ಬೆಳ್ಮಣ್: ನೀರಿನ ಅಭಾವ ಮುಂದಿನ ದಿನಗಳಲ್ಲಿ ಅತಿಯಾಗಿ ಬಾಧಿಸಲಿದ್ದು ಅಂತರ್ಜಲ ಆಭಿಯಾನ ಎಲ್ಲೆಡೆ ನಡೆಯಬೇಕಾಗಿದೆ ಎಂದು ಲಯನ್ ಜಿಲ್ಲೆ ನಿಯೋಜಿತ ಗವರ್ನರ್ ಎನ್.ಎಂ. ಹೆಗಡೆ ಹೇಳಿದರು.
ಬೆಳ್ಮಣ್ ಪವಿತ್ರ ನಗರದ ಟೋನಿ ಡಿಕ್ರೂಸ್ ಅವರ ಮನೆಯಲ್ಲಿ ಬೆಳ್ಮಣ್ ವಲಯ ಪತ್ರಕರ್ತರ ಬಳಗ ಹಾಗೂ ಜೇಸಿಐನ ಸಹಭಾಗಿತ್ವದಲ್ಲಿ ನಡೆದ ಅತರ್ಜಲ ಅಭಿಯಾನದಲ್ಲಿ ಅವರು ಮಾತನಾಡಿದರು.
ಟೋನಿ ಅವರು ಸುಮಾರು 20 ವರ್ಷಗಳ ಹಿಂದೆಯೇ ಈ ಪರಿಕಲ್ಪನೆ ಪ್ರಾರಂಭಿಸಿದ್ದು ಈ ವರ್ಷ ತಮ್ಮ ಹೊಸ ಬೋರ್‌ವೆಲ್ನಲ್ಲಿ ಸುಮಾರು 60,000 ರೂ. ವ್ಯಯಿಸಿ ಜಲಮರುಪೂರಣ ವ್ಯವಸ್ಥೆ ನಡೆಸಿದ್ದರು.
ಈ ವಿಶೇಷ ಜಲಸಮೃದ್ಧಿ ಕಾಮಗಾರಿ ಯನ್ನು ಕಾಂಜರಕಟ್ಟೆ ದೀಪಕ್ ಕಾಮತ್‌ಅವರು ಸಂಘಟಿಸಿದ್ದು ತಾಲೂಕು ಪಂಚಾಯತ್ ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ ಉದ್ಘಾಟಿಸಿದರು.
ಟೋನಿ ಡಿಕ್ರೂಸ್, ಜೇಸಿಐ ಅಧ್ಯಕ್ಷೆ ಶೆ್ವೇತಾ ಸುಭಾಶ್, ಪ್ರದೀಪ್, ರವಿರಾಜ್ ಶೆಟ್ಟಿ, ರಘುನಾಥ ನಾಯಕ್, ಸುಭಾಸ್ ನಂದಳಿಕೆ ಹಾಗೂ ಬೆಳ್ಮಣ್ ವಲಯದ ಪತ್ರಕರ್ತರು ಉಪಸ್ಥಿತರಿದ್ದರು. ದೀಪಕ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.