೇಚನೆ ಅಡಿ ಅನುದಾನ ನೀಡಲು 1 ಕೋಟಿ ರೂ. ಅನುದಾನ ಒದಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next